ಗುಡ್ ನ್ಯೂಸ್ : ನೆಟ್ ಫ್ಲಿಕ್ಸ್ ಗೆ ಇನ್ಮುಂದೆ ಹಣ ಕಟ್ಟಬೇಕಿಲ್ಲ – ಏರ್ಟೆಲ್ ನಿಂದ ಬಂತು ಹೊಸ ಪ್ರಿಪೇಯ್ಡ್ ಪ್ಲಾನ್….!

ಗುಡ್ ನ್ಯೂಸ್ : ನೆಟ್ ಫ್ಲಿಕ್ಸ್ ಗೆ ಇನ್ಮುಂದೆ ಹಣ ಕಟ್ಟಬೇಕಿಲ್ಲ – ಏರ್ಟೆಲ್ ನಿಂದ ಬಂತು ಹೊಸ ಪ್ರಿಪೇಯ್ಡ್ ಪ್ಲಾನ್….!

ನ್ಯೂಸ್ ಆ್ಯರೋ : ಇಲ್ಲಿಯವರೆಗೆ ನೆಟ್ಫ್ಲಿಕ್ಸ್ ಗೆಂದೇ ವಿಶೇಷವಾಗಿ ಹಣ ಪಾವತಿಸಬೇಕಿತ್ತು. ಆದರೆ ಸಿನಿಮಾ, ವೆಬ್ ಸಿರೀಸ್ ಹುಚ್ಚು ಜಾಸ್ತಿ ಇರುವವರು ಆರಾಮವಾಗಿ ಇದರಲ್ಲಿ ಹಣ ಕಟ್ಟಿ ವೀಕ್ಷಿಸುತ್ತಿದ್ದರು. ಆದರೆ ಇನ್ಮುಂದೆ ಚಿಂತೆಯಿಲ್ಲ ಬಿಡಿ. ಏರ್ಟೆಲ್ ನಿಂದ ಹೊಸ ಪ್ರಿಪೇಯ್ಡ್ ಪ್ಲಾನ್ ಒಂದು ಜಾರಿಯಾಗಲಿದೆ.

ನೀವು ಪ್ರತಿ ತಿಂಗಳು ನೆಟ್‌ಫ್ಲಿಕ್ಸ್ (Netflix) ಚಂದಾದಾರಿಕೆಯನ್ನು ಖರೀದಿಸಿ ವೀಕ್ಷಿಸುವವರಾಗಿದ್ದರೆ ಇಲ್ಲೊಂದು ಶುಭಸುದ್ದಿಯಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಗೆ ಈಗ ನಿಮ್ಮ ವೆಚ್ಚ ಮತ್ತಷ್ಟು ಕಡಿಮೆಯಾಗಲಿವೆ. ಏಕೆಂದರೆ ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ತಂದಿದೆ.

ಇದು ಡೇಟಾ, ಕರೆ ಮತ್ತು SMS ಪ್ರಯೋಜನಗಳನ್ನು ಹೊರತುಪಡಿಸಿ, ಉಚಿತ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ನೀಡುತ್ತದೆ. ಈ ಯೋಜನೆಯ ಬೆಲೆ 1499 ರೂ. ಏರ್​ಟೆಲ್​ನ ಈ ಹೊಸ ಪ್ರಿಪೇಯ್ಡ್ ಯೋಜನೆ ನೆಟ್‌ಫ್ಲಿಕ್ಸ್ ಹೊರತುಪಡಿಸಿ, ರೂ. 1499 ಪ್ಲಾನ್‌ನೊಂದಿಗೆ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ? ಎಷ್ಟು ಸಮಯದ ವ್ಯಾಲಿಡಿಟಿ? ಈ ಕುರಿತ ಮಾಹಿತಿ ಇಲ್ಲಿದೆ.

ಏರ್‌ಟೆಲ್ 1499 ರೂ. ಯೋಜನೆ ವಿವರಗಳು:

ಏರ್‌ಟೆಲ್​ನ 1499 ರೂ. ಯೋಜನೆಯಲ್ಲಿ ನೀವು ಪ್ರತಿದಿನ 3 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ, ಇದರೊಂದಿಗೆ ಅನಿಯಮಿತ ಉಚಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ಪಡೆಯಬಹುದು. 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಡೇಟಾ, ಕರೆ ಮತ್ತು ಎಸ್‌ಎಂಎಸ್‌ಗಳ ಹೊರತಾಗಿ, ಈ ಪ್ಲಾನ್‌ನೊಂದಿಗೆ ನೀವು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು.

ನೀವು OTT ಪ್ರೇಮಿಯಾಗಿದ್ದರೆ ಈ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇದಲ್ಲದೆ, ನೀವು 5G ಸ್ಮಾರ್ಟ್‌ಫೋನ್ ಹೊಂದಿದ್ದರೆ ಮತ್ತು ನೀವು ಏರ್‌ಟೆಲ್‌ನ 5G ಸೇವೆಗಳು ಲಭ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಈ ಯೋಜನೆಯೊಂದಿಗೆ ಅನಿಯಮಿತ 5G ಡೇಟಾವನ್ನು ಉಪಯೋಗಿಸಬಹುದು.

ಈ ಯೋಜನೆಯು ನಿಮಗೆ Apollo 24/7 ವಲಯ ಸದಸ್ಯತ್ವವನ್ನು ಮತ್ತು Wynk ಸಂಗೀತಕ್ಕೆ ಉಚಿತ ಪ್ರವೇಶವನ್ನು ಕೂಡ ನೀಡುತ್ತದೆ. ನೆಟ್‌ಫ್ಲಿಕ್ಸ್’ನ ಮೂಲ ಚಂದಾದಾರಿಕೆ ಯೋಜನೆಯ ಮಾಸಿಕ ಬೆಲೆ ರೂ. 199 ಆಗಿದೆ. ಇಲ್ಲಿ ನೀವು ಏರ್​ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ನೆಟ್‌ಫ್ಲಿಕ್ಸ್ ಪ್ರಯೋಜನಗಳನ್ನು ಪಡೆಯಬಹುದು.

ಅಪ್ಲಿಕೇಶನ್‌ನ, ಡಿಸ್ಕವರ್ ಥ್ಯಾಂಕ್ಸ್ ಬೆನಿಫಿಟ್ ಪುಟದಲ್ಲಿ ನೆಟ್‌ಫ್ಲಿಕ್ಸ್ ಬೆನಿಫಿಟ್ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಕ್ಲೈಮ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಈ ಯೋಜನೆಯೊಂದಿಗೆ ಲಭ್ಯವಿರುವ ನೆಟ್‌ಫ್ಲಿಕ್ಸ್ ಪ್ರಯೋಜನವು 84 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಅಂತೂ ನೆಟ್ಫ್ಲಿಕ್ಸ್ ನ್ನು ಅತಿಯಾಗಿ ನೋಡುವ ಜನರಿಗೆ ಏರ್ಟೆಲ್ ನ ಈ ಯೋಜನೆ ಅತ್ಯಂತ ಉತ್ತಮವಾಗಿ ಪೂರಕವಾಗಬಹುದು.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *