
ತನ್ನ ಇಬ್ಬರೂ ಹೆಣ್ಣು ಮಕ್ಕಳು ತಮ್ಮ ಗಂಡನಿಗೆ ಡೈವೋರ್ಸ್ ನೀಡಿ ನಿತ್ಯಾನಂದನ ಜೊತೆಗಿದ್ದಾರೆ..!! – ಕನ್ನಡ ಚಿತ್ರರಂಗದ ನಟನ ಕಣ್ಣೀರ ಕಹಾನಿ ಏನಿದು?
- ಮನರಂಜನೆ
- May 25, 2023
- No Comment
- 189
ನ್ಯೂಸ್ ಆ್ಯರೋ : ದಕ್ಷಿಣ ಭಾರತದ ಹಿರಿಯ ನಟ ಅಶೋಕ್ ಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳು ನಿತ್ಯಾನಂದ ಸ್ವಾಮಿಯ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅಶೋಕ್ ಕುಮಾರ್ ಮಾಧ್ಯಮದ ಮುಂದೆ ಹೇಳಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರಿಗೆ ಆಪ್ತರಾಗಿದ್ದ ಅಶೋಕ್ ಕುಮಾರ್ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಖ್ಯಾತಿ ಗಳಿಸಿದ್ದ ಅಶೋಕ್ ಕುಮಾರ್ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದರು. ಇದೀಗ ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ನಮಗೆ ಮೂರು ಜನ ಹೆಣ್ಣು ಮಕ್ಕಳು. ಅವರು ಇಷ್ಟಪಟ್ಟವರ ಜೊತೆ ಮದುವೆ ಮಾಡಿಸಿಕೊಟ್ಟೆ. ನನ್ನ ಮೊದಲನೇ ಮಗಳು ಅಮೆರಿಕಾದಲ್ಲಿ ಇದ್ದಾಳೆ. ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋದ ನನ್ನ 2ನೇ ಮಗಳು ರಂಜಿತಾ ಕೂಡ ಆಶ್ರಮಕ್ಕೆ ಹೋಗಲು ಆರಂಭಿಸಿದ್ದಳು ಎಂದು ಅಶೋಕ್ ಕುಮಾರ್ ವಿವರಿಸಿದ್ದಾರೆ.
ನನ್ನ ಇಬ್ಬರು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ, ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ. ಇವತ್ತಿಗೂ ಅವರು ಅಲ್ಲೇ ಇದ್ದಾರೆ. ಇದುವರೆಗೆ ನನ್ನ ಇಬ್ಬರೂ ಮಕ್ಕಳು ನನ್ನನ್ನು ಸಂಪರ್ಕಿಸಲಿಲ್ಲ. ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟಳು ಎಂದು ಅಶೋಕ್ ಕುಮಾರ್ ಭಾವುಕರಾಗಿದ್ದಾರೆ.