20 ವರ್ಷ ಹಿರಿಯ ನಟಿ ವಿವಾಹವಾಗಲು ಹೊರಟಿದ್ರಂತೆ ಅಭಿಷೇಕ್ ಬಚ್ಚನ್ – ಆ ನಟಿಗೆ ನಿಮ್ಜೊತೆ ಮಲಗಲೇ ಎಂದು ಕೇಳಿದ್ರಂತೆ ಅಭಿಷೇಕ್..! ಯಾರು ಆ ನಟಿ..??

20 ವರ್ಷ ಹಿರಿಯ ನಟಿ ವಿವಾಹವಾಗಲು ಹೊರಟಿದ್ರಂತೆ ಅಭಿಷೇಕ್ ಬಚ್ಚನ್ – ಆ ನಟಿಗೆ ನಿಮ್ಜೊತೆ ಮಲಗಲೇ ಎಂದು ಕೇಳಿದ್ರಂತೆ ಅಭಿಷೇಕ್..! ಯಾರು ಆ ನಟಿ..??

ನ್ಯೂಸ್ ಆ್ಯರೋ : ಸಿನಿಮಾ ಅಂದ ಮೇಲೆ ಸೆಲೆಬ್ರಿಟಿಗಳ ಬದುಕಿನ ಬಗೆಗಿನ ಗಾಸಿಪ್ ಗಳು, ಕಾಂಟ್ರವರ್ಸಿಗಳ ಬಗ್ಗೆ ನಾವು ನೋಡುತ್ತಲೇ ಇರುತ್ತೇವೆ. ಕೇಳುತ್ತಲೇ ಇರುತ್ತೇವೆ. ಇವರ ಲೈಫ್ ನಲ್ಲಿ ನಡೆದಿದ್ದ ಆಶ್ಚರ್ಯಕರ ಸಂಗತಿಯ ಬಗ್ಗೆ ಕೆದಕುತ್ತಲೇ ಇರುತ್ತೇವೆ. ಇದೀಗ ಅಭಿಷೇಕ್ ಬಚ್ಚನ್ ಅವರ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ನಟ ಅಭಿಷೇಕ್​ ಬಚ್ಚನ್​ ಹಾಗೂ ನಟಿ ಐಶ್ವರ್ಯ ರೈ ಇದೀಗ ಸುಖೀ ಜೀವನ ನಡೆಸುತ್ತಿದ್ದಾರೆ. ಮಗಳು ಆರಾಧ್ಯ ಜೊತೆ ಇವರದ್ದು ಸುಂದರ ದಾಂಪತ್ಯ ಜೀವನ.

ಆದರೆ ಅಭಿಷೇಕ್ ಬಚ್ಚನ್ ಗೆ ಐಶ್ವರ್ಯ ರೈಯನ್ನು ವಿವಾಹವಾಗೋದು ಇಷ್ಟವಿರಲಿಲ್ಲ..!

ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯ ರೈ ಅವರು ಮದುವೆಯಾಗುವುದಕ್ಕೂ ಮುನ್ನ, ಇವರಿಬ್ಬರಿಗೂ ಬೇರೆ ಬೇರೆಯವರ ಜೊತೆ ಸಂಬಂಧ ಇದ್ದುದು ಸಿನಿ ಪ್ರಿಯರಿಗೆ ತಿಳಿದಿರುವ ವಿಷಯವೇ. ಅಷ್ಟಕ್ಕೂ ಖುದ್ದು ಅಮಿತಾಭ್​ ಬಚ್ಚನ್​ ಅವರ ಮಗಳು ಶ್ವೇತಾ ಅವರಿಗೂ ಈ ಸಂಬಂಧ ಇಷ್ಟವಿರಲಿಲ್ಲ. ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲ.

ಅಭಿಷೇಕ್ ಅವರು ತಮ್ಮ ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು.

ಅಭಿಷೇಕ್​ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ, ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನುವ ಮಾತಿದೆ.

ಅದೇ ಇನ್ನೊಂದೆಡೆ ಅಭಿಷೇಕ್​ ಬಚ್ಚನ್​ ಕೂಡ ಐಶ್ವರ್ಯಾ ರೈಗೂ ಮೊದಲು ಕರಿಷ್ಮಾ ಕಪೂರ್ ಅವರನ್ನು ಇಷ್ಟಪಟ್ಟಿದ್ದರು. ಆದರೆ ಈ ಸಂಬಂಧ ಯಾವುದೋ ಕಾರಣಕ್ಕೆ ಮುರಿದು ಬಿದ್ದಿತ್ತು. ಅದೇ ಇನ್ನೊಂದೆಡೆ, ಐಶ್ವರ್ಯ ರೈ ಅವರ ಹೆಸರು ಸಲ್ಮಾನ್​ ಖಾನ್​ ಮತ್ತು ವಿವೇಕ್​ ಒಬೆರಾಯ್​ ಜೊತೆ ಸಾಕಷ್ಟು ಕೇಳಿಬಂದಿತ್ತು. ಇವರ ಜೊತೆ ಮದುವೆಯಾಗುವುದಾಗಿಯೂ ಸುದ್ದಿ ಹರಡಿತ್ತು. ಅದೇನೇ ಇದ್ದರೂ ಈಗ ಈ ದಂಪತಿ ಸಂತೋಷದಿಂದ ಬಾಳುತ್ತಿದ್ದಾರೆ.

20ವರ್ಷ ಹಿರಿಯ ನಟಿಯಲ್ಲಿ ನಿಮ್ಜೊತೆ ಮಲಗ್ಬೇಕಾ ಅಂದಿದ್ರಂತೆ ಅಭಿಷೇಕ್…!

ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಕರಿಷ್ಮಾ ಕಪೂರ್​ ಅವರಿಗಿಂತಲೂ ಮುನ್ನ ಅಭಿಷೇಕ್​ ಅವರಿಗೆ ಇನ್ನೋರ್ವ ನಟಿಗೆ ಹೃದಯ ಕೊಟ್ಟಿದ್ದರಂತೆ..! ಅದನ್ನು ಖುದ್ದು ನಟ ಈಗ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ, ಒಂದು ಕಾಲದಲ್ಲಿ ಬಾಲಿವುಡ್​ ಆಳಿದ ಮಾದಕ ನಟಿ ಜೀನತ್​ ಅಮನ್​.

ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಬ್ಯೂಟಿ ಅಭಿಷೇಕ್ ಬಚ್ಚನ್ ಅವರಿಗಿಂತ 20 ವರ್ಷ ದೊಡ್ಡವರು. ಅಭಿಷೇಕ್ ಬಚ್ಚನ್ ಜೀನತ್​ ಅವರ ಸೌಂದರ್ಯದಿಂದ ಎಷ್ಟು ಆಕರ್ಷಿತರಾಗಿದ್ದರು ಎಂದರೆ ಅವರು ಸ್ಪಷ್ಟವಾದ ಮಾತುಗಳಲ್ಲಿ ಮದುವೆಗೆ ಪ್ರಸ್ತಾಪಿಸಿದ್ದರಂತೆ..!

ಈ ಕುರಿತು ಈಗಲೂ ಅಭಿಷೇಕ್​ ಹೇಳುತ್ತಾರೆ. ನಾನು ಮದುವೆಯಾಗಿದ್ದರೂ ಈ ಸೂಪರ್ ಸ್ಟಾರ್ ಅನ್ನು ಇನ್ನೂ ಪ್ರೀತಿಸುತ್ತೇನೆ ಎಂದಿದ್ದಾರೆ. 70-80ರ ದಶಕದ ಟಾಪ್ ನಟಿಯ ಮೇಲೆ ತನಗೆ ಕ್ರಶ್ ಇತ್ತು ಎಂದು ಹೇಳಿಕೊಂಡಿರುವ ಅವರು, ಜೀನತ್ ಅವರಿಗೆ ಈಗ 72 ವರ್ಷ, ಆದರೂ ಅವರ ಚೆಲುವು ಇನ್ನೂ ಕಡಿಮೆಯಾಗಿಲ್ಲ. ನಾನು ಇಂದಿಗೂ ಅವರನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ತಮಗೆ ಈಕೆಯ ಮೇಲೆ ಕ್ರಷ್​ ಶುರುವಾಗಿದ್ದು ಐದನೇ ವರ್ಷದಿಂದಲೇ ಎಂದಿದ್ದಾರೆ.

ಅಭಿಷೇಕ್ ತಮ್ಮ ತಂದೆ ಅಮಿತಾಭ್​ ಬಚ್ಚನ್ ಅವರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಶೆಡ್ಯೂಲ್‌ನಲ್ಲಿದ್ದರು. ಈ ಚಿತ್ರದಲ್ಲಿ ಜೀನತ್ ಅಮನ್ ನಟಿಸಿದ್ದರು. ಆಗ ಅವರಿಗೆ 25 ವರ್ಷ ವಯಸ್ಸು. ಜೀನತ್ ಚಿತ್ರ ಸೆಟ್‌ಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಆಡುತ್ತಿದ್ದರು. ಆಗಲೇ ಅಭಿಷೇಕ್ ಆಕೆಯನ್ನು ಮದುವೆಗೆ ಪ್ರಸ್ತಾಪಿಸಿದ್ದರಂತೆ. ಇದನ್ನು ಕೇಳಿ ಅಲ್ಲಿದ್ದ ಚಿತ್ರತಂಡ ಮತ್ತು ಚಿತ್ರತಂಡ ನಕ್ಕಿತು. ಅಭಿಷೇಕ್ ಗೆ‌ ಮೊದಲು ನೀನು ದೊಡ್ಡವನಾಗು, ಆಮೇಲೆ ಮದುವೆಯಾಗು ಎಂದು ಹೇಳಿದ್ದರಂತೆ ಜೀನತ್​.

ಅಷ್ಟೇ ಅಲ್ಲದೇ, ಆಗ ಜೀನತ್​ ಅವರನ್ನು ಉದ್ದೇಶಿಸಿ ನಿಮ್ಮ ಜೊತೆ ಯಾರು ಮಲಗುತ್ತಾರೆ ಎಂದು ಕೇಳಿದ್ದರಂತೆ. ಆಗ ಆಕೆ ತಾನೊಬ್ಬಳೇ ಎಂದಾಗ ಅಭಿಷೇಕ್​ಗೆ ಅಚ್ಚರಿ ಆಗಿತ್ತಂತೆ. ಒಬ್ಬರೇ ಮಲಗುವುದು ಅವರು ಇನ್ನೂ ಕೇಳಿರಲಿಲ್ಲವಂತೆ. ಅದಕ್ಕೆ ಅವರು ನಾನು ನಿಮ್ಮ ಜೊತೆ ಮಲಗಲೇ ಎಂದಾಗ ಜೀನತ್​ ಸ್ವಲ್ಪ ದೊಡ್ಡವನಾಗು, ಆಮೇಲೆ ಮಲಗಬಹುದು ಎಂದಿದ್ದರಂತೆ! ಈ ಕುರಿತು ಆಗಿನ ಮಾಧ್ಯಮಗಳು ರಸವತ್ತಾಗಿ ಇದನ್ನು ಪ್ರಕಟಿಸಿದ್ದವು.

ಸಾಮಾನ್ಯವಾಗಿ ಹುಡುಗರಿಗೆ ತಮ್ಮಗಿಂತ ದೊಡ್ಡ ವಯಸ್ಸಿನ ಹುಡುಗಿಯರ ಮೇಲೆ ಅಥವಾ ಮಹಿಳೆಯರ ಮೇಲೆ ಕ್ರಷ್ ಆಗೋದು ಕಾಮನ್. ಅದಕ್ಕೆ ಹಾರ್ಮೋನು ಅಸಮತೋಲನವೂ ಒಂದು ರೀತಿ ಕಾರಣವಾಗಿರಬಹುದು. ಆದರೆ ಅದಕ್ಕೆ ಅಭಿಷೇಕ್ ಬಚ್ಚನ್ ಕೂಡಾ ಹೊರತಲ್ಲ ಎಂಬುವುದು ಅಚ್ಚರಿಕರ ಸಂಗತಿ ಅಲ್ವಾ..!!

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *