ಈ ಸ್ವೀಟ್ ಒಂದು ಕೆಜಿ ಬೆಲೆ ಬರೋಬ್ಬರಿ 21ಸಾವಿರ ರೂಪಾಯಿ..!! – “ಸ್ವರ್ಣ ಮುದ್ರಾ ಸ್ವೀಟ್” ಯಾಕಿಷ್ಟು ದುಬಾರಿ ಗೊತ್ತಾ?

ಈ ಸ್ವೀಟ್ ಒಂದು ಕೆಜಿ ಬೆಲೆ ಬರೋಬ್ಬರಿ 21ಸಾವಿರ ರೂಪಾಯಿ..!! – “ಸ್ವರ್ಣ ಮುದ್ರಾ ಸ್ವೀಟ್” ಯಾಕಿಷ್ಟು ದುಬಾರಿ ಗೊತ್ತಾ?

ನ್ಯೂಸ್ ಆ್ಯರೋ : ದೀಪಾವಳಿ ಹಬ್ಬ ಇನ್ನೇನೋ ಸಮೀಪಿಸುತ್ತಿದೆ. ಮನೆ ಮನದಲ್ಲಿ ಸಂಭ್ರಮಿಸಲು ಜೋರಾದ ಸಿದ್ಧತೆಗಳೂ ನಡೆಯುತ್ತಿದೆ. ಸಿಹಿ ಸಂತೋಷದ ಸಂಕೇತ. ಯಾವುದೇ ಹಬ್ಬ ಹರಿದಿನವಿರಲಿ ಏನಾದರೂ ಸಿಹಿ ಸವಿಯದಿದ್ದರೆ ಪರಿಪೂರ್ಣತೆ ಕಾಣಲು ಸಾಧ್ಯವೇ ಇಲ್ಲ. ಸಿಹಿತಿಂಡಿಯ ಅಂಗಡಿಗಳಂತೂ ಹಬ್ಬಕ್ಕಾಗಿ ವಿಶೇಷ ಸ್ವೀಟ್ ಬಾಕ್ಸ್ ಗಳನ್ನು ತಯಾರಿ ಮಾಡುವ ತರಾತುರಿಯಲ್ಲಿರುತ್ತದೆ.

ದೀಪಾವಳಿ ಹಬ್ಬಕ್ಕೆ ನಮ್ಮ ಪ್ರೀತಿ ಪಾತ್ರರಿಗೆ ಸಿಹಿತಿಂಡಿ ಕೊಟ್ಟು ಶುಭಾಶಯ ಕೋರುತ್ತೇವೆ. ಮಾಲ್ ಗಳಲ್ಲಿ, ಅಂಗಡಿಗಳಲ್ಲಂತೂ ಪೇಡಾ, ಸೋನ್ ಪಾಪಡಿ, ಜಹಾಂಗೀರ್, ಬರ್ಫಿಗಳದ್ದೇ ಹವಾ…ಇಲ್ಲೊಂದು ಅಂಗಡಿಯಲ್ಲಿ ಬಂದಿರುವ ವಿಶೇಷ ಸ್ವೀಟ್ ಗೆ ಭಾರಿ ಡಿಮ್ಯಾಂಡ್.‌ ಯಾಕೆ ಗೊತ್ತಾ ಈ ಸ್ವೀಟ್ ನ ಒಂದು ಕೆಜಿಯ ಬೆಲೆ ಬರೋಬ್ಬರಿ 21 ಸಾವಿರ ರೂ…!

ಏನಿದು ‘ ಸ್ವರ್ಣ ಮುದ್ರಾ’ ಸ್ವೀಟ್ಸ್…!

ಅಹಮದಾಬಾದ್ ನಲ್ಲಿ ಜನರು ಮೂಗಿಗೆ ಬೆರಳಿಟ್ಟು ಅಚ್ಚರಿ ಪಡುವ ಸಂಗತಿಯೆಂದರೆ ಈ ಸ್ವೀಟ್ ಗೆ 21ಸಾವಿರ ರೂ. ‘ ಸ್ವರ್ಣ ಮುದ್ರಾ’ ಹೆಸರಿನ ಈ ಸಿಹಿತಿಂಡಿಗೆ ಇದೀಗ ಡಿಮ್ಯಾಂಡಪ್ಪೋ ಡಿಮ್ಯಾಂಡ್.

ಈ ಸ್ವೀಟ್ ಗೆ ಯಾಕಿಷ್ಟು ದುಬಾರಿ ಬೆಲೆ…?

ಈ ಸ್ವೀಟ್ ನ ಮೇಲೆ 24 ಕ್ಯಾರೆಟ್ ಚಿನ್ನದ ಪದರವನ್ನು ಬಳಸಿ ಲೆಯರ್ ಮಾಡಲಾಗಿದೆ. ಅದರ ಮುಖ್ಯ ಆಕರ್ಷಣೆ ಇದೇ. ಈ ಸಿಹಿತಿನಿಸಿನ ಒಂದು ತುಂಡಿನ ಬೆಲೆ 1,400 ರೂ. ಆಗಿದೆ.‌ ಒಂದು ಕಿಲೋ ಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ.

ಇದು ಬಾದಾಮಿ, ಪಿಸ್ತಾ, ಬ್ಲೂಬೆರ್ರಿ, ಕ್ರ್ಯಾನ್ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್ ನ ಗ್ವಾಲಿಯಾ ಎಸ್ ಬಿ ಆರ್ ಔಟ್ ಲೆಟ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಸ್ಥ ಹೇಳುವಂತೆ ಈ ಸ್ವೀಟ್ ಖರೀದಿಸಲು ಗ್ರಾಹಕರು ಕೂಡಾ ಆಸಕ್ತಿಯಿಂದ ಮಾರುಕಟ್ಟೆಗೆ ಆಗಮಿಸುತ್ತಿದ್ದಾರಂತೆ.

ಒಟ್ಟಾರೆಯಾಗಿ ಸಮೀಪಿಸುತ್ತಿರುವ ದೀಪಾವಳಿಗಂತೂ ಎಲ್ಲಾ ರೀತಿಯ ಸ್ವೀಟ್ಸ್ ಗಳು ಮಾರುಕಟ್ಟೆಗೆ ಆಗಮಿಸಿದೆ. ಜನರು ಹಬ್ಬದ ಆಚರಣೆಯ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.‌ ಸಿಹಿತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *