ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪದ್ಮರಾಜ್ ರಾಮಯ್ಯ ಫೇವರಿಟ್..!! – ಬಂಟ vs ಬಿಲ್ಲವ ನಾಯಕರ ನೇರ ಹಣಾಹಣಿಯಲ್ಲಿ ಗೆಲುವಿನ ಲೆಕ್ಕಾಚಾರ ಹೇಗೆ? – ಬಿಲ್ಲವ ಮತವೇ ಇಲ್ಲಿ ನಿರ್ಣಾಯಕ : ಬಿಜೆಪಿಗೆ‌ ಠಕ್ಕರ್ ಕೊಡೋಕೆ ಪದ್ಮರಾಜ್ ಸಜ್ಜು..!!

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪದ್ಮರಾಜ್ ರಾಮಯ್ಯ ಫೇವರಿಟ್..!! – ಬಂಟ vs ಬಿಲ್ಲವ ನಾಯಕರ ನೇರ ಹಣಾಹಣಿಯಲ್ಲಿ ಗೆಲುವಿನ ಲೆಕ್ಕಾಚಾರ ಹೇಗೆ? – ಬಿಲ್ಲವ ಮತವೇ ಇಲ್ಲಿ ನಿರ್ಣಾಯಕ : ಬಿಜೆಪಿಗೆ‌ ಠಕ್ಕರ್ ಕೊಡೋಕೆ ಪದ್ಮರಾಜ್ ಸಜ್ಜು..!!

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರ ಆರಂಭಿಸಿವೆ. ಇತ್ತ ಕರಾವಳಿ ನಗರಿ ಮಂಗಳೂರು ಒಳಗೊಂಡಂತೆ ಇರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, 1991 ರ ಬಳಿಕ ಇಲ್ಲಿ ಕಾಂಗ್ರೆಸ್ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಾರಿ ಬಂಟ ವರ್ಸಸ್ ಬಿಲ್ಲವ ಚುನಾವಣೆ ನಡೆಯಲಿದ್ದು, ಕುತೂಹಲ ಕೆರಳಿಸಿದೆ.

ಜಾತಿ ರಾಜಕಾರಣಕ್ಕೆ ಸಾಕ್ಷಿಯಾಗುತ್ತಾ ಕರಾವಳಿ?

ಹೇಳಿಕೇಳಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಲ್ಲವ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರ. ಆದರೆ ಇಲ್ಲಿ ಇತ್ತೀಚಿನ ಚುನಾವಣೆಗಳ ಸಂಸದರಾಗಿರೋದು ಮಾತ್ರ ಬಂಟ ಸಮುದಾಯದ ಅಭ್ಯರ್ಥಿ. ಸಂಘಪರಿವಾರದ ಪ್ರಯೋಗಶಾಲೆ ಎನಿಸಿಕೊಂಡಿರುವ ಕರಾವಳಿಯಲ್ಲಿ ಬಿಲ್ಲವ ಯುವಕರೇ ಸಂಘಟನೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದರೂ ಬಿಜೆಪಿ ಪಕ್ಷವು ಯಾರನ್ನೂ ಕೂಡ ಅತಿಯಾಗಿ ಬೆಳೆಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತೀವಾರು ಸಂಘಟನೆಗಳ ಆಧಾರಿತವಾಗಿ ಬಿಲ್ಲವ ಸಂಘಟನೆಗಳೇ ಪ್ರಬಲವಾಗಿದ್ದರೂ ಇಲ್ಲಿ ಒಬ್ಬನೇ ಒಬ್ಬ ಬಿಲ್ಲವ ಶಾಸಕನಿಲ್ಲ. ಕೇವಲ ಬಿಜೆಪಿ ಪಕ್ಷದಲ್ಲಿ ಮಂಡಲಗಳ ಅಧ್ಯಕ್ಷಗಾದಿಗೆ ಏರುವ ಬಿಲ್ಲವರು ಬಳಿಕ ತೆರೆಮರೆಗೆ ಸರಿಯೋದು ವಾಡಿಕೆಯಂತೆ ಕಂಡರೂ ಶಾಸಕನಾಗಿ ಆಗಲಿ, ಸಂಸದನಾಗಿ ಆಗಲಿ ಬಿಲ್ಲವರ ಆಯ್ಕೆ ಇಲ್ಲಿನ ರಾಜಕೀಯ ಗೋಜಲು, ಇಲ್ಲಿ ಬಿಲ್ಲವ ಯುವಕರನ್ನು ನಾಯಕರಾಗುವ ಮಟ್ಟಿಗೆ ಬೆಳೆಸಿಲ್ಲ ಅನ್ನೋದು ಸ್ಥಳೀಯರ ವಾದ..

ಅತ್ತ ಕಾಂಗ್ರೆಸ್ ನಿಂದ ಜನಾರ್ಧನ ಪೂಜಾರಿ ಸಂಸದನಾಗಿದ್ದು ಬಿಟ್ಟರೆ ಬಿಜೆಪಿ ಇದುವರೆಗೂ ಬಿಲ್ಲವ ಯುವಕನಿಗೆ ಎಂಪಿ ಟಿಕೆಟ್ ಕೊಟ್ಟಿಲ್ಲ‌. ಅಷ್ಟೇ ಏಕೆ ಕನಿಷ್ಠ ಶಾಸಕನಾಗಲೂ ಅವಕಾಶ ಕೊಟ್ಟಿಲ್ಲ. ಆದರೆ ಬಿಜೆಪಿ ಪಕ್ಷಕ್ಕಾಗಿ ದುಡಿಯುವ ಯುವಕರು ಮಾತ್ರ ಬಿಲ್ಲವರು.‌ ಇದರಿಂದಲೇ ರೋಸಿ ಹೋದ ಸತ್ಯಜಿತ್‌ ಸುರತ್ಕಲ್ ಬಿಜೆಪಿ ವಿರುದ್ಧವೇ ತಿರುಗಿಬಿದ್ದಿರುವುದು ಈಗ ಇತಿಹಾಸ. ಪ್ರಬಲ ಹಿಂದೂ ಮುಖಂಡರಾಗಿದ್ದ ಸತ್ಯಜಿತ್‌ ಸುರತ್ಕಲ್ ಯಾವಾಗಲೋ ಶಾಸಕ ಇಲ್ಲವೇ ಸಂಸದರಾಗಬೇಕಿತ್ತು. ಆದರೆ ಅವರನ್ನೇ ಬಿಜೆಪಿ ಪಕ್ಷದಿಂದ ಮೂಲೆಗುಂಪು ಮಾಡುವ ಪ್ರಯತ್ನದಲ್ಲಿ ಕಾಣದ ಕೈಗಳು ಕೆಲಸ ಮಾಡಿದ್ದು ಮತ್ತು ಅವರು ಸಿಟ್ಟಿಗೆದ್ದು ಪಕ್ಷದ ವಿರುದ್ಧ ತಿರುಗಿ ಬಿದ್ದ ಬಳಿಕ ಅವರನ್ನು ವಿಲನ್ ಮಾಡುವ ಪ್ರಯತ್ನದಲ್ಲಿ ಬಿಜೆಪಿಯ ಹಿರಿತಲೆಗಳು ಯಶಸ್ಸು ಕಂಡಿದ್ದು ನಿಜ.

ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಹೆಸರು ಅಂತಿಮಗೊಳ್ಳುತ್ತಲೇ ಬಿಲ್ಲವ ಸಮುದಾಯದ ಕೆಲವಷ್ಟು ಸಂಘಟನೆಗಳು ತೆರೆಮರೆಯಲ್ಲಿ ರಾಜಕಾರಣಕ್ಕೆ ಧುಮುಕಿರುವ ಬಗ್ಗೆ ಗುಸುಗುಸು ಆರಂಭವಾಗಿದೆ. ಶತಾಯಗತಾಯ ಪ್ರಯತ್ನಕ್ಕೆ ಈ ಬಾರಿಯಾದರೂ ಜಿಲ್ಲೆಯಲ್ಲಿ ನಮ್ಮದೇ ಸಮುದಾಯದ ವ್ಯಕ್ತಿ ಸಂಸದನಾಗಬೇಕು ಎಂದು ಬಯಸಿರುವ ಹಲವು ಯುವಕರೂ ಕೂಡ ಪದ್ಮರಾಜ್ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.

ಅತ್ತ ಮೋದಿ ಹವಾ ಹೆಚ್ಚಾಗಿದ್ದರೂ ಪದ್ಮರಾಜ್ ಪರ ಯುವಕರು ವೋಟ್ ಕೇಳಲು ಇನ್ನೊಂದು ಕಾರಣ ನಳಿನ್ ಕುಮಾರ್ ಮೇಲಿದ್ದ ಅಸಹನೆ. ಮೂರು ಬಾರಿ ಸಂಸದರಾಗಿದ್ದರೂ ಬಿಲ್ಲವ ಸಮುದಾಯದ ಯುವಕರನ್ನು ಬೆಳೆಸುವಲ್ಲಿ ನಳಿನ್ ವಿಫಲರಾಗಿದ್ದಲ್ಲದೇ ತಮ್ಮದೇ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಆರೋಪವೂ ಇದೆ. ಸಾಮಾನ್ಯ ಕಾರ್ಯಕರ್ತರಿಗೆ ಬೆಲೆ ಕೊಡದೇ ಕೇವಲ ತನ್ನದೇ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡಿಸಿದ ನಳಿನ್ ಕುಮಾರ್ ಅವರಿಗೆ ತಕ್ಕ ಶಾಸ್ತಿ ಮಾಡಲು ಬಿಲ್ಲವ ಯುವಪಡೆ ಸಜ್ಜಾಗಿ ನಿಂತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೆಡೆ ಚರ್ಚೆ ಆರಂಭವಾಗಿದೆ.

ಬಿಲ್ಲವರ ಮತವೇ ನಿರ್ಣಾಯಕ..!!

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕಳೆದ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ನಳಿನ್ ಗೆಲ್ಲಲು ಕಾರಣವಾಗಿದ್ದು ಬಿಲ್ಲವ ಸಮುದಾಯದ ಮತಗಳು‌. ಈ ಬಾರಿ ಬಿಲ್ಲವ ಮತಗಳು ಪದ್ಮರಾಜ್ ಅವರತ್ತ ಹೊರಳಿದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು ಕಷ್ಟವೇನಲ್ಲ. ಇದೇ ಪ್ಲ್ಯಾನ್ ನ ಆಧಾರದ ಮೇಲೆ ಸರಳ ಸಜ್ಜನ ವ್ಯಕ್ತಿಯಾಗಿರುವ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ಪದ್ಮರಾಜ್ ಗೆಲುವಿನ ಕುರಿತು ಲೆಕ್ಕಾಚಾರಗಳು ಆರಂಭವಾಗಿವೆ.

ಗೆಲ್ಲುವ ಕುದುರೆಯಾಗ್ತಾರಾ ಪದ್ಮರಾಜ್?

ನಿಷ್ಕಳಂಕ ರಾಜಕಾರಣಿ ಜನಾರ್ಧನ ಪೂಜಾರಿ ಅವರ ಪಟ್ಟ ಶಿಷ್ಯರಾಗಿರುವ ಪದ್ಮರಾಜ್ ಈಗಾಗಲೇ ಸಾರ್ವಜನಿಕ ಜೀವನದಲ್ಲಿ ಹತ್ತು ಹಲವು ವಿಚಾರಗಳಲ್ಲಿ ಮತದಾರರಿಗೆ ಪರಿಚಿತರು. ಪಕ್ಷಾತೀತವಾಗಿ ಮೆಚ್ಚಬಲ್ಲ ಪ್ರಬುದ್ಧ ಯುವ ನಾಯಕನಾಗಿ ಬೆಳೆದಿರುವ ಪದ್ಮರಾಜ್ ನ್ಯಾಯವಾದಿಯೂ ಆಗಿದ್ದು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಮಿತಿ ಕೋಶಾಧಿಕಾರಿ ಆಗಿದ್ದಾರೆ.

ಪದ್ಮರಾಜ್ ಪರಿಚಯ ಹೀಗಿದೆ…

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಮಂಗಳೂರು ಮೂಲದ ಎಚ್.ಎಂ ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್, ಅವರ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ ಪದವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು.

1995 ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದರು. ಬಳಿಕ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್‌ನ ಸದಸ್ಯರಾದರು.

25 ವರ್ಷಗಳಿಂದ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿರುವ ಬಿ ಜನಾರ್ದನ ಪೂಜಾರಿಯವರ ನೆರಳಿನಲ್ಲಿ ಅರಳಿದ ಯುವ ನೇತಾರ ಪದ್ಮರಾಜ್ ಎಲ್ಲರಿಗೂ ಅಚ್ಚುಮೆಚ್ಚು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿದ್ದಾರೆ. ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾಪನ ಬೆಂಗಳೂರು ಇದರ ದ.ಕ. ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಮೂಲಕ ಗಮನ ಸೆಳೆದರು. ಕುಕ್ಕರ್‌ ಬಾಂಬ್ ಸ್ಪೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರಿಗೆ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸಿದ ವಿಚಾರವೂ ಸೇರಿದಂತೆ ಬಡವರಿಗೆ ಜಾತಿಮತದ ತಾರತಮ್ಯ ನೋಡದೆ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಡುವ ಮೂಲಕ ಪದ್ಮರಾಜ್ ಗಮನ ಸೆಳೆದಿದ್ದಾರೆ. ಗುರುಬೆಳದಿಂಗಳು ಫೌಂಡೇಶನ್ ಮೂಲಕ ಆರೋಗ್ಯ, ಆಸರೆ, ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬಡವರ ಸೇವೆಗೆ ವಿನಿಯೋಗಿಸಿದ್ದಾರೆ.

Related post

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ…

Leave a Reply

Your email address will not be published. Required fields are marked *