ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಕದನ; ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಜೋ ಬೈಡನ್ ಪುತ್ರನ ಮನೆ ಭಸ್ಮ

Los Angeles
Spread the love

ನ್ಯೂಸ್ ಆ್ಯರೋ: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಕಾಡಿಚ್ಚು ತನ್ನ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತಲೇ ಇದೆ. ಅಮೆರಿಕದ 2ನೇ ಅತಿದೊಡ್ಡ ನಗರವಾದ ಕ್ಯಾಲಿಫೋರ್ನಿಯಾ ಬಹುತೇಕ ಹೊತ್ತಿ ಉರಿಯುತ್ತಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈಗಾಗಲೇ ಪೆಸಿಫಿಕ್‌ ಪಾಲಿಸೇಡ್ಸ್‌ ಪ್ರದೇಶದ ನೆರಹೊರೆಯನ್ನು ಆವರಿಸಿದ್ದು, 19,000 ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಅಲ್ಟಾಡೆನಾದಲ್ಲಿ 13,000 ಎಕರೆ ಪ್ರದೇಶ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ನಿಯಂತ್ರಿಸಲು ಅಮೆರಿಕ ಕ್ಯಾಲಿಫೋರ್ನಿಯಾದ ನ್ಯಾಷನಲ್‌ ಗಾರ್ಡ್‌ ತಂಡವನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

Destroyed

ಲಾಸ್‌ ಏಂಜಲೀಸ್‌ ನಗರಾದ್ಯಂತ ರಾಷ್ಟ್ರೀಯ ಪ್ರಶಸ್ತಿ, ಆಸ್ಕರ್‌ ಪ್ರಶಸ್ತಿ ವಿಜೇತ ಹಾಲಿವುಡ್‌ ನಟರ ಮನೆಗಳು ಸುಟ್ಟು ಕರಕಲಾಗಿವೆ. ಒಟ್ಟಾರೆ 9,000ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಈ ಮಧ್ಯೆ ಸಂದರ್ಭ ಬಳಸಿಕೊಂಡ ಕೆಲವರು ಲೂಟಿ ಮಾಡಲು ಪ್ರಾರಂಭಿಸಿದ್ದು, ಈ ಸಂಬಂಧ 20 ಜನರನ್ನು ಬಂಧಿಸಲಾಗಿದೆ.

ಇನ್ನು ಲಾಸ್‌ ಏಂಜಲೀಸ್‌ನಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಅವರ ಪುತ್ರ ಹಂಟರ್‌ ಬೈಡನ್‌ ಅವರ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Biden

ಕ್ಯಾಲಿಫೋರ್ನಿಯಾದ ಮಾಲಿಬು ನಗರದಲ್ಲಿರುವ ಹಂಟರ್‌ ಬೈಡನ್‌ ಅವರ ಮನೆ ಸುಟ್ಟು ಭಸ್ಮವಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹರಿದಾಡುತ್ತಿವೆ. 1950ರ ಸಂದರ್ಭದಲ್ಲಿ 15,800 ಡಾಲರ್‌ (13.56 ಲಕ್ಷ ರೂ.) ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದ ಆಕರ್ಷಣೆಯಾಗಿದ್ದ ಈ ಮನೆ 3 ಬೆಡ್‌ರೂಮ್‌, ಮೂರು ಬಾತ್‌ ರೂಮ್‌, 1 ಐಷಾರಾಮಿ ಗೌರ್ಮೆಟ್ ಅಡುಗೆಮನೆಯನ್ನು ಒಳಗೊಂಡಿತ್ತು. ಪೆಸಿಫಿಕ್‌ ಸಾಗರ ವೀಕ್ಷಣೆಗೆ ವಿಶೇಷ ಬಾಲ್ಕನಿಯನ್ನೂ ಈ ಮನೆ ಒಳಗೊಂಡಿತ್ತು. ಇದೀಗ ಕಾಡ್ಗಿಚ್ಚಿನಿಂದ ಸುಟ್ಟು ಭಸ್ಮವಾಗಿದೆ. ಅದ್ರೆ ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ ಎಂದು ಬೈಡನ್‌ ಹೇಳಿದ್ದಾರೆ ಎನ್ನಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!