ಮೊಬೈಲ್ ನಲ್ಲಿ ಒಂದು ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು? – ಯಾವ ಬ್ಯಾಂಕ್ ಎಷ್ಟು ಮೊತ್ತ ಲಿಮಿಟ್ ಮಾಡುತ್ತೆ ಗೊತ್ತಾ…??

ಮೊಬೈಲ್ ನಲ್ಲಿ ಒಂದು ದಿನಕ್ಕೆ ಎಷ್ಟು ಹಣ ವರ್ಗಾವಣೆ ಮಾಡಬಹುದು? – ಯಾವ ಬ್ಯಾಂಕ್ ಎಷ್ಟು ಮೊತ್ತ ಲಿಮಿಟ್ ಮಾಡುತ್ತೆ ಗೊತ್ತಾ…??

ನ್ಯೂಸ್ ಆ್ಯರೋ : ಇಂದು ಡಿಜಿಟಲ್ ಪಾವತಿ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದು, ಪೇಟಿಎಂ, ಗೂಗಲ್ ಪೇ ಹಾಗೂ ಫೋನ್ ಪೇಯಂತಹ ಆ್ಯಪ್ ಗಳನ್ನು ಜನ ನೆಚ್ಚಿಕೊಂಡಿದ್ದಾರೆ. ಯುಪಿಐ, ವ್ಯಾಲೆಟ್, ಪಿಪಿಐ, ಇಂಟರ್ ಆಪರೇಬಲ್ ಪಾವತಿಗಳಿಂದ ಸುಲಭವಾಗಿ ಹಣ ಟ್ರಾನ್ಸಾಕ್ಷನ್ ಮಾಡಬಹುದಾಗಿದ್ದು, ಭಾರತದಲ್ಲಿ ನಗದು ಚಲಾವಣೆಯಿಂದ ಡಿಜಿಟಲ್ ಪೇಮೆಂಟ್ ವರ್ಗಾವಣೆ ಪ್ರಮುಖ ಘಟ್ಟವಾಗಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಸೀಮಿತವಾಗಿದ್ದ ಈ ಟ್ರಾನ್ಸಾಕ್ಷನ್ ಇದೀಗ ಯಾರೂ ಬೇಕಾದರೂ ಸುಲಭವಾಗಿ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದಾಗಿದ್ದು, ಡಿಜಿಟಲ್ ಪಾವತಿ ಆ್ಯಪ್ ಗಳು ಭಾರತದಲ್ಲಿ ನಗದುರಹಿತ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.

ಆದರೆ ಹೆಚ್ಚಿನ ಗೂಗಲ್ ಪೇ ಬಳಕೆದಾರರಿಗೆ ಒಂದೇ ದಿನದಲ್ಲಿ ಎಷ್ಟು ಬಾರಿ ವಹಿವಾಟು ಮಾಡಬಹುದು ಹಾಗೇ ಈ ಪ್ಲಾಟ್‌ಫಾರ್ಮ್ ಬಳಸಿ ಕಳುಹಿಸಬಹುದಾದ ಗರಿಷ್ಠ ಮೊತ್ತದ ಮಿತಿ ಎಷ್ಟು ಎಂಬುದರ ಕುರಿತು ಮಾಹಿತಿ ಇಲ್ಲ.

ಹೌದು.. ಜನಪ್ರಿಯ ಗೂಗಲ್ ಪೇ ಸಂಸ್ಥೆ ತನ್ನ ಬಳಕೆದಾರರಿಗೆ ನೈಜ ಸಮಯದಲ್ಲಿ ವ್ಯಕ್ತಿ ಅಥವಾ ವ್ಯಾಪಾರಿಗೆ UPI ಆಯ್ಕೆಯ ಮೂಲಕ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ, NEFT ಮತ್ತು IMPS ನಂತಹ ಬ್ಯಾಂಕ್ ವರ್ಗಾವಣೆ ವಿಧಾನಗಳಂತೆಯೇ, ಇದೀಗ ಗೂಗಲ್‌ ಪೇ ಆಪ್‌ನಲ್ಲಿ ಕೂಡ ಯುಪಿಐ ಮಿತಿಗಳನ್ನು ತರಲಾಗಿದೆ.

ಮೊದಲನೆಯದಾಗಿ ಗೂಗಲ್‌ ಪೇ ಬಳಕೆದಾರರು ಒಂದೇ ದಿನದಲ್ಲಿ 1 ಲಕ್ಷ ರೂ.ಹಣವನ್ನು ಮಾತ್ರ ಕಳುಹಿಸಬಹುದಾದ ಮಿತಿಯನ್ನು ನಿಗಧಿಪಡಿಸಲಾಗಿದ್ದು, Google Pay ಬಳಕೆದಾರರಿಗೆ ಒಂದೇ ದಿನದಲ್ಲಿ ಗರಿಷ್ಠ 10 ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ.

ಅಂದರೆ, ನೀವು ಇನ್ಮುಂದೆ ಗೂಗಲ್‌ ಪೇ ಆಪ್‌ನಲ್ಲಿ ಒಂದು ದಿನದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಾವತಿಸಲು ಹಾಗೂ ಪಡೆಯಲು ಸಾಧ್ಯವಿಲ್ಲ. ಎಷ್ಟು ಹಣವನ್ನು ವಹಿವಾಟು ಮಾಡಬಹುದು ಎಂಬುದು ನಿಮ್ಮ ಬ್ಯಾಂಕ್ ಅನ್ನು ಅವಲಂಬಿಸಿರುತ್ತದೆ. ಕೆಲವು ದೊಡ್ಡ ಬ್ಯಾಂಕ್​​ಗಳ UPI ವಹಿವಾಟಿನ ಮಿತಿಯ ಬಗ್ಗೆ ತಿಳಿಯುವುದು ಉತ್ತಮ. ಹಾಗೆಯೇ, 10 UPI ಪಾವತಿಗಳನ್ನು ನಡೆಸಿದ ನಂತರ ಆಪ್‌ನಲ್ಲಿ ಪಾವತಿಗಳನ್ನು ನಡೆಸಲು ಸಾಧ್ಯವಾಗದಂತೆ ನಿರ್ಭಂಧಿಸಲಾಗುತ್ತದೆ.

ಆದ್ದರಿಂದ, ನೀವು ಸಾಕಷ್ಟು ಹಣವನ್ನು ಹೊಂದಿದ್ದರೂ ಸಹ, UPI ಮೂಲಕ ಕಳುಹಿಸಬಹುದಾದ ದೈನಂದಿನ ಮಿತಿಯಿಂದಾಗಿ ಬಳಕೆದಾರರು ಹೆಚ್ಚಿನ ವರ್ಗಾವಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಹಣಕ್ಕಾಗಿ ವಿನಂತಿಸಲು ಬಂದಾಗ, ಬಳಕೆದಾರರು ಒಂದು ದಿನದಲ್ಲಿ 2,000 ರೂ.ಗಿಂತ ಹೆಚ್ಚಿನ ಹಣವನ್ನು ವಿನಂತಿಸಲು ಸಾಧ್ಯವಿಲ್ಲ. ಇವುಗಳು ದೈನಂದಿನ ಮಿತಿಗಳಾಗಿರುವುದರಿಂದ, ಮರುದಿನ ಹೊಸ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.

ಭೀಮ್ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ಬಳಕೆದಾರರಿಗೂ ಮಿತಿ ಇದ್ದು, ಪ್ರತಿ ವಹಿವಾಟಿಗೆ 40 ಸಾವಿರ ರೂ. ಆಗಿದೆ. ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ಅನ್ವಯವಾಗಲಿದ್ದು, ವ್ಯಾಪಾರಿಗಳ ನಡೆಸುವ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ.

ಇಲ್ಲಿ ವಹಿವಾಟಿನ ಮಿತಿ ಎಂದರೆ ಏಕಕಾಲಿಕ ವಹಿವಾಟುಗಳು ಮತ್ತು ದೈನಂದಿನ ಮಿತಿ ಎಂದರೆ ಇಡೀ ದಿನದ ಗರಿಷ್ಠ ವಹಿವಾಟು ಮಿತಿ ಎಂದು ಗಮನಿಸಬೇಕು.

ಯಾವ ಯಾವ ಬ್ಯಾಂಕ್ ಗಳಿಗೆ ಎಷ್ಟೆಷ್ಟು ಮಿತಿ..?

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) – ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಯುಪಿಐ ವಹಿವಾಟಿನ ಮಿತಿ 1 ಲಕ್ಷ ರೂ. ಇದಲ್ಲದೇ ಇದರ ದೈನಂದಿನ ವಹಿವಾಟಿನ ಮಿತಿಯೂ 1 ಲಕ್ಷ ರೂ.
  • HDFC ಬ್ಯಾಂಕ್ – ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್, ವಹಿವಾಟು ಮತ್ತು ದೈನಂದಿನ ಮಿತಿ 1 ಲಕ್ಷ ರೂ. ಆದರೆ, ಹೊಸ ಗ್ರಾಹಕರು ಮೊದಲ 24 ಗಂಟೆಗಳಲ್ಲಿ ಕೇವಲ 5,000 ರೂಪಾಯಿಗಳ ವಹಿವಾಟು ಮಾಡಬಹುದು.
  • ಬ್ಯಾಂಕ್ ಆಫ್ ಇಂಡಿಯಾ ಯುಪಿಐ ವಹಿವಾಟಿನ ಮಿತಿ ಮತ್ತು ದೈನಂದಿನ ಮಿತಿಯನ್ನು ತಲಾ ರೂ 1 ಲಕ್ಷಕ್ಕೆ ನಿಗದಿಪಡಿಸಿದೆ.
  • ಪಂಜಾಬ್ ನ್ಯಾಷನಲ್ ಬ್ಯಾಂಕ್ ವಹಿವಾಟಿನ ಮಿತಿ ದೈನಂದಿನ UPI ಮಿತಿಯನ್ನು 50,000 ರೂ.ಗೆ ನಿಗದಿಪಡಿಸಿದೆ.
  • ಆಕ್ಸಿಸ್ ಬ್ಯಾಂಕ್ – ಬ್ಯಾಂಕಿನ UPI ವಹಿವಾಟಿನ ಮಿತಿ ಮತ್ತು ದೈನಂದಿನ ಮಿತಿ 1 ಲಕ್ಷ ರೂಪಾಯಿಗಳು.
  • ICICI ಬ್ಯಾಂಕ್ – ಬ್ಯಾಂಕಿನ UPI ವಹಿವಾಟಿನ ಮಿತಿ ಮತ್ತು ದೈನಂದಿನ ಮಿತಿಯೂ ರೂ. ಈ ಎರಡು ಮಿತಿಗಳು Google Pay ಬಳಕೆದಾರರಿಗೆ 25,000 ರೂ.
  • ಬ್ಯಾಂಕ್ ಆಫ್ ಬರೋಡಾ – ಬ್ಯಾಂಕ್ ಆಫ್ ಬರೋಡಾದ ಯುಪಿಐ ವಹಿವಾಟಿನ ಮಿತಿ 25 ಸಾವಿರ ಮತ್ತು ಒಂದು ಲಕ್ಷ ರೂಪಾಯಿಗಳ ದಿನದ ಮಿತಿಯನ್ನು ಇಟ್ಟುಕೊಂಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *