ತನ್ನ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ‘ನ್ಯಾಷನಲ್ ಕ್ರಷ್’ – ನೀವು ಕೂಡಾ ಫಾಲೋ ಮಾಡ್ಬೋದು ರಶ್ಮಿಕಾ ಟಿಪ್ಸ್…!

ತನ್ನ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ‘ನ್ಯಾಷನಲ್ ಕ್ರಷ್’ – ನೀವು ಕೂಡಾ ಫಾಲೋ ಮಾಡ್ಬೋದು ರಶ್ಮಿಕಾ ಟಿಪ್ಸ್…!

ನ್ಯೂಸ್ ಆ್ಯರೋ : ಪ್ರತಿಯೊಬ್ಬರಿಗೂ ಸೆಲೆಬ್ರಿಟಿಗಳ ರೀತಿ ಡ್ರೆಸ್ ಮಾಡ್ಬೇಕು, ಅವರ ಟ್ರೆಂಡ್ ನ್ನೇ ಫಾಲೋ ಮಾಡ್ಬೇಕು. ಅವರ ಗ್ಲೋ ಸ್ಕಿನ್ ಗೆ ಯಾವ ರೀತಿಯ ಬ್ಯೂಟಿ ಟಿಪ್ಸ್ ಫಾಲೋ ಮಾಡ್ತಾರೆ ಎಂಬುವುದನ್ನು ತಿಳಿದುಕೊಳ್ಳಬೇಕು ಅನ್ನುವಂತಹ ಕ್ಯೂರಾಸಿಟಿ ಇದ್ದೇ ಇರುತ್ತದೆ. ಇದೀಗ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ತಾವು ಅನುಸರಿಸುವ ಬ್ಯೂಟಿ ಟಿಪ್ಸ್ ನ್ನು ಇದೀಗ ರಿವೀಲ್ ಮಾಡಿದ್ದಾರೆ.

ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಈಗ ಫುಲ್ ಬ್ಯುಸಿಯಾಗಿದ್ದಾರೆ. ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಾಯಕಿಯಾದ್ರು. ಟಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಶ್ಮಿಕಾಗೆ ಪುಷ್ಪ ಚಿತ್ರದ ಮೂಲಕ ಇನ್ನಿಲ್ಲದ ಕ್ರೇಜ್ ಸಿಕ್ಕಿತು. ನಟಿ ರಶ್ಮಿಕಾ ತಮ್ಮ ನ್ಯಾಚುರಲ್ ಬ್ಯೂಟಿ ಮೂಲಕವೇ ಫ್ಯಾನ್ಸ್ ಗಮನಸೆಳೆದಿದ್ದಾರೆ.

ಸ್ಕಿನ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ರಶ್ಮಿಕಾ ತಮ್ಮ ಸೌಂದರ್ಯದ ಗುಟ್ಟೇನು ಎಂದು ತಿಳಿಸಿದ್ದಾರೆ. ಅಜ್ಜಿ ಕೊಟ್ಟ ಬ್ಯೂಟಿ ಟಿಪ್ಸ್ ಮೂಲಕವೇ ನಾನು ಸ್ಕಿನ್ ಕೇರ್ ಮಾಡೋದಾಗಿ ಹೇಳಿದ್ದಾರೆ.

ಇವರು ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಏನ್ ಗೊತ್ತಾ…?

ಈ ಪ್ಯಾಕ್ ತಯಾರಿಸಲು ತಾನು ಅರಿಶಿನ ಮತ್ತು ಅಕ್ಕಿ ಹಿಟ್ಟನ್ನು ಬಳಸುತ್ತೇನೆ ಎಂದು ರಶ್ಮಿಕಾ ವಿವರಿಸಿದ್ದಾರೆ. ಸ್ನಾನಕ್ಕೆ ಹೋಗುವ ಮುನ್ನ ಈ ಎರಡನ್ನೂ ಸಮನಾಗಿ ತೆಗೆದುಕೊಂಡು ನೀರು ಬೆರೆಸಿ ಮುಖಕ್ಕೆ ಪ್ಯಾಕ್ ಹಾಕಿವೆ ಬಳಿಕ 5-10 ನಿಮಿಷದ ನಂತರ ತೊಳೆಯುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ರು. ಸ್ಕಿನ್ ಅಲರ್ಜಿ ಉಂಟು ಮಾಡುವ ಯಾವುದೇ ಆಹಾರ ಪದಾರ್ಥಗಳನ್ನು ನಾನು ತಿನ್ನುವುದಿಲ್ಲ ಎಂದಿದ್ದಾರೆ.

ಅಲರ್ಜಿಯ ಆಹಾರಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಚರ್ಮದ ಮೇಲೆ ಮೊಡವೆ ಸಮಸ್ಯೆಗಳು ಉಂಟಾಗುತ್ತವೆ. ಎಣ್ಣೆಯುಕ್ತ ಆಹಾರ ಸೇವಿಸುವುದಿಲ್ಲ ಎಂದು ರಶ್ಮಿಕಾ ತಮ್ಮ ಸೌಂದರ್ಯದ ಗುಟ್ಟನ್ನು ವಿವರಿಸಿದರು. ರಶ್ಮಿಕಾ ಸನ್ಸ್ಕ್ರೀನ್ ಹಾಕಿಕೊಳ್ಳದೆ ಮನೆಯಿಂದ ಎಂದಿಗೂ ಹೊರಗೆ ಹೋಗುವುದಿಲ್ಲ. ಸೂರ್ಯನ ಕಿರಣಗಳು ನಮ್ಮ ಚರ್ಮವನ್ನು ಕಪ್ಪಾಗಿಸುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ತಡೆಯಲು ನಾವು ಸನ್ಸ್ಕ್ರೀನ್ ಅನ್ನು ಅನ್ವಯಿಸಬೇಕು ಎಂದು ರಶ್ಮಿಕಾ ಟಿಪ್ಸ್ ನೀಡಿದ್ರು.

ಪುಷ್ಪಾ 2 ಜೊತೆಗೆ ಬಾಲಿವುಡ್ ನಲ್ಲಿ ರಣಬೀರ್ ಜೊತೆ ಅನಿಮಲ್ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡುವ ಮೂಲಕ ಫ್ಯಾನ್ಸ್ ನ್ನು ಖುಷ್ ಮಾಡಿದ್ದಾರೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *