ಚೀನಾದಲ್ಲಿ ಹೆಚ್ಚಿದ ಇನ್ಫ್ಲುಯೆನ್ಸಾ ವೈರಸ್ ಭೀತಿ…! – ಭಾರತದಲ್ಲೂ ಆತಂಕ…! ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟ

ಚೀನಾದಲ್ಲಿ ಹೆಚ್ಚಿದ ಇನ್ಫ್ಲುಯೆನ್ಸಾ ವೈರಸ್ ಭೀತಿ…! – ಭಾರತದಲ್ಲೂ ಆತಂಕ…! ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟ

ನ್ಯೂಸ್ ಆ್ಯರೋ : ಕೊರೊನಾ ಸೋಂಕು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಅನೇಕ ರೀತಿಯ ಸಾವು ನೋವು ದುಃಖ ಕಷ್ಟಕ್ಕೆ ಈ ಸೋಂಕು ಕಾರಣವಾಗಿತ್ತು. ಉದ್ಯೋಗರಂಗದಿಂದ ಹಿಡಿದು ಶಿಕ್ಷಣ ಕ್ಷೇತ್ರದವರೆಗೂ ಅನಿರೀಕ್ಷಿತ ಬದಲಾವಣೆಯನ್ನು ಮಾಡಿತ್ತು. ಇದೀಗ ಚೀನಾದಲ್ಲಿ ಮತ್ತೊಂದು ಸೋಂಕು ಹರಡುವ ಆತಂಕ ನಿರ್ಮಾಣವಾಗಿದೆ. ರೋಗಗಳ ಮೂಲವೆಂದೇ ಚೀನಾವನ್ನು ಕರೆಯಬಹುದೇನೋ. ಇದೀಗ ಅಲ್ಲಿಯ ಪ್ರಸ್ತುತ ಸ್ಥಿತಿ ಭಾರತಕ್ಕೂ ಬಿಸಿ ಮುಟ್ಟಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್ ಬಳಿಕ ಈಗ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ ಇದೆ. ಇದು ಭಾರತಕ್ಕೂ ಹಬ್ಬುವ ಆತಂಕ ಇದೆ. ಹೀಗಾಗಿ ಆರೋಗ್ಯ ಇಲಾಖೆ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ರಾಜ್ಯದಲ್ಲೂ ಇನ್‌ಫ್ಲುಯೆನ್ಸಾ ತಡೆಗೆ ಕೆಲ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲಾಗಿದೆ.

ILI ಹಾಗೂ SARI ಪ್ರಕರಣಗಳನ್ನು ವರದಿ ಮಾಡಲು ಸೂಚಿಸಿದೆ. ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಉಸಿರಾಟದ ಕಾಯಿಲೆಗಳ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೂ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಸೂಚನೆಗಳು ಏನೇನು…?

1.IDSP-IHIP ಪೋರ್ಟಲ್‌ನಲ್ಲಿ ILI ಮತ್ತು SARI ಪ್ರಕರಣಗಳನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು.

  1. DSO ಗಳ ಅಡಿಯಲ್ಲಿ ILI, SARI ಪ್ರಕರಣಗಳ ಪ್ರವೃತ್ತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದು. ಯಾವುದೇ ಅಸಾಮಾನ್ಯ ಹೆಚ್ಚಳವನ್ನು ತಕ್ಷಣವೇ ವರದಿ ಮಾಡುವುದು.

3.ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳುವುದು

4.IHIP ವರದಿ ಮಾಡುವ ಮೂಲಕ ಸ್ಕ್ಯಾನಿಂಗ್

5.COVID ಋಣಾತ್ಮಕ ಪರೀಕ್ಷಾ ವರದಿಯೊಂದಿಗೆ ಎಲ್ಲ SARI ಸಾವಿನ ಪ್ರಕರಣಗಳನ್ನು ಪ್ಯಾನಲ್‌ಗೆ ಒಳಪಡಿಸಬೇಕು

ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು..?

  1. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು
  2. ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು

3.ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು

4.ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಫೇಸ್ ಮಾಸ್ಕ್ ಬಳಸುವುದು

5.ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು

6.ನಿದ್ರೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ. ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು.

8.ಸಾರ್ವಜನಿಕವಾಗಿ ಉಗುಳುವುದನ್ನು ತಪ್ಪಿಸಿ.

9.ಇನ್ಫ್ಲುಯೆನ್ಸಾ ಮತ್ತು ಇತರ ಉಸಿರಾಟದ ಕಾಯಿಲೆಗಳ ಹೆಚ್ಚಿನ ಸಂಭವವಿರುವ ಸ್ಥಳಗಳಿಗೆ ಪ್ರಯಾಣವನ್ನು ತಪ್ಪಿಸುವುದು.

10.ರೋಗ ಲಕ್ಷಣಗಳು ಉಲ್ಬಣಗೊಂಡರೆ ಹತ್ತಿರದ ಸರ್ಕಾರಿ ಆರೋಗ್ಯ ಸೌಲಭ್ಯಕ್ಕೆ ವರದಿ ಮಾಡಿ.

11.ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಸ್ವಯಂ-ಔಷಧಿಗಳನ್ನು ಮಾಡಬೇಡಿ

ಈ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ ಕೊರೋನಾದಿಂದ ದೇಶ ತತ್ತರಿಸಿ ಹೋದಂತೆ ಈ ಸೋಂಕು ದುಷ್ಪರಿಣಾಮಗಳನ್ನು ಬೀರದಿದ್ದರೆ ಸಾಕು. ಚೀನಾದಲ್ಲಿಯೇ ಸಂಪೂರ್ಣವಾಗಿ ಈ ಸೋಂಕು ನಿವಾರಣೆಯಾಗಬೇಕು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *