
Spit Sale : ವಿಚಿತ್ರ ಆದರೂ ನಿಜ – ಎಂಜಲು ಮಾರಿ ಪ್ರತಿ ತಿಂಗಳು 41 ಲಕ್ಷ ರೂ.ಗಳಿಸುತ್ತಾಳೆ ಈ ಮಹಿಳೆ..!
- Viral News
- May 25, 2023
- No Comment
- 104
ನ್ಯೂಸ್ ಆ್ಯರೋ : ಕೆಲವೊಮ್ಮೆ ನಾವು ಕನಸಿನಲ್ಲಿಯೂ ಯೋಚಿಸದ ವಸ್ತುಗಳೇ ತುಂಬಾ ಬೆಲೆಬಾಳುತ್ತವೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ ಮಹಿಳೆಯೊಬ್ಬರು ತಮ್ಮ ಎಂಜಲು ಮಾರಿ ತಿಂಗಳಿಗೆ 41 ಲಕ್ಷ ರೂ. ಸಂಪಾದಿಸುತ್ತಿದ್ದಾರೆ..!
ಇಂಗ್ಲೆಂಡ್ ನ 22 ವರ್ಷದ ಲತೀಶಾ ಜೋನ್ಸ್ ಎಂಜಲು ಮಾರಿ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ. ತನ್ನ ಸಾಲಗಳನ್ನೆಲ್ಲಾ ತೀರಿಸಿಕೊಂಡಿರುವ ಅವರು ಇತ್ತೀಚೆಗೆ ಹೊಸ ಫ್ಲ್ಯಾಟ್ ಅನ್ನೂ ಖರೀದಿಸಿದ್ದಾರೆ. ”ಎಂಜಲನ್ನು ಮಾರಾಟ ಮಾಡುವ ಉದ್ಯೋಗಕ್ಕೆ ಇತ್ತೀಚೆಗೆ ನಾಲ್ಕು ವರ್ಷವಾಗಿದೆ. ಓನ್ಲಿ ಫ್ಯಾನ್ಸ್ ಆಗಿ ಇದನ್ನು ಆರಂಭಿಸಿದೆ” ಎಂದು ಅವರು ಹೇಳುತ್ತಾರೆ. ಅರೆಕಾಲಿಕೆ ಉದ್ಯೋಗವಾಗಿದ್ದ ಇದು ಈಗ ಪೂರ್ಣ ಪ್ರಮಾಣದ ಉದ್ಯೋಗವಾಗಿ ಬದಲಾಗಿದೆ.
”ಆರಂಭದಲ್ಲಿ ಒಂದು ಬಾಟಲ್ ಎಂಜಲು ಸಿಗಬಹುದೇ ಎಂದು ಪ್ರಶ್ನಿಸಿದ್ದರು. ಮೊದಲಿಗೆ ಇದನ್ನು ತಮಾಷೆಗಾಗಿ ಹೇಳುತ್ತಿದ್ದಾರೆ ಎಂದುಕೊಂಡಿದ್ದೆ. ಕೊನೆಗೆ ಅದು ನಿಜ ಎಂದು ಗೊತ್ತಾಯಿತು” ಎಂದು ಹೇಳುವ ಲತೀಶಾ ತಮ್ಮ ಮೊದಲ ಒಂದು ಬಾಟಲ್ ಎಂಜಲನ್ನು 30 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರಂತೆ. ಒಂದು ಬಾಟಲ್ ಎಂಜಲಿನಿಂದ ಒಂದೇ ಸಮಯಕ್ಕೆ ಗಳಿಸಿದ ಗರಿಷ್ಠ ಮೊತ್ತ 1.5 ಲಕ್ಷ ರೂ. ಎಂದು ವಿವರಿಸುತ್ತಾರೆ.
ವಿಚಿತ್ರ ಬೇಡಿಕೆಗಳು!
”ಒಂದು ವಾರಗಳ ಕಾಲ ನಾನು ಮಲಗಿದ್ದ ಬೆಡ್ ಶೀಟ್, ಜಿಮ್‌ಗೆ ಬಳಸಿದ ಬಟ್ಟೆಗಳು, ಸ್ನಾನ ಮಾಡಿದ ನೀರು, ಟೂತ್‌ಬ್ರಶ್, ಟೂತ್‌ಪೇಸ್ಟ್ ಉಗಿದಿದ್ದು ಹೀಗೆ ನೀವು ಛೀ ಥೂ ಎಂದು ಹೇಳುವಂಥ ಎಲ್ಲಾ ವಸ್ತುಗಳು ಬೇಕು ಎನ್ನುವ ಬೇಡಿಕೆ ನನಗೆ ಬಂದಿತ್ತು” ಎಂದು ಲತೀಶಾ ಹೇಳಿದ್ದಾರೆ.