ಲಕ್ಷ ಲಕ್ಷ ಖರ್ಚು ಮಾಡಿ ಡಿವೋರ್ಸ್ ಪಾರ್ಟಿ ನಡೆಸಿದ ಯುವತಿ – ವಿಚ್ಚೇದನದ ಕಾರಣ ಕೇಳಿದ್ರೇ ನೀವು ದಂಗಾಗೋದು ಗ್ಯಾರಂಟಿ..!

ಲಕ್ಷ ಲಕ್ಷ ಖರ್ಚು ಮಾಡಿ ಡಿವೋರ್ಸ್ ಪಾರ್ಟಿ ನಡೆಸಿದ ಯುವತಿ – ವಿಚ್ಚೇದನದ ಕಾರಣ ಕೇಳಿದ್ರೇ ನೀವು ದಂಗಾಗೋದು ಗ್ಯಾರಂಟಿ..!

ನ್ಯೂಸ್ ಆ್ಯರೋ : ಇತ್ತೀಚೆಗೆ ಮಾಡೆಲ್ ಸೆಲೆಬ್ರಿಟಿಗಳ ವಲಯದಲ್ಲಂತೂ ಮದುವೆಗಳಿಗಿಂತ ವಿಚ್ಛೇದನದ ಸುದ್ದಿಗಳೇ ಹೆಚ್ಚುತ್ತಿದೆ. ಸದ್ಯ, ಮಾಡೆಲ್ ಒಬ್ಬಳು ತನ್ನ ಪತಿಗೆ ವಿಚ್ಚೇದನ ನೀಡಿದ್ದು, ಇದೇ ಖುಷಿಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಅದ್ದೂರಿಯಾಗಿ ಡಿವೋರ್ಸ್ ಪಾರ್ಟಿ ಆಯೋಜಿಸಿದ್ದಾಳೆ. ಆದರೆ ವಿಚ್ಚೇದನಕ್ಕೆ ಆಕೆ ನೀಡಿದ ಕಾರಣ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಈ ಇಂಟ್ರೆಸ್ಟಿಂಗ್ ಸುದ್ದಿಯ ಡೀಟೈಲ್ಸ್ ಇಲ್ಲಿದೆ ನೋಡಿ.

ಲಕ್ಷ ಲಕ್ಷ ಖರ್ಚು ಮಾಡಿ ಡಿವೋರ್ಸ್ ಪಾರ್ಟಿ..!

ಮದುವೆಯಾದ ಗಂಡ-ಹೆಂಡಿರ ನಡುವೆ ಉತ್ತಮವಾದ ಪ್ರೀತಿ ವಿಶ್ವಾಸ ಇಲ್ಲದೇ ಹೋದರೆ ಆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಇಂದಿನ ತಲೆಮಾರಿಗಂತೂ ಮದುವೆಗಿಂತ ವಿಚ್ಚೇದನದಲ್ಲೇ ಆಸಕ್ತಿ ಹೆಚ್ಚಾದಂತಿದೆ. ಸಾಮಾನ್ಯವಾಗಿ ವಿಚ್ಚೇದನ ಪಡೆದಾಗ ಅಥವಾ ನೀಡಿದಾಗ ಒಂದಿಷ್ಟು ಬೇಸರವಾಗುವುದು ಸಹಜ ಆದರೆ ಬ್ರೆಜಿಲ್ ದೇಶದ ಮಹಿಳೆ, ವೃತ್ತಿಯಲ್ಲಿ ಮಾಡೆಲ್ ಆಗಿರುವ ಲಾರಿಸ್ಸಾ ಸಂಪನಿ ಎಂಬಾಕೆ ತನ್ನ ಗಂಡನಿಗೆ ವಿಚ್ಚೇದನ ನೀಡಿದ್ದಲ್ಲದೇ, ಇದೇ ಖುಷಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಡಿವೋರ್ಸ್ ಪಾರ್ಟಿ ಆಚರಿಸಿ, ಕುಣಿದು ಕುಪ್ಪಳಿಸಿದ್ದಾಳೆ.

ಮದುವೆಯಾದ 6 ತಿಂಗಳಲ್ಲೇ ವಿಚ್ಚೇದನ..!

ಹೌದು, ವರದಿಗಳ ಪ್ರಕಾರ ಲಾರಿಸ್ಸಾ ಮದುವೆಯಾಗಿ ಕೇವಲ 6 ತಿಂಗಳು ಕಳೆದಿದ್ದು, ಅಷ್ಟರೊಳಗೆ ಪತಿಗೆ ವಿಚ್ಚೇದನ ನೀಡಿದ್ದಾಳೆ.ಈ ಜೋಡಿ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಲಿವಿಂಗ್ ರಿಲೇಷನ್ ನಲ್ಲಿದ್ದರು. ಸದ್ಯ, ಪತಿಯಿಂದ ದೂರವಾಗಿರುವ ಲಾರಿಸ್ಸಾ ಅದ್ದೂರಿಯಾಗಿ ಡಿವೋರ್ಸ್ ಪಾರ್ಟಿ ಆಯೋಜಿಸಿದ್ದು ಕೇಕ್ ಕತ್ತರಿಸಿ ತನ್ನ ಸಂಗಡಿಗರೊಂದಿಗೆ ಕುಣಿದು, ಕುಪ್ಪಳಿಸಿದ್ದಾಳೆ. ಈ ಪಾರ್ಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲಾರಿಸ್ಸಾ ಹಂಚಿಕೊಂಡಿದ್ದಾಳೆ.

ವಿಚ್ಚೇದನಕ್ಕೆ ಕಾರಣ ಏನ್ ಗೊತ್ತಾ?

ಸದ್ಯ, ವಿಚ್ಚೇದನದ ವಿಚಾರಕ್ಕೆ ಸುದ್ದಿಯಾಗಿರುವ ಲಾರಿಸ್ಸಾ ತನ್ನ ಪತಿಗೆ ಡಿವೋರ್ಸ್ ನೀಡಲು ಕೊಟ್ಟ ಕಾರಣ ಕೇಳಿದ್ರೇ ನೀವು ದಂಗಾಗೋದು ಗ್ಯಾರಂಟಿ. ಹೌದು, 24 ವರ್ಷದ ಮಾಡೆಲ್ ಲಾರಿಸ್ಸಾ ಹುಡುಗರ ಜೊತೆಗೆ ಮಾತ್ರವಲ್ಲದೇ ಹುಡುಗಿಯರ ಜೊತೆಗೂ ಕೂಡ ಸಂಬಂಧ ಹೊಂದಲು ಬಯಸುತ್ತಾಳಂತೆ. ಇದಕ್ಕೆ ಪತಿ ಒಪ್ಪದ ಕಾರಣ ಲಾರಿಸ್ಸಾ ವಿಚ್ಚೇದನ ನೀಡಿದ್ದಲ್ಲದೇ, ಬರೋಬ್ಬರಿ 4 ಲಕ್ಷ ಖರ್ಚು ಮಾಡಿ ಡಿವೋರ್ಸ್ ಪಾರ್ಟಿ ನಡೆಸಿ ಖುಷಿ ಪಟ್ಟಿದ್ದಾಳೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *