ಹೆಂಡ್ತಿ- ಮಕ್ಕಳ ಮುಂದೆ ಮೂರನೇ ಮದುವೆಯಾದ ಎಂಎಲ್ ಸಿ..! – ಸಾಕ್ಷಿಯಾಗಿ ಸಹಿ ಹಾಕಿದ್ದು 2ನೇ ಪತ್ನಿ..!!

ಹೆಂಡ್ತಿ- ಮಕ್ಕಳ ಮುಂದೆ ಮೂರನೇ ಮದುವೆಯಾದ ಎಂಎಲ್ ಸಿ..! – ಸಾಕ್ಷಿಯಾಗಿ ಸಹಿ ಹಾಕಿದ್ದು 2ನೇ ಪತ್ನಿ..!!

ನ್ಯೂಸ್ ಆ್ಯರೋ : ಮದುವೆ ಮೇಲೆ ಕೆಲವರಿಗೆ ಅತಿಯಾದ ವ್ಯಾಮೋಹ. ಮದ್ವೆ ಆಗಿದ್ರೂ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ರಹಸ್ಯವಾಗಿಯೇ ಎರಡೂ ಕಡೆ ದಾಂಪತ್ಯ ಜೀವನ ಬ್ಯಾಲೆನ್ಸ್ ಮಾಡುವ ಅದೆಷ್ಟೋ ಜನರಿರುತ್ತಾರೆ‌‌.‌ ಅದೇನೇ ಇರಲಿ. ಆದರೆ ಇಲ್ಲಿ ನಡೆದಿರೋದು ವಿಶೇಷ ನೋಡಿ. ಈ ವ್ಯಕ್ತಿಗೆ ಎರಡು ಮದುವೆಯೂ ಸಾಕಾಗಿಲ್ಲವಂತೆ‌. ಮೂರನೇ ಮದುವೆಗೆ ಬೆಂಬಲ ನೀಡಿದ್ದೇ ಎರಡನೇ ಪತ್ನಿ ಅಂದ್ರೆ ನಂಬ್ತೀರಾ…?

ವೈಎಸ್‌ಆರ್‌ಸಿಪಿ ಎಂಎಲ್‌ಸಿ ಜಯಮಂಗಲ ವೆಂಕಟರಮಣ ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಎರಡನೇ ಮದುವೆ, 3ನೇ ಮದುವೆ ಹೊಸ ವಿಷಯವಲ್ಲ, ಸುದ್ದಿಯೂ ಅಲ್ಲ. ಆದರೆ ಈ ಮದುವೆಯ ವಿಶೇಷವೆಂದರೆ ಅವರ ಈ 3ನೇ ಮದುವೆಗೆ 2ನೇ ಪತ್ನಿ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ. ವೆಂಕಟರಮಟ ಕೈಕಲೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಎಂಬುವವರನ್ನು 2ನೇ ಪತ್ನಿ ಸಮ್ಮುಖದಲ್ಲೇ ವಿವಾಹವಾದರು.

ವೆಂಕಟರಮಣಗೆ 3ನೇ, ಸುಜಾತಗೆ 2ನೇ ವಿವಾಹ…!

ಎಂಎಲ್ ಸಿ ಜಯಮಂಗಲ ವೆಂಕಟರಮಣ ಅವರಿಗೆ ಇದು ಮೂರನೇ ವಿವಾಹ. ಈ ಮೂರನೇ ಮದುವೆಗೆ ಎರಡನೇ ಪತ್ನಿ ಸಾಕ್ಷಿ ಸಹಿ ಹಾಕಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಮತ್ತೊಂದು ವಿಶೇಷವೆಂದರೆ ಪತ್ನಿ ಮತ್ತು ಮಗನ ಸಮ್ಮುಖದಲ್ಲಿ ಮೂರನೇ ಮದುವೆ ನಡೆದಿದೆ. ವೆಂಕಟರಮಣ ಮೊದಲ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಷ್ಟೊತ್ತಿಗಾಗಲೇ ಆಕೆಗೆ ಮಗಳಿದ್ದಳು. ನಂತರ ವೆಂಕಟ ರಮಣ ಎರಡನೇ ಮದುವೆಯಾದರು. ಅವರ ಎರಡನೇ ಮದುವೆಯಿಂದ ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಈಗ ಮೂರನೇ ಮದುವೆಯಾಗಿದ್ದಾರೆ.

ಪತಿ ಮದುವೆಗೆ 2ನೇ ಪತ್ನಿ ಸಾಥ್

ಮೂರನೇ ಮದುವೆಯಾಗಿರುವ ಸುಜಾತಾ ಏಲೂರು ವ್ಯಾಪ್ತಿಯ ಅರಣ್ಯ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರಿಗೆ 2ನೇ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗನಿದ್ದಾನೆ. ವೆಂಕಟರಮಣನ ಅವರ ಮೊದಲ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ ಅವರು 2ನೇ ವಿವಾಹವಾಗಿದ್ದರು. ಅವರಿಗೆ ಒಂದು ಗಂಡು ಮತ್ತು ಹೆಣ್ಣು ಮಗಳಿದ್ದಾರೆ. ಸಂಸಾರದಲ್ಲಿ ಕಲಹದ ಕಾರಣ ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಅಂದಿನಿಂದ ಒಂಟಿಯಾಗಿದ್ದ ವೆಂಕಟರಮಣ ಮೂರನೇ ಮದುವೆಯಿಂದ ಹೊಸ ಜೀವನ ಆರಂಭಿಸಿದ್ದಾರೆ. ಇದಕ್ಕೆ 2ನೇ ಪತ್ನಿ ಕೂಡ ಸಾಥ್ ನೀಡಿದ್ದಾರೆ.

ಟಿಡಿಪಿ ಬಿಟ್ಟು ವೈಸಿಪಿ ಸೇರ್ಪಡೆ

ಜಯಮಂಗಲ ವೆಂಕಟರಮಣ ಹಲವು ವರ್ಷಗಳ ಕಾಲ ಟಿಡಿಪಿಯಲ್ಲಿದ್ದರು. ಅವರು ಕೈಕಲೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. 1999 ರಲ್ಲಿ ತೆಲುಗು ದೇಶಂ ಮೂಲಕ ರಾಜಕೀಯ ಪ್ರವೇಶಿಸಿದರು. 2005ರಲ್ಲಿ ಕೈಕಳೂರು ZPTC ಸದಸ್ಯರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೈಕಲೂರು ಕ್ಷೇತ್ರದಿಂದ ಟಿಡಿಪಿ ಪರವಾಗಿ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2014ರ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯ ಭಾಗವಾಗಿ ಟಿಕೆಟ್ ಸಿಕ್ಕಿರಲಿಲ್ಲ. 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಪರವಾಗಿ ಸ್ಪರ್ಧಿಸಿ ಸೋತರು, ಬಳಿಕ ಟಿಡಿಪಿಗೆ ರಾಜೀನಾಮೆ ನೀಡಿ ವೈಸಿಪಿ ಸೇರಿದ್ದರು.

ಇನ್ನು ಈ ಸಮಾಜದಲ್ಲಿ ಇನ್ನೇನೆಲ್ಲಾ ನೋಡ್ಬೇಕೋ..! ಅವರ ರಾಜಕೀಯ ಜೀವನ ಹೇಗೇ ಇರಲಿ‌. ಆದರೆ ವೈಯಕ್ತಿಕ ಜೀವನವನ್ನು ಅವರು ಬ್ಯಾಲೆನ್ಸ್ ಮಾಡಿಕೊಳ್ಳುವುದರಲ್ಲಿ ಅವರ -ಅವರ ಪತ್ನಿಯರ ನೆಮ್ಮದಿ ಅಡಗಿದೆ ಎಂದು ಹೇಳಬಹುದು.

Related post

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…
ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ ನ್ಯಾಯಾಲಯ

ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ…

ನ್ಯೂಸ್ ಆ್ಯರೋ : ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಗೆ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧಿತನಾಗಿ…

Leave a Reply

Your email address will not be published. Required fields are marked *