ಸ್ಯಾಂಡಲ್‌ವುಡ್‌ ಸ್ಟಾರ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ: ಕಾಂತಾರ, ಕೆಜಿಎಫ್‌ ಚಿತ್ರಕ್ಕೆ ಪ್ರಶಂಸೆಜೌತಣಕೂಟದಲ್ಲಿ ಭಾಗಿಯಾದ ಯಶ್, ರಿಷಬ್ ಶೆಟ್ಟಿ

ಸ್ಯಾಂಡಲ್‌ವುಡ್‌ ಸ್ಟಾರ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ: ಕಾಂತಾರ, ಕೆಜಿಎಫ್‌ ಚಿತ್ರಕ್ಕೆ ಪ್ರಶಂಸೆ
ಜೌತಣಕೂಟದಲ್ಲಿ ಭಾಗಿಯಾದ ಯಶ್, ರಿಷಬ್ ಶೆಟ್ಟಿ

ನ್ಯೂಸ್‌ಆ್ಯರೋ: ‘ಏರೋ ಇಂಡಿಯಾ 2023ʼ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರರಂಗದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್‌ ಶೆಟ್ಟಿ, ಕೆಜಿಎಫ್‌ ಸ್ಟಾರ್‌ ಯಶ್‌, ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಪತ್ನಿ ಅಶ್ವಿನಿ, ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿರುವ ಶ್ರದ್ಧಾ, ನಿರ್ಮಾಪಕ ವಿಜಯ್ ಕಿರಂಗದೂರು ಅವರ ಜತೆ ಮೋದಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಬಗ್ಗೆ ಪ್ರಧಾನಿ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಕೆಜಿಎಫ್, ಕಾಂತಾರ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅದರ ಬಗ್ಗೆ ಚರ್ಚಿಸಿದ್ದಾರೆ. ಹಾಲಿವುಡ್ ರೀತಿ ನಮ್ಮ ಕನ್ನಡ ಚಿತ್ರರಂಗ ಬೆಳೆಯಬೇಕು ಎಂದಿದ್ದಾರೆ.

ನರೇಂದ್ರ ಮೋದಿ ಅವರು ಕನ್ನಡ ಚಿತ್ರರಂಗದ ಗಣ್ಯರನ್ನು ಭೇಟಿಯಾಗಿ ಅವರೊಂದಿಗೆ ಕರ್ನಾಟಕದ ಸಾಂಸ್ಕೃತಿಕ ಚಿತ್ರಣ ಮತ್ತು ನವ ಭಾರತ ಹಾಗೂ ಪ್ರಗತಿಪರ ಕರ್ನಾಟಕದ ನಿರ್ಮಾಣಕ್ಕೆ ಅವರು ನೀಡಬಹುದಾದ ಕೊಡುಗೆಗಳ ಬಗ್ಗೆ ಚರ್ಚಿಸಿದ್ದಾರೆ.

ಮೋದಿ ಅವರು ಇಂದು ಬೆಂಗಳೂರಿನಲ್ಲಿ ಏರೋ ಇಂಡಿಯಾ 2023 ಕ್ಕೆ ಚಾಲನೆ ನೀಡಿದರು ಮತ್ತು ಇದರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಇದು ಏಷ್ಯಾದ ಅತೀ ದೊಡ್ಡ ಏರ್‌ ಶೋ ಆಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.‌ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್‌, ಕರ್ನಾಟಕದ ರಾಜ್ಯಪಾಲರು, ಕೇಂದ್ರ ಸಚಿವರು ಉಪಸ್ಥಿತರಿದ್ದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *