ಮುಜರಾಯಿ ಇಲಾಖೆಯಲ್ಲಿ ವೃದ್ಧ ಅರ್ಚಕರು ಸೇವೆ ಸಲ್ಲಿಸುತ್ತಿದ್ದರೆ ಅವರ ಮಕ್ಕಳಿಗೆ ಹುದ್ದೆ – ಸರ್ಕಾರದ ಹೊಸ ಆದೇಶದಲ್ಲಿ ಏನಿದೆ…?

ಮುಜರಾಯಿ ಇಲಾಖೆಯಲ್ಲಿ ವೃದ್ಧ ಅರ್ಚಕರು ಸೇವೆ ಸಲ್ಲಿಸುತ್ತಿದ್ದರೆ ಅವರ ಮಕ್ಕಳಿಗೆ ಹುದ್ದೆ – ಸರ್ಕಾರದ ಹೊಸ ಆದೇಶದಲ್ಲಿ ಏನಿದೆ…?

ನ್ಯೂಸ್ ಆ್ಯರೋ : ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ವಿವಿಧ ರೀತಿಯ ಕಾನೂನುಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಇದೀಗ ಮುಜರಾಯಿ ಇಲಾಖೆಗೆ ಸಂಬಂಧಿಸಿ ಮಹತ್ತರ ಆದೇಶವೊಂದನ್ನು ಹೊರಡಿಸಿದೆ.

ಮುಜರಾಯಿ ಇಲಾಖೆಯ C ಗ್ರೇಡ್‌ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಗೆ ವಯಸ್ಸಾಗಿದ್ದರೇ ಅಥವಾ ಅನಾರೋಗ್ಯಪೀಡಿತರಾಗಿ ಸೇವೆ ಸಲ್ಲಿಸಲಾಗದಿದ್ದರೆ ಅವರ ಮಕ್ಕಳನ್ನೇ ಈ ಹುದ್ದೆಗೆ ನೇಮಕಾತಿ ಮಾಡುವ ಕುರಿತು ರಾಜ್ಯ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ‘ಸಿ’ ಗ್ರೇಡ್‌ ದೇವಾಲಯಗಳಿವೆ. ‘ಸಿ’ ಗ್ರೇಡ್‌ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವವರು ನಿಧನರಾದರೆ ಮಾತ್ರ ಅಂಥವರ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಅರ್ಚಕರ ಹುದ್ದೆಗೆ ನೇಮಕ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ನಿಧನರಾಗದಿದ್ದರೂ, ಅನಾರೋಗ್ಯಕ್ಕೆ ತುತ್ತಾದರೆ, ಇಲ್ಲವೇ ವಯೋಸಹಜ ಸಮಸ್ಯೆಗಳಿಂದ ಅರ್ಚಕ ವೃತ್ತಿ ಮಾಡಲಾಗದಿದ್ದರೆ ಅಂತಹವರ ಮಕ್ಕಳನ್ನು ದೇವಾಲಯಗಳಲ್ಲಿಅರ್ಚಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರ ಸರ್ಕಾರ ಸೂಚನೆ ಹೊರಡಿಸಿದೆ.

‘ಸಿ’ ವರ್ಗಗಳ ದೇವಾಲಯಗಳಲ್ಲಿ ವಂಶ ಪಾರಂಪರ್ಯ ವಾಗಿ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಅರ್ಚಕರು ನಿಧನರಾದರೆ ಅಥವಾ ವಯಸ್ಸಾಗಿದ್ದರೆ, ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ಅನುವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಆಯಾ ತಾಲೂಕುಗಳ ತಹಸೀಲ್ದಾರ್‌ ಹಂತದಲ್ಲಿ ವರ್ಗಾವಣೆ ಮಾಡಲು ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ‘ಸಿ’ ವರ್ಗಗಳ ದೇವಾಲಯಗಳ ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿಅವರ ಅನುವಂಶಿಕ ಹಕ್ಕನ್ನು ಅವರ ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸುವ ಬಗ್ಗೆ ತಹಸೀಲ್ದಾರ್‌ ಅವರಿಗೆ ಅಧಿಕಾರ ನೀಡಲಾಗಿದೆ. ಆದರೆ, ಅರ್ಚಕರು ವಯಸ್ಸಾದ ಸಂದರ್ಭದಲ್ಲಿ ಹಾಗೂ ತೀವ್ರ ರೀತಿಯ ಅನಾರೋಗ್ಯದ ನಿಮಿತ್ತ ಅರ್ಚಕರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದೆ ಇರುವ ಸಂದರ್ಭಗಳಲ್ಲಿಯೂ ಅವರ ಅನು ವಂಶಿಕ ಹಕ್ಕನ್ನು ಕಾನೂನುಬದ್ಧ ವಾರಸುದಾರರಿಗೆ ವಹಿಸಲು ಅವಕಾಶ ಕಲ್ಪಿಸುವಂತೆ ಅರ್ಚಕ ಸಂಘ ಕೋರಿತ್ತು. ಸಂಘದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಿ ಈ ನಿರ್ಧಾರಕ್ಕೆ ಮುಂದಾಗಿದೆ.

ಷರತ್ತುಗಳೇನು?

  1. ಅರ್ಚಕರು ವಯಸ್ಸಾದ ಸಂಧರ್ಭದಲ್ಲಿ ಅಥವಾ ತೀವ್ರ ರೀತಿ ಅನಾರೋಗ್ಯದ ಸಂಬಂಧ ವೈದ್ಯಕೀಯ ಧೃಢೀಕರಣ ಪಡೆಯತಕ್ಕದ್ದು.
  2. ಕಾನೂನುಬದ್ಧ ವಾರಸುದಾರರು ಅರ್ಚಕರು ಹುದ್ದೆಗೆ ಕಾಯ್ದೆ ಅಥವಾ ನಿಯಮಗಳಲ್ಲಿ ನಿಗಧಿಪಡಿಸಿರುವ ಅರ್ಹತೆ ಹೊಂದಿರತಕ್ಕದ್ದು.

ರಾಜ್ಯ ಸರ್ಕಾರದ ಈ ನಿಯಮ ಯಾವ ರೀತಿ ಪರಿಣಾಮ ಬೀಳಲಿದೆ ಎಂದು ಅನುಷ್ಠಾನಕ್ಕೆ ಬಂದ ನಂತರ ತಿಳಿಯಬಹುದು.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *