2018ರ ಸೇನಾ ಶಿಬಿರದ ದಾಳಿಯ ಮಾಸ್ಟರ್ ಮೈಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆ – ಶಿರಚ್ಛೇದನಗೈದ ಸ್ಥಿತಿಯಲ್ಲಿ POKಯಲ್ಲಿ ಪತ್ತೆಯಾಯ್ತು ಮೃತದೇಹ..!!

2018ರ ಸೇನಾ ಶಿಬಿರದ ದಾಳಿಯ ಮಾಸ್ಟರ್ ಮೈಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆ – ಶಿರಚ್ಛೇದನಗೈದ ಸ್ಥಿತಿಯಲ್ಲಿ POKಯಲ್ಲಿ ಪತ್ತೆಯಾಯ್ತು ಮೃತದೇಹ..!!

ನ್ಯೂಸ್ ಆ್ಯರೋ : ಲಷ್ಕರ್ ಭಯೋತ್ಪಾದಕ ಖ್ವಾಜಾ ಶಾಹಿದ್ ಶವ ಕಳೆದ ಭಾನುವಾರ ತಡರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದೆ.

2018ರಲ್ಲಿ ಜಮ್ಮುವಿನ ಸೇನಾ ಶಿಬಿರದ ಮೇಲೆ ದಾಳಿಗೆ ಕಾರಣವಾಗಿದ್ದ ಮಾಸ್ಟರ್ ಮೈಂಡ್ ಖ್ವಾಜಾ ಶಾಹಿದ್ ಶವದ ಶಿರಚ್ಛೇದ ಮಾಡಲಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಆತನ ಅಪಹರಣ ನಡೆಸಲಾಗಿತ್ತು ಎನ್ನಲಾಗಿದೆ.

ಜಮ್ಮುವಿನ ಸುಂಜುವನ್ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಯೋಜನೆಯನ್ನೂ ಶಾಹಿದ್ ರೂಪಿಸಿದ್ದ. ಈ ದಾಳಿಯಲ್ಲಿ ಆರು ಜವಾನರು, ಒಬ್ಬ ಸೇನಾಧಿಕಾರಿ, ಓರ್ವ ನಾಗರಿಕ ಮೃತಪಟ್ಟಿದ್ದರು.

ಅಕ್ಟೋಬರ್ ನಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಅವರ ವಿಶ್ವಾಸಾರ್ಹ ಬುಡಕಟ್ಟು ನಾಯಕ ದಾವುದ್ ಮಲಿಕ್ ನನ್ನು ಉತ್ತರ ವಜೀರಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದರು. ಬಳಿಕ ಕರಾಚಿಯಯಲ್ಲಿ ಹಫೀಜ್ ಸಯೀದ್ ನ ನಿಕಟವರ್ತಿ ಮುಫ್ತಿ ಖೈಸರ್ ಫಾರೂಕ್ ನನ್ನು ಕೊಲೆ ಮಾಡಲಾಗಿತ್ತು. ಬಳಿಕ ಈಗ ಈ ಘಟನೆ ನಡೆದಿದೆ.

ಡೇರಾ ಇಸ್ಮಾಯಿಲ್ ಖಾನ್ ಮೂಲದ ಫಾರೂಕ್, ಜಾಗತಿಕವಾಗಿ ನಿಯೋಜಿತ ಭಯೋತ್ಪಾದಕ ಹಫೀಜ್ ಸಯೀದ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು.

ಐಸಿ-814 ವಿಮಾನದ ಅಪಹರಣಕಾರ, ಜೈಶ್-ಎ-ಮೊಹಮ್ಮ ದ್ (ಜೆಎಂ) ಕಾರ್ಯ ಕರ್ತ ಮಿಸ್ತ್ರಿ ಜಹೂರ್ ಇಬ್ರಾಹಿಂ ಅಲಿಯಾಸ್ ಜಾಹಿದ್ ಅಖೂಂಡ್ ಹತ್ಯೆ ಯೊಂದಿಗೆ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಯೋತ್ಪಾದಕರು ಮತ್ತು ಕಾರ್ಯಕರ್ತರ ನಿರಂತರ ಹತ್ಯೆಗಳ ಸರಣಿ ಆರಂಭವಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಸದಸ್ಯ ಜಾಹಿದ್ ಅಖೂಂಡ್ ನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

Related post

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಬಳ

ಡೈರೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ UIDAI; ತಿಂಗಳಿಗೆ 2 ಲಕ್ಷಕ್ಕೂ ಅಧಿಕ…

ನ್ಯೂಸ್ ಆರೋ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​ ಹುದ್ದೆಗಳು…
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಆ್ಯರೋ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿ ಇಂದು…
ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ ನ್ಯಾಯಾಲಯ

ಆರೋಗ್ಯ ಸಮಸ್ಯೆ; 14 ತಿಂಗಳ ಬಳಿಕ ಸ್ಯಾಂಟ್ರೋ ರವಿಗೆ ಜಾಮೀನು ನೀಡಿದ…

ನ್ಯೂಸ್ ಆ್ಯರೋ : ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಗೆ ಮೈಸೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಬಂಧಿತನಾಗಿ…

Leave a Reply

Your email address will not be published. Required fields are marked *