
ತುಂಬಿದ ಸಭೆಯಲ್ಲಿ ಮಹಿಳೆಯ ತುಟಿಗೆ ಚುಂಬಿಸಲು ಯತ್ನಿಸಿದ ವಿದೇಶಾಂಗ ಸಚಿವ – ವೈರಲ್ ಆಯ್ತು ಡರ್ಟಿ ವಿಡಿಯೋ..!
- ಅಂತಾರಾಷ್ಟ್ರೀಯ ಸುದ್ದಿ
- November 6, 2023
- No Comment
- 95
ನ್ಯುಸ್ ಆ್ಯರೋ : ದೇಶ ಒಂದರ ವಿದೇಶಾಂಗ ಸಚಿವರು ಅಂದರೆ ಅದು ಅತ್ಯಂತ ಜವಾಬ್ದಾರಿಯುತ ಸ್ಥಾನ. ಆದರೆ ಇದೀಗ ಅಂತಹದ್ದೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವಿದೇಶಾಂಗ ಸಚಿವರು ತುಂಬಿದ ಸಭೆಯಲ್ಲಿ ಮಹಿಳೆಯೊಬ್ಬರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ.
ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ತುಂಬಿದ ಸಭೆಯಲ್ಲಿ ಪೋಲಿ ಸಚಿವನ ಕಿಸ್ ಮಸ್!
ಹೌದು, ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ ಸೆಷನ್ ವೇಳೆ ಕ್ರೋವೆಷಿಯಾದ 65 ವರ್ಷದ ಪೋಲಿ ವಿದೇಶಾಂಗ ಸಚಿವ ಗೋರ್ಡನ್ ಗ್ರ್ಲಿಕ್ ರಾಡ್ ಮನ್ ತನ್ನ ಪಕ್ಕದಲ್ಲಿ ನಿಂತಿದ್ದ ಜರ್ಮನಿಯ ಮಹಿಳಾ ಪ್ರತಿನಿಧಿ ಅನ್ನಾಲೆನ್ ಬೇರ್ ಬಾಕ್ ಎಂಬವರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.
ಸಿಡಿದೆದ್ದ ಮಹಿಳಾ ಹಕ್ಕುಗಳ ಕಾರ್ಯಕರ್ತೆ..!
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಘಟನೆ ನಡೆದ ವೇಳೆ ಸಚಿವರ ವರ್ತನೆಯಿಂದ ಅನ್ನಾಲೆನ ಕಸಿವಿಸಿಗೊಂಡಿದ್ದನ್ನು ಗಮನಿಸಬಹುದು. ಆದರೆ ಈ ಬಗ್ಗೆ ಸಚಿವ ರಾಡ್ ಮನ್ ತಲೆ ಕೆಡಿಸಿಕೊಂಡಿಲ್ಲ. ಆದರೆ ಈ ಘಟನೆಯಿಂದ ಸಿಡಿದೆದ್ದಿರುವ ಕ್ರೊವೆಷಿಯಾದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ರಾಡಾ ಬೋರಿಕ್, ‘ಸಚಿವರ ವರ್ತನೆ ಅತ್ಯಂತ ಅನುಚಿತ, ತುಂಬಿದ ಸಭೆಯಲ್ಲಿ ಇಂತಹ ವರ್ತನೆ ಸರಿಯಲ್ಲ’ ಎಂದಿದ್ದಾರೆ.