IND vs AFG : ಇಂದಿನಿಂದ ಟೀಂ ಇಂಡಿಯಾ- ಅಫ್ಘಾನಿಸ್ತಾನ ಚುಟುಕು ಕ್ರಿಕೆಟ್ ಸರಣಿ – ನೇರಪ್ರಸಾರ ವೀಕ್ಷಣೆ ಹೇಗೆ? ತಂಡಗಳು ಹೇಗಿವೆ?

IND vs AFG : ಇಂದಿನಿಂದ ಟೀಂ ಇಂಡಿಯಾ- ಅಫ್ಘಾನಿಸ್ತಾನ ಚುಟುಕು ಕ್ರಿಕೆಟ್ ಸರಣಿ – ನೇರಪ್ರಸಾರ ವೀಕ್ಷಣೆ ಹೇಗೆ? ತಂಡಗಳು ಹೇಗಿವೆ?

ನ್ಯೂಸ್ ಆ್ಯರೋ : ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಟಿ ಟ್ವೆಂಟಿ ಮುಖಾಮುಖಿ ನಡೆಯಲಿದೆ. ನಾಯಕ ರೋಹಿತ್​ ಶರ್ಮ 14 ತಿಂಗಳ ಬಳಿಕ ಟಿ20ಯಲ್ಲಿ ಭಾರತದ ಸಾರಥ್ಯ ವಹಿಸಿಕೊಳ್ಳಲಿದ್ದರೆ, ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಗೈರಿನಲ್ಲಿ ಮೊದಲ ಪಂದ್ಯ ಸಾಗಿಬರಲಿದೆ.

ಜೂನ್​ನಲ್ಲಿ ಅಮೆರಿಕ-ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್​ ನಡೆಯಲಿದ್ದು, ಅದಕ್ಕೆ ಮುನ್ನ ಐಪಿಎಲ್​ 17ನೇ ಆವೃತ್ತಿಯೇ ಭಾರತೀಯ ಟಿ20 ಅಭ್ಯಾಸಕ್ಕೆ ಪ್ರಮುಖ ವೇದಿಕೆಯಾಗಿದೆ. ಅದಕ್ಕೆ ಮುನ್ನ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದೆ. ಹೀಗಾಗಿ ಭಾರತ ತಂಡದ ಪರ ಆಟಗಾರರ ಟಿ20 ಕೌಶಲ ಪರಿಶೀಲಿಸಲು ಇದೇ ಕೊನೇ ಅವಕಾಶವೆನಿಸಿದೆ.

ಭಾರತದಲ್ಲೇ ನಡೆದ ಕಳೆದ ಏಕದಿನ ವಿಶ್ವಕಪ್ನಲ್ಲಿ ಆಫ್ಘನ್ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂಥ ಬಲಿಷ್ಠ ತಂಡಗಳನ್ನು ಮಣಿಸಿ ಗಮನಸೆಳೆದಿತ್ತು. ಚುಟುಕು ಕ್ರಿಕೆಟ್ನಲ್ಲಿ ಆಫ್ಘನ್ ತಂಡ ಇನ್ನಷ್ಟು ಹೆಚ್ಚಿನ ಅನುಭವ ಹೊಂದಿದೆ. ಹೀಗಾಗಿ ಭಾರತ ತಂಡ ಲಘುವಾಗಿ ಪರಿಗಣಿಸಿದರೆ ಅಪಾಯದ ಭೀತಿ ಇದೆ.

ರೋಹಿತ್​, ಕೊಹ್ಲಿ 2022ರ ನವೆಂಬರ್​ನಲ್ಲಿ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಹೊರಬಿದ್ದ ಬಳಿಕ ಭಾರತ ಪರ ಯಾವುದೇ ಚುಟುಕು ಕ್ರಿಕೆಟ್​ ಪಂದ್ಯ ಆಡಿರಲಿಲ್ಲ. ಇದರಿಂದಾಗಿ ಭಾರತ ಪರ ಅವರಿಬ್ಬರ ಟಿ20 ಕ್ರಿಕೆಟ್​ ಜೀವನ ಮುಗಿದೇ ಹೋಯಿತೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಇದೀಗ ಆಫ್ಘನ್​​ ವಿರುದ್ಧ ಸರಣಿಗೆ ಅವರಿಬ್ಬರು ಸ್ಥಾನ ಪಡೆಯುವುದರೊಂದಿಗೆ, ಮುಂಬರುವ ಟಿ20 ವಿಶ್ವಕಪ್​ನಲ್ಲೂ ಅವರಿಬ್ಬರು ಕಣಕ್ಕಿಳಿಯುವ ನಿರೀೆ ಹೆಚ್ಚಾಗಿದೆ. ಹೀಗಾಗಿ ಅವರಿಬ್ಬರಿಗೆ ಈ ಸರಣಿ ಟಿ20 ವಿಶ್ವಕಪ್​ಗೆ ಆಯ್ಕೆ ಟ್ರಯಲ್ಸ್​ ಎಂದೂ ಬಣ್ಣಿಸಲಾಗುತ್ತಿದೆ.

ಪ್ರವಾಸಿ ಅಫ್ಘಾನಿಸ್ತಾನ ತಂಡಕ್ಕೆ ಸರಣಿ ಆರಂಭಕ್ಕೆ ಮುನ್ನವೇ ಆಘಾತವೊಂದು ಎದುರಾಗಿದ್ದು, ಪ್ರಮುಖ ಸ್ಪಿನ್ನರ್​ ರಶೀದ್​ ಖಾನ್​ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದಿರುವ ಕಾರಣದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಕಳೆದ ಏಕದಿನ ವಿಶ್ವಕಪ್​ ಬೆನ್ನಲ್ಲೇ ನವೆಂಬರ್​ನಲ್ಲಿ ರಶೀದ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸರಣಿಗೆ ಮುನ್ನ ಅವರು ಫಿಟ್​ ಆಗುವ ನಿರೀಕ್ಷೆಯೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿನ್ನೂ ಫಿಟ್​ ಆಗಿಲ್ಲ. ಅವರಿಲ್ಲದೆಯೂ ಯಾವುದೇ ಸವಾಲನ್ನು ಎದುರಿಸಲು ತಂಡ ಸಿದ್ಧವಾಗಿದೆ ಎಂದು ಆಫ್ಘನ್​​ ನಾಯಕ ಇಬ್ರಾಹಿಂ ಜದ್ರಾನ್​ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದಿನ ಪಂದ್ಯವು ರಾತ್ರಿ 7.00 ಗಂಟೆಗೆ ಆರಂಭವಾಗಲಿದ್ದು, ಸ್ಪೋರ್ಟ್ಸ್​18, ಜಿಯೋಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮ, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮ (ವಿ.ಕೀ), ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಆವೇಶ್ ಖಾನ್, ಮುಕೇಶ್ ಕುಮಾರ್, ಅರ್ಷದೀಪ್ ಸಿಂಗ್.

ಸಂಭಾವ್ಯ ತಂಡ: ಹಜ್ರಾತುಲ್ಲಾ ಜಜೈ, ರಹಮಾನ್ಉಲ್ಲಾ ಗುರ್ಬಜ್ (ವಿ.ಕೀ), ಇಬ್ರಾಹಿಂ ಜದ್ರಾನ್ (ನಾಯಕ), ಅಜ್ಮತ್ಉಲ್ಲಾ ಒಮರ್ಜಾಯಿ, ನಜಿಬುಲ್ಲಾ ಜದ್ರಾನ್, ಮೊಹಮದ್ ನಬಿ, ಗುಲ್ಬಾದಿನ್ ನೈಬ್/ಕರೀಂ ಜನತ್, ಮುಜೀಬ್ ಉರ್ ರೆಹಮಾನ್, ಕೈಸ್ ಅಹ್ಮದ್, ನವೀನ್ ಉಲ್ ಹಕ್, ಝಲ್ಲಾಕ್ ಫಾರೂಖಿ.

Related post

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ ಆಗಿದೆ. ಬಳಕೆದಾರರಿಗೆ ಪ್ರತಿದಿನ…
ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ…

ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ ಮಾರ್ಗವಾಗಿದೆ. ಸೌತೆಕಾಯಿಗಳು ಉರಿಯೂತದ ಗುಣಲಕ್ಷಣಗಳನ್ನು…
SSCL RESULTS 2024 : ನಾಳೆಯೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ – 10:30 ರ ನಂತರ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ..

SSCL RESULTS 2024 : ನಾಳೆಯೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ –…

ನ್ಯೂಸ್ ಆ್ಯರೋ : ಕರ್ನಾಟಕ ರಾಜ್ಯದ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ. ರಾಜ್ಯಾದ್ಯಂತ 10…

Leave a Reply

Your email address will not be published. Required fields are marked *