ಕಾಡಂಚಿನಲ್ಲಿ ಹಸಿಬಿಸಿ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ ಶ್ವೇತಾ ಶ್ರೀವಾತ್ಸವ್ – ವೈರಲ್ ವಿಡಿಯೋ ಕಂಡು ನೆಟ್ಟಿಗರು ಗರಂ!

ಕಾಡಂಚಿನಲ್ಲಿ ಹಸಿಬಿಸಿ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿದ ಶ್ವೇತಾ ಶ್ರೀವಾತ್ಸವ್ – ವೈರಲ್ ವಿಡಿಯೋ ಕಂಡು ನೆಟ್ಟಿಗರು ಗರಂ!

ನ್ಯೂಸ್ ಆ್ಯರೋ : ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದ ನಟಿ ಶ್ವೇತಾ ಶ್ರೀವಾತ್ಸವ್‌. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್‌ ಕೂಡ ಒಬ್ಬರು. ಕೆಲವು ಸಮಯಗಳಿಂದ ವೈಯಕ್ತಿಕ ಕಾರಣಗಳಿಂದಾಗಿ ನಟನೆಯಿಂದ ದೂರವಿದ್ದರು. ಇದೀಗ ಶ್ವೇತಾ ಹಸಿಬಿಸಿ ವಿಚಾರವೊಂದಕ್ಕೆ ಸುದ್ದಿಯಲ್ಲಿದ್ದಾರೆ.

ಕಾಡಂಚಿನಲ್ಲಿ ಹಸಿಬಿಸಿ ಬಟ್ಟೆ ಧರಿಸಿ ಶ್ವೇತಾ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ‌. ವಿಡಿಯೋ ಕಂಡಿರುವ ನೆಟ್ಟಿಗರು ಈ ಬಗ್ಗೆ ಗರಂ ಆಗಿದ್ದಾರೆ.

ಸೆಕ್ಸಿ ಡ್ರೆಸ್, ಟಿಪ್ ಟಿಪ್ ಬರ್ಸಾ ಸಾಂಗ್..!

37 ವರ್ಷದ ಶ್ವೇತಾ ಈ ಹಿಂದೆಯೂ ಸೀರೆಯುಟ್ಟು ಸೆಕ್ಸಿ ಫೋಟೋಶೂಟ್​ ಮಾಡಿಸಿದ್ದರು. ಇದೀಗ ಟಿಪ್​ ಟಿಪ್​ ಬರ್ಸಾ ಪಾನಿಗೆ ಸೆಕ್ಸಿಯಾಗಿ ಡ್ಯಾನ್ಸ್​ ಮಾಡಿದ್ದು, ಹಲವರು ಇದಕ್ಕೆ ಬೆಂಕಿಯ ಎಮೋಜಿ ಹಾಕಿದ್ದರೆ, ಮತ್ತೆ ಕೆಲವರು ಹಾರ್ಟ್​ ಎಮೋಜಿ ಹಾಕಿದ್ದಾರೆ. ಆದರೆ ಈ ಡ್ಯಾನ್ಸ್​ ಶ್ವೇತಾ ಅವರ ಕೆಲವು ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ. ಮದುವೆ, ಮಗಳು ಎಂದೆಲ್ಲಾ ಸಂಸಾರ ನಡೆಸಿಕೊಂಡು ಹೋಗುತ್ತಿದ್ದವಳು ಮೂರು ಬಿಟ್ಟವರ ಥರ ಆಡಬೇಡ ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವರು ಇಂಥ ಕೆಟ್ಟ ಡ್ಯಾನ್ಸ್​ ನಿಮಗ್ಯಾಕೆ? ಬಿಗ್​ಬಾಸ್​ ಮನೆಗೆ ಹೋಗಬೇಕಾ ಅಂತ ಕೇಳುತ್ತಿದ್ದಾರೆ. ಅವರ ಇಷ್ಟ ಏನು ಬೇಕಾದ್ರೂ ಮಾಡ್ತಾರೆ, ನಿಮಗೇನು ಎಂದು ಇನ್ನು ಕೆಲವರು ರಿಪ್ಲೈ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವೇತಾ ಅವರ ಈ ಡ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಶ್ವೇತಾ ಸಿನಿಮಾ‌ ವಿಚಾರ!

ಸಿನಿಮಾ ವಿಷಯಕ್ಕೆ ಬಂದ ಶ್ವೇತಾ ಇದುವರೆಗೆ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ, ಇವರು ಹೆಚ್ಚಾಗಿ ಫ್ಯಾಮಿಲಿ, ಮಗು ಎಂದು ಬ್ಯುಸಿಯಾಗಿರ್ತಾರೆ, ಆಗೊಮ್ಮೆ ಈಗೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಂಡರೂ ಇಂದಿಗೂ ತಮ್ಮ ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ. ಆತ್ಮಸಾಕ್ಷಿ, ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಹೋಪ್ ಚಿತ್ರಗಳಲ್ಲಿ ಇಲ್ಲಿವರೆಗೆ ನಟಿಸಿದ್ದಾರೆ.

ಇವರ ನಟನೆಯ ರಾಘವೇಂದ್ರ ಸ್ಟೋರ್ಸ್ ಈ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಇವರು ಜಗ್ಗೇಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಇವರ ನಟನೆಯ ಚಿಕ್ಕಿಯ ಮೂಗುತ್ತಿ ಇನ್ನಷ್ಟೇ ರಿಲೀಸ್ ಆಗಬೇಕಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *