
ಹಣೆಯಲ್ಲಿ ಪತಿಯ ಹೆಸರು ಹಚ್ಚೆ ಹಾಕಿಸಿದ ಪತ್ನಿ – ಪ್ರೀತಿ ಈ ರೀತಿ ವ್ಯಕ್ತಪಡಿಸೋದು ಹುಚ್ಚುತನ ಎಂದ ನೆಟ್ಟಿಗರು..!!
- Viral News
- May 25, 2023
- No Comment
- 75
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಟ್ಯಾಟು ಹಾಕುವುದು ಟ್ರೆಂಡ್ ಆಗಿ ಬದಲಾಗಿದೆ. ಕೆಲವರು ತಮ್ಮಿಷ್ಟದ ದೇವರು, ವ್ಯಕ್ತಿಗಳು, ವಸ್ತುಗಳ ಚಿತ್ರ, ಹೆಸರುಗಳನ್ನು ಟ್ಯಾಟುಗಳನ್ನು ಹಾಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೈ, ಕುತ್ತಿಗೆ, ತೋಳು ಮುಂತಾದೆಡೆ ಟ್ಯಾಟು ಹಾಕಲಾಗುತ್ತದೆ. ಆದರೆ ಇಲ್ಲೊಬ್ಬರು ಮಹಿಳೆ ಹಣೆ ಮೇಲೆ ಟ್ಯಾಟು ಹಾಕಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.
ಈ ಮಹಿಳೆ ತನ್ನ ಹಣೆ ಮೇಲೆ ಪತಿಯ ಹೆಸರು ಕೆತ್ತಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಟ್ಯಾಟು ಸ್ಟುಡಿಯೋವೊಂದು ಈ ವೀಡಿಯೋವನ್ನು ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿದೆ. ಸದ್ಯ ಇದು ವೈರಲ್ ಆಗಿದೆ.
ವೀಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬರು ಹಣೆಗೆ ಟ್ಯಾಟು ಹಾಕಿಸಿಕೊಳ್ಳುತ್ತಿದ್ದಾರೆ. ಸತೀಶ್ ಎಂಬ ಹೆಸರನ್ನು ಕೆತ್ತಿಸಿಕೊಳ್ಳುತ್ತಿದ್ದು, ಈ ವೇಳೆ ಸ್ವಲ್ಪ ಹಿಂಜರಿಕೆಯಲ್ಲಿರುವಂತೆ ಕಾಣಿಸುತ್ತಿದೆ.
ನೆಟ್ಟಿಗರಿಂದ ಆಕ್ಷೇಪ
ವೀಡಿಯೋ ನೋಡಿದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಚಾರಕ್ಕೆ ಟ್ಯಾಟು ಕಂಪೆನಿ ಇಂತಹ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಇದು ನಿಜವಲ್ಲ ಎಂದಿದ್ದಾರೆ. ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದು ಹುಚ್ಚುತನ ಎಂದೂ ಕೆಲವರು ಹೇಳಿದ್ದಾರೆ.