ಜಿಮೇಲ್ ಬಳಕೆದಾರರೇ ಜಾಗರೂಕರಾಗಿ – ನೀವು ಈ ಕೆಲಸ ಮಾಡದೇ ಇದ್ರೆ ನಿಮ್ಮ ಖಾತೆ ಡಿಲೀಟ್ ಆಗ್ಬೋದು..!!

ಜಿಮೇಲ್ ಬಳಕೆದಾರರೇ ಜಾಗರೂಕರಾಗಿ – ನೀವು ಈ ಕೆಲಸ ಮಾಡದೇ ಇದ್ರೆ ನಿಮ್ಮ ಖಾತೆ ಡಿಲೀಟ್ ಆಗ್ಬೋದು..!!

ನ್ಯೂಸ್ ಆ್ಯರೋ : ನಿಷ್ಕ್ರಿಯವಾಗಿರುವ ಗೂಗಲ್ ಖಾತೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಗೂಗಲ್ ಮುಂದಾಗಿದ್ದು, ಶೀಘ್ರದಲ್ಲೇ ಅಗತ್ಯವಿರುವ ಗೂಗಲ್ ಖಾತೆಯನ್ನು ಸಕ್ರಿಯಗೊಳಿಸಿ. ಇಲ್ಲವಾದರೆ ಡಿಸಂಬರ್ ಬಳಿಕ ಗೂಗಲ್ ಖಾತೆ ಸಿಗುವುದು ಕಷ್ಟವಾಗಬಹುದು.

ಕೆಲವು ಖಾತೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಗೂಗಲ್ ಮುಂದಾಗಿದ್ದು, ಇದಕ್ಕೆ ಮುಖ್ಯ ಕಾರಣ ಲಕ್ಷಾಂತರ ಖಾತೆಗಳು ನಿಷ್ಕ್ರಿಯವಾಗಿರುವುದು. ಹೀಗಾಗಿ ತುಂಬಾ ಹಳೆಯ ಖಾತೆಯನ್ನು ಈ ವಾರಂತ್ಯದೊಳಗೆ ಸಕ್ರಿಯಗೊಳಿಸದೇ ಇದ್ದರೆ ಮುಂದೆ ಅದು ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ಅಗತ್ಯವಾಗಿ ಬೇಕಾಗಿರುವ ಗೂಗಲ್ ಖಾತೆಯನ್ನು ಕೂಡಲೇ ಸಕ್ರಿಯಗೊಳಿಸಬೇಕು.

ಒಂದು ವೇಳೆ ಖಾತೆಯು ಸಕ್ರಿಯವಾಗಿಲ್ಲವೆಂದಾದರೆ ಅದನ್ನು ಶಾಶ್ವತವಾಗಿ ಗೂಗಲ್ ಡಿಲೀಟ್ ಮಾಡುತ್ತದೆ. ಬಳಿಕ ಪಾಸ್‌ವರ್ಡ್ ಮರೆತು ಹೋಗಿದೆ ಅಥವಾ ಇಮೇಲ್ ಬಳಸಿ ಮೂಲಕ ಪ್ರಯತ್ನಿಸಿದರೂ ಅದು ಮತ್ತೆ ಸಕ್ರಿಯಗೊಳಿಸಲು ಸಾಧ್ಯವಾಗುವುದಿಲ್ಲ.

ಕಳೆದ ಮೇ ತಿಂಗಳಲ್ಲೇ ಗೂಗಲ್ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು. ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಬಳಕೆಯಾಗದ ಇರುವ ಖಾತೆಗಳು ಡಿಲೀಟ್ ಆಗಲಿದೆ. ಒಂದು ವೇಳೆ ನಿಮ್ಮ ಲಾಗಿನ್ ಆಗದ ಖಾತೆಯಲ್ಲಿ ಪ್ರಮುಖ ಮಾಹಿತಿಗಳಿದ್ದರೆ ಅದು ಶಾಶ್ವತವಾಗಿ ಡಿಲೀಟ್ ಆಗುವ ಮೊದಲು ಲಾಗಿನ್ ಮಾಡಿ ಸಕ್ರಿಯಗೊಳಿಸಿ.

ಈ ಬಗ್ಗೆ ಈಗಾಗಲೇ ನಿಮ್ಮ ಇಮೇಲ್ ಖಾತೆಗೆ ಗೂಗಲ್ ಸಂದೇಶ ಕಳುಹಿಸಿದೆ. ಖಾತೆಗಳನ್ನು ಮುಚ್ಚುವಂತೆ ಗೂಗಲ್ ಬಳಕೆದಾರರಿಗೆ ಸೂಚನೆ ನೀಡಿದೆ. ನೀವು ಈ ಮೇಲ್ ಅನ್ನು ಪರಿಶೀಲಿಸದೇ ಇದ್ದರೆ ಗೂಗಲ್ ಡ್ರೈವ್, ಡಾಕ್ಸ್, ಜಿ-ಮೇಲ್ ಮತ್ತು ಇತರ ಖಾತೆಗಳು ಶಾಶ್ವತವಾಗಿ ಮುಚ್ಚಲಾಗುತ್ತದೆ.

ನಿಷ್ಕ್ರಿಯ ಖಾತೆಗಳು ದುರ್ಬಳಕೆಯಾಗುವ ಸಾಧ್ಯತೆ ಇರುವುದರಿಂದ ಸುರಕ್ಷತೆ ದೃಷ್ಟಿಯಲ್ಲಿ ಗೂಗಲ್ ಈ ಕ್ರಮಕ್ಕೆ ಮುಂದಾಗಿದೆ. ಇದು ಕೇವಲ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಶಾಲೆಗಳು, ಸಂಸ್ಥೆಗಳ ಇಮೇಲ್‌ಗಳಿಗೆ ಇದು ಅನ್ವಯ ಆಗುವುದಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *