ಕನಸಿನ KTM ಬೈಕ್‌ಗಾಗಿ ₹1 ನಾಣ್ಯಗಳನ್ನು ಸಂಗ್ರಹಿಸಿದ ಯುವಕ – ಬೈಕ್‌ ಖರೀದಿಗೆ ಟೆಂಪೋದಲ್ಲಿ ಹಣ ತಂದು ಶಾಕ್ ಕೊಟ್ಟ ವೆಂಕಟೇಶ್

ಕನಸಿನ KTM ಬೈಕ್‌ಗಾಗಿ ₹1 ನಾಣ್ಯಗಳನ್ನು ಸಂಗ್ರಹಿಸಿದ ಯುವಕ – ಬೈಕ್‌ ಖರೀದಿಗೆ ಟೆಂಪೋದಲ್ಲಿ ಹಣ ತಂದು ಶಾಕ್ ಕೊಟ್ಟ ವೆಂಕಟೇಶ್

ನ್ಯೂಸ್ ಆ್ಯರೋ : ತಮ್ಮ ಕನಸಿನ ವಾಹನವನ್ನು ಖರೀದಿಸಲು ಬ್ಯಾಂಕ್‌ನಲ್ಲಿ ಹಣ ಜಮೆ ಮಾಡಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಬೈಕ್‌ ಖರೀದಿಗಾಗಿ ₹2.85ಲಕ್ಷ ಹಣದ ₹1 ನಾಣ್ಯಗಳನ್ನು 112 ಬ್ಯಾಗ್‌ನಲ್ಲಿ ತುಂಬಿ ಲಾರಿಯಲ್ಲಿ ತುಂಬಿಕೊಂಡು ಬಂದು ಸುದ್ದಿಯಾಗಿದ್ದಾನೆ.

ಈ ಘಟನೆ ನಡೆದಿರುವುದು ತೆಲಂಗಾಣದ ಮಂಚೇರಿಯಲ್‌ ಎಂಬಲ್ಲಿ. ಈ ಸಾಹಸವನ್ನು ಮಾಡಿದ ಯುವಕ ವೆಂಕಟೇಶ್ ಎಂಬಾತ. ಪಾಲಿಟೆಕ್ನಿಕ್ ಓದುತ್ತಿರುವ ಈ ಯುವಕ VILLAN MAMA GAMING ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾನೆ. ಇಲ್ಲಿ ಅವನು ತಾನು ಬೈಕ್ ಖರೀದಿಸಿದ ಬಗ್ಗೆ ಸಂಪೂರ್ಣವಾಗಿ ಹೇಳಿಕೊಂಡಿದ್ದಾನೆ.

ಬೈಕ್‌ ಖರೀದಿಗಾಗಿ ಬಾಲ್ಯದಿಂದ ₹40 ಸಾವಿರ ನಾಣ್ಯಗಳನ್ನು ಸಂಗ್ರಹಿಸಿದ್ದಾನೆ. ಉಳಿದ ಹಣವನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಈ ಸಂಬಂಧ ಪ್ರತಿಕ್ರಿಯಿಸಿದ ವೆಂಕಟೇಶ್, ‘ಪ್ರಾರಂಭದಲ್ಲಿ ಬೈಕ್ ಖರೀದಿಗಾಗಿ ₹1 ನಾಣ್ಯಗಳನ್ನು ಸ್ವೀಕರಿಸುವುದಕ್ಕೆ ಶೋ ರೂಂ ಉದ್ಯೋಗಿಗಳು ನಿರಾಕರಿಸಿದ್ದರು. ಆದರೆ ನನ್ನ ಉತ್ಸಹ ಹಾಗೂ ಕನಸನ್ನು ತಿಳಿದು ಕೊನೆಗೆ ಒಪ್ಪಿಕೊಂಡರು’ ಎಂದರು.

ವೆಂಕಟೇಶ್ ಬೈಕ್ ಖರೀದಿಸಲು ಬಹಳ ಸಮಯದಿಂದ ಉಳಿತಾಯ ಮಾಡುತ್ತಿದ್ದ. ಕೆಟಿಎಂ ಡೀಲರ್‌ಶಿಪ್ ಸಿಬ್ಬಂದಿಗೆ ನಾಣ್ಯಗಳನ್ನು ಎಣಿಸಲು ಅರ್ಧ ದಿನ ಕಾಯುವಂತೆ ಮಾಡಿತು. ಅಂತಿಮವಾಗಿ ನಾಣ್ಯಗಳನ್ನು ಎಣಿಸಿದ ನಂತರ ಪಾವತಿಯನ್ನು ಸ್ವೀಕರಿಸಿಕೊಂಡಿದ್ದಾರೆ.

ಬೈಕ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ:

ವೆಂಕಟೇಶ್ ಖರೀದಿಸಿದ್ದು ಕೆಟಿಎಂ ಡ್ಯೂಕ್ 250 ಬೈಕ್ ಆಗಿದ್ದು, ಇದು 248.76ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 29.6 ಬಿಹೆಚ್‍ಪಿ ಪವರ್ ಮತ್ತು 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕೆಟಿಎಂ ಡ್ಯೂಕ್ 250 ಬೈಕ್ 170 ಕೆಜಿ ತೂಕವನ್ನು ಹೊಂದಿದೆ. ಈ ಬೈಕ್ 13.4 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.ಈ ಬೈಕ್ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ ಒಳಗೊಂಟಿದೆ.

ಈ ಬೈಕಿನ ವೈಶಿಷ್ಟ್ಯದ ಪಟ್ಟಿಯು ಪೂರ್ಣ-ಎಲ್ಇಡಿ ಲೈಟಿಂಗ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಸ್ಟೈಲಿಂಗ್ ಅಂಶಗಳು 1290 ಸೂಪರ್‌ಡ್ಯೂಕ್-ಪ್ರೇರಿತ ಹೆಡ್‌ಲೈಟ್, ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್-ಸ್ಟೈಲ್ ಸೀಟ್‌ಗಳು, ಸೈಡ್-ಸ್ಲಂಗ್ ಎಕ್ಸಾಸ್ಟ್ ಮತ್ತು 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *