ಫೀಲ್ಡಿಂಗ್ ಮಾಡಿ ಸಚಿನ್, ಮೈಕಲ್ ವಾನ್ ರಿಂದ ಹೊಗಳಿಸಿಕೊಂಡ ಬೆಳಗಾವಿಯ ಕಿರಣ್ ತಾರಲೇಕರ್; ಫೀಲ್ಡಿಂಗ್ ವಿಡಿಯೋ ನೋಡಿದ್ರೆ ನೀವು ನಿಬ್ಬೆರಗಾಗ್ತೀರ!

ಫೀಲ್ಡಿಂಗ್ ಮಾಡಿ ಸಚಿನ್, ಮೈಕಲ್ ವಾನ್ ರಿಂದ ಹೊಗಳಿಸಿಕೊಂಡ ಬೆಳಗಾವಿಯ ಕಿರಣ್ ತಾರಲೇಕರ್; ಫೀಲ್ಡಿಂಗ್ ವಿಡಿಯೋ ನೋಡಿದ್ರೆ ನೀವು ನಿಬ್ಬೆರಗಾಗ್ತೀರ!

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಬೆಳಗಾಗುವ ಮುನ್ನ ಕೆಲವರು ಸೆಲೆಬ್ರಿಟಿಗಳಾಗಿ ಬಿಡುತ್ತಾರೆ. ಅಂತಹದ್ದೇ ಒಂದು ಘಟನೆ ನಿನ್ನೆ ಬೆಳಗಾವಿಯಲ್ಲಿ ನಡೆದಿದೆ. ಕ್ರಿಕೆಟ್ ಪಂದ್ಯಾಟದ ಫೀಲ್ಡಿಂಗ್ ವೇಳೆ ಆಟಗಾರನೊಬ್ಬ ಅದ್ಭುತವಾಗಿ ಫೀಲ್ಡಿಂಗ್ ಮಾಡಿ, ಆಕರ್ಷಕ ರೀತಿಯಲ್ಲಿ ಕ್ಯಾಚ್ ಹಿಡಿದು ಎಲ್ಲರ ಮೆಚ್ಚುಗಗೆ ಪಾತ್ರವಾಗಿದ್ದಾನೆ. ಅಷ್ಟೇ ಅಲ್ಲದೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಇಂಗ್ಲೇಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್, ನ್ಯೂಜಿಲೆಂಡ್‌ ತಂಡದ ಆಟಗಾರ ಜಿಮ್ಮಿ ನಿಶಾಮ್ ಸೇರಿದಂತೆ ಹಲವು ಗಣ್ಯರು ಈ ವೈರಲ್ ವಿಡಿಯೋ ಕಂಡು ಆಟಗಾರನನ್ನು ಕೊಂಡಾಡಿದ್ದಾರೆ.

ಈ‌ ಕ್ರಿಕೆಟ್ ಟೂರ್ನಮೆಂಟ್ ನಡೆದಿದ್ದು ಬೆಳಗಾವಿಯಲ್ಲಿ. ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಖಡಕ್ ಗಲ್ಲಿಯ ಯುವಕರು ಶ್ರೀ ಚಸಕ್ -2023 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. ಈ ಟೂರ್ನಮೆಂಟ್ ನಲ್ಲಿ ಸಾಯಿರಾಜ್ ಹಾಗೂ ಎಸ್ ಆರ್ ಎಸ್ ಹಿಂದೂಸ್ತಾನಿ ನಿಪ್ಪಾಣಿ ತಂಡಗಳ ನಡುವೆ ಪಂದ್ಯಾಟ ನಡೆಯುತ್ತಿತ್ತು. ಈ ವೇಳೆ ಬ್ಯಾಟರ್ ಬಲವಾಗಿ ಚೆಂಡನ್ನು ಬೀಸಿದ್ದರು. ಚೆಂಡು ಗಾಳಿಯಲ್ಲೆ ಬೌಂಡರಿ ಗೆರೆಯನ್ನು ದಾಟಿತ್ತು ಇದೇ ವೇಳೆ ಫೀಲ್ಡಿಂಗ್ ವಿಭಾಗದಲ್ಲಿದ್ದ ಆಟಗಾರನೊಬ್ಬ ಚೆಂಡನ್ನು ಬೌಂಡರಿ ಗೆರೆಯಿಂದ ಫುಟ್ಬಾಲ್ ರೀತಿ ಒದ್ದು ಮೈದಾನದಲ್ಲಿದ್ದ ಮತ್ತೊಬ್ಬ ಆಟಗಾರ ಕ್ಯಾಚ್ ಹಿಡಿಯುವಂತೆ ಮಾಡಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ. ಈ ಆಕರ್ಷಕ ಫೀಲ್ಡಿಂಗ್ ಮಾಡಿದ ಆಟಗಾರನನ್ನು ಬೆಳಗಾವಿಯ ರಾಯಬಾಗದಲ್ಲಿ M.P.Ed ವ್ಯಾಸಂಗ ಮಾಡುತ್ತಿರುವ ಕಿರಣ್ ತಾರಲೇಕರ್ ಎಂದು ಗುರುತಿಸಲಾಗಿದ್ದು, ಇದೀಗ ಈತನ ಫೀಲ್ಡಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಫೀಲ್ಡಿಂಗ್ ನೋಡಿ ಟ್ವಿಟ್ಟ್ ಮಾಡಿದ ಸಚಿನ್ ತೆಂಡೂಲ್ಕರ್

ಈ ಒಂದು ಅದ್ಭುತವಾದ ಫೀಲ್ಡಿಂಗ್ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದಂತೆ ಕ್ರಿಕೆಟ್ ವಲಯದ ದಿಗ್ಗಜರೂ ಕೂಡ ಕಿರಣ್ ತಾರಲೇಕರ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ವಿಡಿಯೋ ನೋಡಿದ ಸಚಿನ್ ತೆಂಡೂಲ್ಕರ್ ‘ಫುಟ್ಬಾಲ್ ಆಡುವುದು ಹೇಗೆ ಎಂದು ಗೊತ್ತಿರುವ ಆಟಗಾರನಿಗೆ ಮಾತ್ರ ಇಂತಹ ಕ್ಯಾಚ್ ಹಿಡಿಯಲು ಸಾಧ್ಯ’ ಎಂದು ಟ್ವಿಟ್ಟ್ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ‘ಇದು ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್’ ಎಂದು ಟ್ವಿಟ್ಟ್ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ಕ್ರಿಕೆಟ್ ಲೋಕದ ಗಣ್ಯರು ಕೂಡ ಕಿರಣ್ ತಾರಲೇಕರ್ ಅವರಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಿರಣ್ ತಾರಲೇಕರ್ ‘ ನನ್ನ ಫೀಲ್ಡಿಂಗ್ ವಿಡಿಯೋ ನೋಡಿ ಕ್ರಿಕೆಟ್ ದೇವರು ಟ್ವಿಟ್ಟ್ ಮಾಡಿದ್ದು ಅತೀವ ಖುಷಿ ತಂದಿದೆ. ಒಬ್ಬ ಆಟಗಾರನಿಗೆ ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ’ ಎಂದಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *