ಅರೆ ಇದೇನಿದು..! ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲು..! – ಪಾತ್ರೆ ಜೊತೆಗೆ ಮುಗಿಬಿದ್ರು ಜನ… ವೀಡಿಯೋ ವೈರಲ್..!

ಅರೆ ಇದೇನಿದು..! ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲು..! – ಪಾತ್ರೆ ಜೊತೆಗೆ ಮುಗಿಬಿದ್ರು ಜನ… ವೀಡಿಯೋ ವೈರಲ್..!

ನ್ಯೂಸ್ ಆ್ಯರೋ : ಜಗತ್ತಿನಲ್ಲಿ ನಡೆಯುವ ಅನೇಕ ವಿಸ್ಮಯಗಳನ್ನು ನಾವು ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಆದರೆ ಒಂದೊಂದು ವಿಚಾರಗಳನ್ನು ಕೆಲವರು ದೇವರು- ನಂಬಿಕೆ ಈ ದೃಷ್ಟಿಕೋನದಲ್ಲಿ ನೋಡಿದರೆ ಇನ್ನೂ ಕೆಲವು ಬುದ್ಧಿಜೀವಿಗಳು ಪ್ರಕೃತಿ, ವಿಜ್ಞಾನ ಈ ಪರಿಕಲ್ಪನೆಯಲ್ಲಿ ಅಳೆಯುತ್ತಾರೆ. ಇಲ್ಲಿ ನಡೆದಿರುವ ಘಟನೆ ಕೂಡಾ ಅಂತಹುದೇ ನೋಡಿ. ಬೋರ್ ವೆಲ್ ನಲ್ಲಿ ಹಾಲು ಬರುತ್ತಿರೋದನ್ನು ನೋಡಿ ಜನ ಶಾಕ್ ಆಗಿದ್ದಾರೆ…!

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬಸ್‌ ನಿಲ್ದಾಣದ ಬಳಿ ಇರುವ ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲಿನ ಬಣ್ಣವನ್ನೇ ಹೋಲುವ ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ.

ಹೌದು.. ಉತ್ತರ ಪ್ರದೇಶದ ಮೊರಾಬಾದ್ ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಇರುವಂತಹ ಬೋರ್ ವೆಲ್ ನಲ್ಲಿ ನೀರಿನ ಬದಲು ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ. ಅಲ್ಲದೆ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೀಗೆ ವೈರಲ್ ಆಗುತ್ತಿದ್ದಂತೆ ಬೋರ್ ವೆಲ್ ಬಳಿ ಸಾಕಷ್ಟು ಮಂದಿ ಜಮಾಯಿಸಿದ್ದು ಈ ನಡುವೆ ಇಲ್ಲಿ ಸೇರಿದ ಜನ ಇದು ನೀರಲ್ಲ ಹಾಲು ಎಂದು ಭಾವಿಸಿ ಮನೆಯಿಂದ ಬಾಟಲಿ, ಪಾತ್ರೆ, ಕ್ಯಾನ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ತಂದು ಸರತಿ ಸಾಲಿನಲ್ಲಿ ನಿಂತು ಪಾತ್ರೆಗಳಿಗೆ ತುಂಬಿಸಿ ಮನೆಗೆ ಒಯ್ಯುತ್ತಿದ್ದಾರೆ.

ಬೋರ್ ವೆಲ್ ನಲ್ಲಿ ಬರ್ತಿರೋದು ನಿಜಕ್ಕೂ ಹಾಲೇನಾ..?

ಬೋರ್ ವೆಲ್ ನಲ್ಲಿ ಹಾಲು ಬರುತ್ತಿರುವ ವಿಚಾರ ಇಲ್ಲಿನ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದೆ ಆ ಬಳಿಕ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೋರಿಂಗ್ ಪರಿಶೀಲನೆ ನಡೆಸಿದರು. ಈ ವೇಳೆ ಬೋರ್ ವೆಲ್ ನಲ್ಲಿ ಬರುತ್ತಿರುವುದು ಹಾಲಲ್ಲ ಬದಲಾಗಿ ಕಲುಷಿತ ನೀರು ಎಂದು ಮನವರಿಕೆ ಮಾಡಿದ್ದಾರೆ.

ಹ್ಯಾಂಡ್ ಪಂಪ್‌ನ ಕೆಳಭಾಗವು ಹಾನಿಗೊಳಗಾಗಿದ್ದು, ಅದನ್ನು ಪ್ಲಗ್ ಮಾಡಿದಾಗ ಬಿಳಿ ಬಣ್ಣದ ಕಲುಷಿತ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ತನಿಖೆ ನಡೆಸುವಂತೆ ಬಿಲಾರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪುರಸಭೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಬೋರಿಂಗ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ನೀರು ಸೇವನೆಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ವೀಡಿಯೋದಲ್ಲಿ ಏನಿದೆ..?

ಸಂಜಯ್ ತ್ರಿಪತಿ ಎಂಬವರ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದ್ದು ಬಿಳಿ ಬಣ್ಣದ ನೀರು ಬರುತ್ತಿರುವುದನ್ನು ಕಂಡ ಜನ ಅವಕ್ಕಾಗಿದ್ದಾರೆ. ಆದರೆ ಮೌಢ್ಯತೆ ತುಂಬಿ ಹೋದ ಜನರು ಇದನ್ನು ಹಾಲೆಂದೇ ಪರಿಗಣಿಸಿ ಕುಡಿದರೂ ಅಚ್ಚರಿಯಿಲ್ಲ ಬಿಡಿ. ಆದರೆ ಕಲುಷಿತ ನೀರಿನ ಬಗ್ಗೆ ಮುಂಜಾಗೃತೆ ವಹಿಸಿ ಆ ನಿಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *