ಮುಂಬೈ ಇಂಡಿಯನ್ಸ್ ಗೆ ಪಾಂಡ್ಯ ಮರಳುತ್ತಲೇ ಸಿಡಿದೆದ್ದ ಬುಮ್ರಾ – ತಂಡದ ವಿರುದ್ಧವೇ ಬೂಮ್ ಬೂಮ್ ಸಿಟ್ಟಾಗಿದ್ದೇಕೆ..!?

ಮುಂಬೈ ಇಂಡಿಯನ್ಸ್ ಗೆ ಪಾಂಡ್ಯ ಮರಳುತ್ತಲೇ ಸಿಡಿದೆದ್ದ ಬುಮ್ರಾ – ತಂಡದ ವಿರುದ್ಧವೇ ಬೂಮ್ ಬೂಮ್ ಸಿಟ್ಟಾಗಿದ್ದೇಕೆ..!?

ನ್ಯೂಸ್ ಆ್ಯರೋ : ಕ್ರಿಕೆಟ್ ತಂಡದಲ್ಲಿ ಆಗಾಗ ಅನೇಕ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಕ್ರಿಕೆಟ್ ಅಭಿಮಾನಿಗಳೂ ತಂಡದಲ್ಲಿ ಬದಲಾವಣೆಯನ್ನು ಬಯಸುತ್ತಿರುತ್ತಾರೆ. ಇದೀಗ ಕ್ರಿಕೆಟ್ ಟೀಂನಲ್ಲಿ ನಡೆದ ಈ ಚೇಂಜಸ್ ಮಾತ್ರ ಸ್ವಲ್ಪ ಶಾಕ್ ಕೊಟ್ಟಿದೆ ಎನ್ನಬಹುದು.

ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಸತತ ಎರಡು ವರ್ಷಗಳ ಕಾಲ ಆಟವಾಡಿದ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಮುಂದುವರೆಯುವ ಆಸಕ್ತಿ ಕಳೆದುಕೊಂಡಿದ್ದು ಇದೀಗ ಮುಂಬೈ ಇಂಡಿಯನ್ಸ್ ಟೀಮ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಟೈಟನ್ಸ್ ಕೂಡಾ ಕ್ಲಾರಿಟಿ ನೀಡಿದೆ. ಪಾಂಡ್ಯ ಈ ಟೀಂಗೆ ಸೇರಿದ್ದು ಆಟಗಾರರಿಗೆ ಗುಡ್ ನ್ಯೂಸ್ ಆಗಿದ್ದರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಧಾರ ಕುರಿತು ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.

ಎಲ್ಲೆಡೆ ವೈರಲ್ ಆಗ್ತಿದೆ ಬುಮ್ರಾ ಪೋಸ್ಟ್…!

‘ಮೌನವೇ ಅತ್ಯುತ್ತಮ ಉತ್ತರ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬುಮ್ರಾ ಪೋಸ್ಟ್ ಅನೇಕ ಪ್ರಶ್ನೆಗಳನ್ನು ಮೂಡಿಸಿದೆ. ಈ ಹೇಳಿಕೆ ಮುಂಬೈ ತಂಡದ ಮೇಲಿನ ಅಸಮಾಧಾನ ಇರಬಹುದೇ ಎಂಬ ಅನುಮಾನಗಳನ್ನು ಹುಟ್ಟಿಹಾಕಿದೆ.

ಅಲ್ಲದೇ ಬುಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನು ಅನ್ ಫಾಲೋ ಮಾಡಿದ್ದಾರೆ. ಈ ಬೆಳವಣಿಗೆಗಳು ಜಸ್ಪ್ರೀತ್ ಅವರ ಬೇಸರ ತಂಡದ ಮೇಲೆ ಇರುವುದು ಖಚಿತ ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳುವಂತಿದೆ.

ಪಾಂಡ್ಯ ನಿರ್ಧಾರದ ಬಗ್ಗೆ ನೆಟ್ಟಿಗರ ಅಭಿಪ್ರಾಯವೇನು..?

ಗುಜರಾತ್ ಟೈಟನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂದಿನ ಎರಡು ವರ್ಷ ಅದೇ ತಂಡದಲ್ಲಿ ಮುಂದುವರೆಯಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಮುಂಬೈ ಇಂಡಿಯನ್ಸ್ ಗೆ ಮತ್ತೆ ಬಂದದ್ದು ಖುಷಿ ತಂದಿದೆ ಎಂದಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಪೋಸ್ಟ್ ಹಂಚಿಕೊಂಡ ಹಾರ್ದಿಕ್ ‘ಮನೆ ಮುಂಬೈ ಇಂಡಿಯನ್ಸ್ ಮನೆ’ ಎಂಬ ಶೀರ್ಷಿಕೆ ಕೊಟ್ಟು ತಮ್ಮ ಅನುಯಾಯಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಐಪಿಎಲ್ 2024ರ ಆವೃತ್ತಿಗೂ ಮುನ್ನವೇ ಕ್ಯಾಪ್ಟನ್ ವಿಚಾರ ತೀವ್ರ ಚರ್ಚೆಯಲ್ಲಿದೆ. ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಈ ಮೂವರಲ್ಲಿ ಯಾರು ನಾಯಕನ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಗೊಂದಲಗಳು ಸೃಷ್ಠಿಯಾಗಿದೆ. ಕೆಲವರು ರೋಹಿತ್ ಆಗುವುದು ಖಚಿತ ಅಂದ್ರೆ ಇನ್ನೂ ಕೆಲವರು ಪಾಂಡ್ಯ ಆಯ್ಕೆಯಾಗೋದು ಖಚಿತ ಎಂದಿದ್ದಾರೆ. ಆದರೆ ಪಾಂಡ್ಯ ಸೇರ್ಪಡೆ ಬೆನ್ನಲ್ಲೇ ರೋಹಿತ್ ಬಳಿಕ ನಾಯಕತ್ವದ ನಿರೀಕ್ಷೆಯಲ್ಲಿದ್ದ ಬುಮ್ರಾ ಮುನಿಸಿಕೊಂಡಂತೆ ಕಾಣುತ್ತಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *