ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ – ಫಿಟ್ನೆಸ್‌ಗಾಗಿ ರಶ್ಮಿಕಾ ಏನೆಲ್ಲಾ ಕಸರತ್ತು ಮಾಡ್ತಾರೆ ನೀವೇ ನೋಡಿ..!

ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ – ಫಿಟ್ನೆಸ್‌ಗಾಗಿ ರಶ್ಮಿಕಾ ಏನೆಲ್ಲಾ ಕಸರತ್ತು ಮಾಡ್ತಾರೆ ನೀವೇ ನೋಡಿ..!

ನ್ಯೂಸ್ ಆ್ಯರೋ : ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ, ಬಹುಭಾಷಾ ನಟಿಯಾಗಿ ಭಡ್ತಿ ಹೊಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕನ್ನಡತಿ ಬಾಲಿವುಡ್ ಅಂಗಳದಲ್ಲೂ ಮೋಡಿ ಮಾಡುತ್ತಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಸದ್ಯ, ವೃತ್ತಿ ಜೀವನದ ಯಶಸ್ಸಿನ ಉತ್ತುಂಗದಲ್ಲಿದ್ದರೂ ಕೂಡ ತಮ್ಮ ದೈಹಿಕ ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಂಡವರಲ್ಲ. ಆ ಮಾತಿಗೆ ಕನ್ನಡಿ ಹಿಡಿದಿರುವಂತೆ ಇರುವ ವಿಡಿಯೋ ಒಂದು ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಶಬ್ಬಾಸ್ ರಶ್ಮಿಕಾ ಎಂದಿದ್ದಾರೆ.

ಹೀಗಿರುತ್ತೆ ರಶ್ಮಿಕಾ ವರ್ಕೌಟ್..!

ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕಠಿಣ ವ್ಯಾಯಾಮ ಮಾಡುತ್ತಿರುವುದು ಕಾಣಿಸುತ್ತದೆ. ಜತೆಗೆ ಈ ವ್ಯಾಯಾಮಗಳನ್ನು ಖುಷಿಖುಷಿಯಿಂದ ಮಾಡುತ್ತಿರುವುದನ್ನು ಗಮನಿಸಬಹುದು. ರಶ್ಮಿಕಾ ಪ್ರತಿನಿತ್ಯ
ಫಿಟ್ನೆಸ್‌ ಮತ್ತು ಸೌಂದರ್ಯ ಕಾಪಾಡಲು ನಿಯಮಿತವಾಗಿ ವರ್ಕೌಟ್‌ ಮಾಡುತ್ತಾರೆ. ರನ್ನಿಂಗ್‌, ಸೈಕ್ಲಿಂಗ್‌, ಸ್ವಿಮ್ಮಿಂಗ್‌, ಸ್ನಾಯು ಬಲ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಉತ್ತಮಪಡಿಸಿಕೊಳ್ಳಲು ಸ್ಟ್ರೆಂಥ್‌ ಟ್ರೈನಿಂಗ್, ಸ್ಕಾಟ್ಸ್‌, ಲುಂಗ್ಸ್‌, ಪುಶ್‌ ಅಪ್‌ ಮಾಡುವುದರೊಂದಿಗೆ ಮಾನಸಿಕ ಒತ್ತಡ, ಶಾಂತಿ, ನೆಮ್ಮದಿ, ಖುಷಿಖುಷಿಯಾಗಿರಲು ಯೋಗದ ನೆರವು ಪಡೆಯುತ್ತಾರೆ.

ರಶ್ಮಿಕಾ ಡಯೆಟ್ ಹೀಗಿರುತ್ತೆ..?

ಮಧ್ಯಾಹ್ನದ ಊಟಕ್ಕೆ, ರಶ್ಮಿಕಾ ಸಾಮಾನ್ಯವಾಗಿ ಸಲಾಡ್ ಅಥವಾ ಕ್ವಿನೋವಾ ಬೌಲ್ ಅನ್ನು ಬೇಯಿಸಿದ ಚಿಕನ್ ಅಥವಾ ಮೀನಿನೊಂದಿಗೆ ತಿನ್ನುತ್ತಾರೆ. ಅವರು ಸಾಕಷ್ಟು ತರಕಾರಿಗಳು ಮತ್ತು ಆವಕಾಡೊ ಮತ್ತು ಬೀಜಗಳಂತಹ ಆರೋಗ್ಯಕರ ಕೊಬ್ಬನ್ನು ಸಹ ಸೇವಿಸುತ್ತಾರೆ ಎಂದು ಹೇಳಲಾಗಿದೆ.

ಹುರಿದ ತರಕಾರಿಗಳೊಂದಿಗೆ ಬೇಯಿಸಿದ ಮೀನು ಅಥವಾ ಚಿಕನ್ ಮತ್ತು ಬ್ರೌನ್ ರೈಸ್ ಅಥವಾ ಸಿಹಿ ಆಲೂಗಡ್ಡೆ ಒಳಗೊಂಡ ಭೋಜನ ಮಾಡುತ್ತಾರೆ. ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯ ಮತ್ತು ಸಿಹಿ ತಿಂಡಿ ತಿನ್ನುವುದನ್ನು ಆದಷ್ಟು ತಪ್ಪಿಸಿಕೊಳ್ಳುತ್ತಾರಂತೆ.

ಫಿಟ್ನೆಸ್ ವಿಡಿಯೋ, ವಿಚಿತ್ರ ಕ್ಯಾಪ್ಶನ್!

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಅತ್ಯುತ್ತಮ ವರ್ಕೌಟ್‌ ಮಾಡಿದರೆ ನಿಮ್ಮ ದಿನ ಅತ್ಯುತ್ತಮವಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಜುನೈದ್‌ ಅವರೇ (ರಶ್ಮಿಕಾ ವರ್ಕೌಟ್‌ ಕೋಚ್‌) ನನಗೆ ನೀವು ಸೂಚಿಸುವಂತಹ ಸರಳ ವ್ಯಾಯಾಮ ಇದೇನಾ? ನನ್ನನ್ನು ಯಾವಾಗಲೂ ಸಾಯಿಸುತ್ತಿರುವುದಕ್ಕೆ ಧನ್ಯವಾದ. ನಾನು ಇನ್ನಷ್ಟು ಸದೃಢವಾಗಿ ಹೊರಬರುವೆ. ಸದೃಢ ನಾಳೆಗೆ ಚೀಯರ್ಸ್”‌ ಎಂದು ವಿಡಿಯೋದ ಕೆಳಗೆ ಬರೆದುಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *