Sri Devi Mahatme Yakshagana is the little goddess who attracted attention...! - Masth step of the little boy in the theatre

ಶ್ರೀ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಗಮನ ಸೆಳೆದ ಪುಟ್ಟ ದೇವತೆ…! – ರಂಗಮಂಟಪದಲ್ಲಿ ಪುಟ್ಟ ಬಾಲೆಯ ಸಕತ್ ಸ್ಟೆಪ್ : ವಿಡಿಯೋ ವೈರಲ್..

ನ್ಯೂಸ್ ಆ್ಯರೋ : ಯಕ್ಷಗಾನ ಕರಾವಳಿ ಭಾಗದ ಜನಮೆಚ್ಚಿದ ಗಂಡುಕಲೆ. ಯಕ್ಷಗಾನ ಪ್ರೇಮಿಗಳು ಇವತ್ತಿಗೂ ಈ ಕಲೆಯನ್ನು ಆರಾಧಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಆಧರಿಸಿರುವ ಯಕ್ಷಗಾನ ಕಲೆಯನ್ನು ನೋಡುವುದೇ ಒಂದು ಸೊಬಗು. ಯಕ್ಷಗಾನ ಬಯಲಾಟಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಇತ್ತೀಚಿಗೆ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಯಕ್ಷಗಾನ ಬಯಲಾಟದಲ್ಲಿ ದೇವತೆಯ ವೇಷಭೂಷಣ ಧರಿಸಿ ಪುಟ್ಟ ಮಗುವೊಂದು ಯಕ್ಷಗಾನ ಬಯಲಾಟದಲ್ಲಿ ನೃತ್ಯವನ್ನು ಮಾಡಿದ್ದು, ಈ ಮಗುವಿನ ಸೊಗಸಾದ ನೃತ್ಯವನ್ನು ಕಂಡು ನೋಡಲು ಎರಡು ಕಣ್ಣುಗಳು ಸಾಲದು ಎನ್ನುತ್ತಿದ್ದಾರೆ ನೆಟ್ಟಿಗರು.

ವೈರಲ್ ಆದ ವೀಡಿಯೋದಲ್ಲಿ ಏನಿದೆ..?

@ashwith_shetty_tulunad ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ 6 ರಿಂದ 8 ವರ್ಷ ವಯಸ್ಸಿನ ನಡುವಿನ ಪುಟ್ಟ ಮಗುವೊಂದು ಪ್ರಬುದ್ಧ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಬಯಲಾಟದಲ್ಲಿ ಪುಟ್ಟ ಮಗುವೊಂದು ದೇವತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋದಲ್ಲಿ ಈ ಮಗು ಪ್ರಬುದ್ಧ ಯಕ್ಷಗಾನ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ಮನಮೋಹಕ ದೃಶ್ಯಾವಳಿಯನ್ನು ಕಾಣಬಹುದು.

View this post on Instagram

A post shared by Ashwith V Marla (@ashwith_shetty_tulunad)

ವೀಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದ ಹಲವರು ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಅಭಿಮಾನ ಮತ್ತು ಆಸಕ್ತಿಗೆ ತಲೆಬಾಗಬೇಕು ಎಂದಿದ್ದಾರೆ.

ಭವಿಷ್ಯದಲ್ಲಿ ಈ ಪುಟ್ಟ ಕಲಾವಿದೆ ಒಬ್ಬ ಅದ್ಭುತ ಯಕ್ಷಗಾನ ಕಲಾವಿದೆಯಾಗುವುದರಲ್ಲಿ ಸಂಶಯವೇ ಇಲ್ಲ.