‘ಗೇ’ ಡೇಟಿಂಗ್ ಆ್ಯಪ್ ನಲ್ಲಿ ಸಿಕ್ಕಿದಾತ ಲೂಟಿ ಮಾಡಿ ಪರಾರಿ – ಹುಡುಗರೇ ಇದು ನಿಮಗೆ ಎಚ್ಚರಿಕೆಯ ಕರೆಘಂಟೆ!

‘ಗೇ’ ಡೇಟಿಂಗ್ ಆ್ಯಪ್ ನಲ್ಲಿ ಸಿಕ್ಕಿದಾತ ಲೂಟಿ ಮಾಡಿ ಪರಾರಿ – ಹುಡುಗರೇ ಇದು ನಿಮಗೆ ಎಚ್ಚರಿಕೆಯ ಕರೆಘಂಟೆ!

ನ್ಯೂಸ್ ಆ್ಯರೋ : ಕಾಲ ಬದಲಾಗಿದೆ. ಎಲ್ಲವೂ ಈಗ ಬೆರಳ ತುದಿಯಲ್ಲಿದೆ. ಆನ್‌ಲೈನ್ ಗಳಲ್ಲಿ ಬೇಕಾದಷ್ಟು ಡೇಟಿಂಗ್ ಆ್ಯಪ್ ಗಳಿವೆ ಇಷ್ಟ ಬಂದವರನ್ನು ಭೇಟಿಯಾಗಿ ಡೇಟಿಂಗ್ ಮಾಡಬಹುದು. ಆದರೆ ಇದೇ ವೇಳೆ ಇಂತಹ ಆ್ಯಪ್ ಗಳ ಮೂಲಕ ಅಪರಿಚಿತರನ್ನು ನಂಬಿ ಮೋಸದ ಬಲೆಗೆ ಬೀಳುವ ಯುವಕರ ಸಂಖ್ಯೆಯೂ ಕೂಡ ಹೆಚ್ಚಾಗಿತ್ತಿದೆ. ಇದೀಗ ಬೆಂಗಳೂರಿನಲ್ಲಿ ಯುವಕರನ್ನು ಬಡಿದೆಚ್ಚರಿಸುವ ಘಟನೆಯೊಂದು ನಡೆದಿದೆ.

ಡೇಟಿಂಗ್ ಆ್ಯಪ್ ನಲ್ಲಿ ಸಿಕ್ಕ ಫರ್ಹಾನ್ ಎಂಬವನನ್ನು ನಂಬಿ ಯುವಕನೊಬ್ಬ ಹಣ, ವಾಚ್, ಒಡವೆಗಳನ್ನು ಕಳೆದುಕೊಂಡಿದ್ದಾನೆ. ಈ ವಂಚನೆಯ ಜಾಲದ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.

ಗ್ರೈಂಡರ್ ಗೇ ಡೇಟಿಂಗ್ ಆ್ಯಪ್!

ಆನ್ಲೈನ್ ನಲ್ಲಿ ಸದ್ಯ ಯುವರನ್ನು ದಾರಿ ತಪ್ಪಿಸುತ್ತಿರುವ ಆ್ಯಪ್ ಗಳಲ್ಲಿ ಈ ಗ್ರೈಂಡರ್ ಗೇ ಡೇಟಿಂಗ್ ಆ್ಯಪ್ ಕೂಡ ಒಂದು. ಇತ್ತೀಚೆಗೆ ಬೆಂಗಳೂರಿನ ನದೀಂ ಎಂಬ ಯುವಕನಿಗೆ ಈ ಆ್ಯಪ್ ಮೂಲಕ ಫರ್ಹಾನ್ ಎಂಬಾತನ ಪರಿಚಯವಾಗಿತ್ತು. ಕೆಲ ದಿನದ ಮಾತುಕತೆ ಸ್ನೇಹಕ್ಕೆ ತಿರುಗಿ, ಈ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿತ್ತು. ಭೇಟಿ ಮಾಡುವ ಉದ್ದೇಶದಿಂದ ನವೆಂಬರ್ 22ರಂದು ನದೀಂ ಗೆಳೆಯನಾಗಿದ್ದ ಫರ್ಹಾನ್ ನನ್ನು ತನ್ನ‌ ರೂಂ ಗೆ ಕರೆಸಿಕೊಂಡಿದ್ದ. ಮತ್ತೆ ನಡೆದಿದ್ದೇ ಶಾಕಿಂಗ್ ಘಟನೆ.

ಲೂಟಿ ಮಾಡಿ ಪರ್ಹಾನ್ ಪರಾರಿ!

ಸಂಜೆಯ ಹೊತ್ತು ನಂದೀ ಮನೆಗೆ ಬಂದ ಫರ್ಹಾನ್ ಕೆಲ ಕಾಲ ಮಾತುಕತೆಯಲ್ಲಿ ತೊಡಗಿದ್ದಾನೆ‌. ಈ ನಡುವೆ ವಾಷ್ ರೂಂ ಗೆ ತೆರಳಿದ ಫರ್ಹಾನ್ ಕಾಲ್ ಮಾಡಿ ತನ್ನ‌ ಗ್ಯಾಂಗ್ ಕರೆಸಿಕೊಂಡಿದ್ದ. ಕೆಲ ಹೊತ್ತಿನ ಬಳಿಕ 4-5 ಜನ ಬಂದು ನದೀಂ ಮನೆ ಬಾಗಿಲು ಬಡಿದಿದ್ದಾರೆ. ಇದರಿಂದ ಭಯಗೊಂಡ ನದೀಂ, ಪರ್ಹಾನ್ ಇದ್ದ ವಾಷ್ ರೂಂ ಬಾಗಿಲು ಹಾಕಿ. ಈಗಲೇ ನೀವೆಲ್ಲ ಇಲ್ಲಿಂದ ಹೋಗಿ ಇಲ್ಲದಿದ್ದರೆ ಪೊಲೀಸ್ ಕರೆಸುತ್ತೇನೆ ಎಂದಿದ್ದಾನೆ. ಆದರೆ ಇದೇ ವೇಳೆ ವಾಷ್ ರೂಂ ಚಿಲಕ ಮುರಿದು ಹೊರ‌ ಬಂದ ಫರ್ಹಾನ್ ಬಾಗಿಲು ಓಪನ್‌ ಮಾಡಿ ತನ್ನ ಗ್ಯಾಂಗನ್ನು ಒಳ ಕರೆಸಿಕೊಂಡಿದ್ದಾನೆ.

ಹಣ, ಮೊಬೈಲ್, ವಾಚ್ ಕಿತ್ತು ಎಸ್ಕೆಪ್ ಆದ ಗ್ಯಾಂಗ್!

ಕೆಲವೇ ಕ್ಷಣಗಳಲ್ಲಿ ಫರ್ಹಾನ್ ಆಂಡ್ ಗ್ಯಾಂಗ್ ನದೀಂ ಮೇಲೆ ದೈಹಿಕ ಹಲ್ಲೆ ನಡೆಸಿ, ಹೆದರಿಸಿ ಬೆದರಿಸಿ ಆತನ ಬಳಿ ಇದ್ದ 45 ಸಾವಿರ‌ ಮೌಲ್ಯದ ಮೊಬೈಲ್, ದುಬಾರಿ ವಾಚ್ ಹಾಗೂ ಎಕೌಂಟ್ ನಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೋಸದ ಜಾಲದ ಅರಿವಾದ ನದೀಂ ಅಡುಗೋಡಿ ಪೊಲೀಸ್ ಠಾಣೆಗೆ ತೆರಳಿ ಫರ್ಹಾನ್ ವಿರುದ್ಧ ದೂರು ದಾಖಲಿಸಿದ್ದಾನೆ. ಸದ್ಯ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *