ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕರ ಆಸ್ತಿ 5,95,000 ಕೋಟಿ – ಯಾರಿದು ಶ್ರೀಮಂತ ಉದ್ಯಮಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್…

ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕರ ಆಸ್ತಿ 5,95,000 ಕೋಟಿ – ಯಾರಿದು ಶ್ರೀಮಂತ ಉದ್ಯಮಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್…

ನ್ಯೂಸ್ ಆ್ಯರೋ : ಒಂದು ಸ್ವಂತ ಉದ್ಯಮ ಪ್ರಾರಂಭಿಸುವುದು ಎಂದರೆ ಸುಲಭದ ಮಾತಲ್ಲ. ವ್ಯವಹಾರದ ರೂಪುರೇಷೆ, ಇತಿಮಿತಿ, ಸಾಧಕ- ಭಾಧಕಗಳು, ಬಜೆಟ್ ಇವೆಲ್ಲವುಗಳ ಬಗ್ಗೆ ನಮಗೆ ಜ್ಞಾನವಿರಬೇಕು. ವ್ಯವಹಾರದ ವಿಷಯದಲ್ಲಿ ನಾರಾಯಣ ಮೂರ್ತಿ ದಂಪತಿಯ ಸಾಧನೆಯನ್ನು ನಾವು ಶ್ಲಾಘಿಸಲೇಬೇಕು. ದೇಶದ ಅತಿ ದೊಡ್ಡ ಟೆಕ್ ಕಂಪೆನಿಗಳಲ್ಲಿ ಒಂದಾದ ಪ್ರಸ್ತುತ 595000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿ ‘ಇನ್ಫೋಸಿಸ್’ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವುದು ಗಮನಾರ್ಹ.

ನಾರಾಯಣ ಮೂರ್ತಿಯವರು ಇನ್ಫೋಸಿಸ್ ಅನ್ನು ಪ್ರಾರಂಭಿಸಲು ಹೊರಟಾಗ ಕೆಲವು ವಿಶಾಲ ಹೃದಯಿಗಳು ಬೆಂಬಲವನ್ನು ನೀಡಿದ್ದು ಅವರಲ್ಲಿ ಶಿಬು ಎಂದು ಕರೆಯಲ್ಪಡುವ ಎಸ್ ಡಿ ಶಿಬುಲಾಲ್ ಕೂಡಾ ಒಬ್ಬರಾಗಿದ್ದಾರೆ.

ಶಿಬುಲಾಲ್ ಅವರ ಹಿನ್ನೆಲೆಯೇನು..?

ಇವರು ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಇವರು 1955ರಲ್ಲಿ ಕೇರಳದ ಅಲಪ್ಪುಳದಲ್ಲಿ ಜನಿಸಿದ್ದಾರೆ. ಇವರ ತಂದೆ ಆಯುರ್ವೇದ ವೈದ್ಯರಾಗಿದ್ದು ತಾಯಿ ಸರ್ಕಾರಿ ಉದ್ಯೋಗಿಯಾಗಿದ್ದರು.

ಶಿಬುಲಾಲ್ ಅವರು ಯುಎಸ್ ನ ಬೋಸ್ಟನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕೇರಳ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಬುಲಾಲ್ 1979ರಲ್ಲಿ ಪಟ್ನಿ ಕಂಪ್ಯೂಟರ್ ಸಿಸ್ಟಮ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ಇಲ್ಲಿಯೇ ಅವರು ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್ ನ ಸಹ ಸಂಸ್ಥಾಪಕರಾಗಲಿರುವ ಇತರ ಸ್ನೇಹಿತರನ್ನು ಕೂಡಾ ಭೇಟಿಯಾದರು.

ಭಾರತದ ಅತಿದೊಡ್ಡ ಟೆಕ್ ಕಂಪೆನಿಗಳಲ್ಲಿ ಒಂದಾದ ಇನ್ಫೋಸಿಸ್ ನ್ನು ನಿರ್ಮಿಸಲು ಒಂದು ದಶಕಗಳ ಕಾಲ ಶ್ರಮಿಸಿ ಮುಂದೆ 5ವರ್ಷಗಳ ಕಾಲ ವಿಶ್ರಾಂತಿ ತೆಗೆದುಕೊಂಡು ಮೈಕ್ರೋಸಿಸ್ಟಮ್ಸ್ ಗೆ ಸೇರಿದರು. 1997ರಲ್ಲಿ ಮತ್ತೆ ಇನ್ಫೋಸಿಸ್ ಗೆ ಸೇರಿದ ಅವರು 2007ರಲ್ಲಿ ಸಿಇಒ ಆಗುವ ಮೊದಲು ಕಂಪೆನಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಇವರು 2011-2014ರವರೆಗೆ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಇವರ ಮೂಲ ವೇತನ ಸುಮಾರು 36ಲಕ್ಷ ರೂಪಾಯಿಗಳು.

ಶಿಬುಲಾಲ್ ಅವರು 595000 ಕೋಟಿ ರೂ. ಮೌಲ್ಯದ ಇನ್ಫೋಸಿಸ್ ನಲ್ಲಿ ಶೇರು ಹೊಂದಿದ್ದು ಪೋರ್ಬ್ಸ್ ಪ್ರಕಾರ ಅವರು ಪ್ರಸ್ತುತ ರೂ. 15006 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರು ಇನ್ಫೋಸಿಸ್ ಹೊರತಾಗಿ ಬಯೋಟಿಕ್ ರೆಸಾರ್ಟ್ ಚೈನ್ ದಿ ಟಮಾರಾ ಇದರ ಅಧ್ಯಕ್ಷರಾಗಿದ್ದಾರೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *