ಒಂದು ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಗಳು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? – ಆಯ್ಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..!

ಒಂದು ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಗಳು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? – ಆಯ್ಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..!

ನ್ಯೂಸ್ ಆ್ಯರೋ : ಶತಮಾನದ ಹಿಂದೆ ಇಂಗ್ಲೆಂಡಿನಲ್ಲಿ ಹುಟ್ಟಿದ ಕ್ರಿಕೆಟ್ ಇಂದಿಗೆ ಜಗತ್ತಿನ ಎರಡನೇ ಜನಪ್ರಿಯ ಕ್ರೀಡೆ ಎನಿಸಿಕೊಂಡಿದೆ. ಭಾರತದಲ್ಲಂತೂ ಕ್ರಿಕೆಟ್ ರಾಷ್ಟ್ರೀಯ ಕ್ರೀಡೆ ಹಾಕಿಗಿಂತಲೂ ಹೆಚ್ಚು ಜನಮನ್ನಣೆ ಗಳಿಸಿದೆ‌. ಕ್ರಿಕೆಟ್ ಆಟಕ್ಕೆ, ಆಟಗಾರರಿಗಿರುವ ಸಂಭಾವನೆ, ಜನಪ್ರಿಯತೆ ಕಂಡು ಎಷ್ಟೋ ಯುವಕರು ಕ್ರಿಕೆಟರ್ ಆಗುವ ಕನಸು ಹೊತ್ತಿರುತ್ತಾರೆ‌. ಆದರೆ ಈ ಕ್ರಿಕೆಟ್ ನಲ್ಲಿ ಅಂಪೈರ್ ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ‌ ಎಂಬುದು ಗಮನಾರ್ಹ ಸಂಗತಿ. ಒಂದು ಪಂದ್ಯಕ್ಕೆ ಅಂಪೈರ್ ಗಳು ಪಡೆಯುವ ಸಂಭಾವನೆ ಕೇಳಿದ್ರೆ ನೀವು ಅಚ್ಚರಿ ಪಡುವುದು ಗ್ಯಾರಂಟಿ‌..!

ಭಾರತದ ದೇಶಿಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆ‌.
ಕ್ರಿಕೆಟ್‌ನಲ್ಲಿ ಅಂಪೈರ್ ಪ್ರಮುಖ ಪಾತ್ರ ವಹಿಸುತ್ತಾರೆ‌. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಅಂಪೈರ್ ಗಳು ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಸದ್ಯ, ಬಿಸಿಸಿಐ ಭಾರತೀಯ ಅಂಪೈರ್ ಗಳಿಗೆ ಕಠಿಣ ತರಭೇತಿ ನೀಡುತ್ತಿದೆ‌. ಇದೊಂದು ಹೈ ಪ್ರೊಫೈಲ್ ವೃತ್ತಿಯಾಗಿದ್ದು, ತ್ವರಿತ ಚಿಂತನೆ ಹಾಗೂ ತೀಕ್ಷ್ಣವಾದ ಕೌಶಲ್ಯ ಅಗತ್ಯವಿರುತ್ತದೆ‌. ಅಂಪೈರ್ ಒಬ್ಬನ ತೀರ್ಪು ಪಂದ್ಯಾಟದ ಪಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ‌. ಹಾಗಿದ್ದರೆ ಒಬ್ಬ ಅಂಪೈರ್ ಆಗಲು ಯಾವೆಲ್ಲ ಕೌಶಲ್ಯಗಳು ಬೇಕು ನೋಡೋಣ‌.

ಕ್ರಿಕೆಟ್ ಅಂಪೈರ್ ಆಗಲು ಅಗತ್ಯವಿರುವ ಕೌಶಲ್ಯಗಳಿವು..

  1. ಅಂಪೈರ್ ಕ್ರಿಕೆಟ್ ಆಟದ ನಿಯಮ ಹಾಗೂ ನಿಬಂಧನೆಗಳ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿರಬೇಕು.
  2. ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.
  3. ನಿಖರವಾದ ಫಲಿತಾಂಶ ತಿಳಿಸುವ ಚಾಣಾಕ್ಷತನ ಹೊಂದಿರಬೇಕು.
  4. ಒತ್ತಡವನ್ನು ಶಾಂತತೆಯಿಂದ ನಿಭಾಯಿಸಲು ಕೌಶಲ್ಯವಿರಬೇಕು.
  5. ತೀಕ್ಷ್ಣವಾದ ವೀಕ್ಷಣಾ ಕೌಶಲ್ಯ ಹೊಂದಿರಬೇಕು.
  6. ಆಟದ ವೇಗ ಹಾಗೂ ಚಲನೆಯನ್ನು ಮುಂದುವರೆಸುವ ದೈಹಿಕ ಸಾಮರ್ಥ್ಯ ಹೊಂದಿರಬೇಕು.

ಕ್ರಿಕೆಟ್ ಅಂಪೈರ್ ಆಗಲು ಬೇಕಿರುವ ಅರ್ಹತೆಗಳು?

ನೀವೊಬ್ಬ ಕ್ರಿಕೆಟ್ ಅಂಪೈರ್ ಆಗಬೇಕು ಎಂದು ಬಯಸಿದರೆ ಈ ಕೆಳಗಿನ ಅರ್ಹತೆಗಳು ನಿಮ್ಮಲ್ಲಿರಬೇಕು.

  1. ಕ್ರಿಕೆಟ್ ಅಂಪೈರ್ ಆಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಕ್ರಿಕೆಟ್ ಬಗೆಗಿನ ಜ್ಞಾನ ಹೊಂದಿರಬೇಕು.
  2. ಸ್ಥಳೀಯ ಪಂದ್ಯಾಟಗಳಿಗೆ ಅಂಪೈರಿಂಗ್ ಮಾಡುವ ಮೂಲಕ ಪ್ರಾಯೋಗಿಕ ಅನುಭವ ಹೊಂದಿರಬೇಕು.
  3. ಕ್ರಿಕೆಟ್ ಕಾನೂನು ಸೇರಿದಂತೆ ಕ್ರಿಕೆಟ್ ಬಗೆಗಿನ ಪರಿಪೂರ್ಣ ಜ್ಞಾನಕ್ಕಾಗಿ ಬಿಸಿಸಿಐ ಅಂಪೈರಿಂಗ್ ಕೋರ್ಸ್ ಸೇರಬೇಕು.
  4. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾಟಗಳಲ್ಲಿ ಅಂಪೈರಿಂಗ್ ಅರ್ಹತೆ ಪಡೆಯಲು ದೈಹಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
  5. ಕ್ರಿಕೆಟ್ ಬಗೆಗಿನ ಇತ್ತೀಚಿನ ನಿಯಮ ಹಾಗೂ ನಿಬಂಧನೆಗಳ ಬಗ್ಗೆ ತಿಳಿದುಕೊಳ್ಳಬೇಕು.
  6. ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕು.

ಅಂಪೈರ್ ತರಬೇತಿ ಮತ್ತು ಕೋರ್ಸ್

ನೀವೊಬ್ಬ ಕ್ರಿಕೆಟ್ ಅಂಪೈರ್ ಆಗಲು ಬಯಸುವುದಾದರೆ ಇಂದಿಗೆ ಹಲವು ಮಾರ್ಗಗಳಿವೆ. ಆಟದ ನಿಯಮ, ನಿಬಂಧನೆಗಳು ಹಾಗೂ‌ ಕ್ರಿಕೆಟ್ ಕಾನೂನು ತಿಳಿಯುವುದಕ್ಕಾಗಿ ಅಂಪೈರಿಂಗ್ ಕೋರ್ಸ್ ಸೇರುವುದು ಉತ್ತಮ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಅಂಪೈರ್ ತರಬೇತಿ ಕೋರ್ಸ್ ಆರಂಭಿಸಿದೆ ಇದರ ಸದುಪಯೋಗ ಪಡೆದುಕೊಳ್ಳಿ. ಈ ತರಬೇತಿ ಅಥವಾ ಕೋರ್ಸ್‌ಗಳು ನೀವೊಬ್ಬ ಯಶಸ್ವಿ ಕ್ರಿಕೆಟ್ ಅಂಪೈರ್ ಆಗಲು ಸಹಾಯ ಮಾಡುತ್ತದೆ‌.

ಅಂಪೈರ್ ಪ್ರಮಾಣಿಕರಣ!

ಭಾರತದಲ್ಲಿ ಕ್ರಿಕೆಟ್ ಅಂಪೈರ್ ಆಗಲು, ತಮ್ಮ ತಮ್ಮ ರಾಜ್ಯದ ಕ್ರಿಕೆಟ್ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಇದಲ್ಲದೆ ನೀವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂಪೈರ್ ಆಗಲು, ಮೊದಲು ಬಿಸಿಸಿಐ ಲೆವೆಲ್ 1ಹಾಗೂ ಲೆವೆಲ್ 2 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ಕ್ರಿಕೆಟ್ ಅಂಪೈರ್ ಸಂಬಳ..?

ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಕೂಡ ಒಂದು ಲಾಭದಾಯಕ ವೃತ್ತಿಯಾಗಿದೆ. ದೇಶೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಪೈರ್ ಗಳಿಗೆ ವಿವಿಧ ರೀತಿಯ ವೇತನ ಶ್ರೇಣಿಯಿದೆ‌. ಅವುಗಳು ಈ ಕೆಳಗಿನಂತಿದೆ‌.

ಬಿಸಿಸಿಐ ಅಂಪೈರ್ ಸಂಬಳ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಬಿಸಿಸಿಐ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯಾಗಿದೆ ಜೊತಗೆ ದೇಶಿಯ ಹಾಗೂ ರಾಷ್ಟ್ರೀಯ ಪಂದ್ಯಾಟಗಳನ್ನು ಆಯೋಜಿಸುವ ಜವಾಬ್ದಾರಿ ಹೊಂದಿದೆ‌. ಮೂಲಗಳ ಪ್ರಕಾರ, BCCI ಲೆವೆಲ್ 1 ಅಂಪೈರ್ ಗಳಿಗೆ ಪ್ರತಿ ಪಂದ್ಯಾಟಕ್ಕೆ 40 ಸಾವಿರ ವೇತನ ನೀಡಾಗುತ್ತದೆ. ಹಾಗೆಯೇ BCCI ಲೆವೆಲ್ 2 ಅಂಪೈರ್ ಗಳಿಗೆ 50 ರಿಂದ 60 ಸಾವಿರ ವೇತನ ನೀಡಲಾಗುತ್ತದೆ.

ಅಂತರಾಷ್ಟ್ರೀಯ ಅಂಪೈರ್ ಸಂಬಳ

ಇನ್ನು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಅಂಪೈರ್ ಗಳಿಗೆ ರಾಷ್ಟ್ರೀಯ ಅಥವಾ ದೇಶಿಯ ಅಂಪೈರ್ ಗಳಿಗಿಂತ ಹೆಚ್ಚಿನ ವೇತನ ನೀಡಲಾಗುತ್ತದೆ. ಇವರು ದೇಶ ದೇಶಗಳ ನಡುವಿನ ಪಂದ್ಯಾಟವನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಮೂಲಗಳ ಪ್ರಕಾರ ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಗಳು ಪ್ರತಿ ಟೆಸ್ಟ್ ಪಂದ್ಯಕ್ಕೆ $2600, ಪ್ರತಿ ಏಕದಿನ ಪಂದ್ಯಕ್ಕೆ $1500 ಹಾಗೂ ಪ್ರತಿ ಟಿ20 ಪಂದ್ಯಕ್ಕೆ $1000 ಶುಲ್ಕವನ್ನು ಪಡೆಯುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಕ್ರಿಕೆಟ್ ಅಂಪೈರಿಂಗ್ ಕೂಡ ಒಂದು ಲಾಭದಾಯಕ ವೃತ್ತಿಯಾಗಿ ಮಾರ್ಪಾಡಾಗುತ್ತಿದೆ.

Related post

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…
‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ ರೈ ಸವಾಲು ಹಾಕಿದ್ಯಾರಿಗೆ…?

‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ…

ನ್ಯೂಸ್ ಆರೋ: ಕನ್ನಡದ ಖ್ಯಾತ ಸೀರಿಯಲ್ ನಟಿ ಜ್ಯೋತಿ ರೈ ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅಶ್ಲೀಲ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ…

Leave a Reply

Your email address will not be published. Required fields are marked *