ನಾನು ಪೋರ್ನ್ ಸ್ಟಾರ್ ಆಗಲು ದೇವರ ಇಚ್ಛೆಯೇ ಕಾರಣ – ವೈರಲ್ ಆಯ್ತು ಶಿಕ್ಷಕಿ ಹುದ್ದೆ ತ್ಯಜಿಸಿ ನೀಲಿತಾರೆಯಾದ ಟೆಲಿಯಾ ಹೇಳಿಕೆ..!!

ನಾನು ಪೋರ್ನ್ ಸ್ಟಾರ್ ಆಗಲು ದೇವರ ಇಚ್ಛೆಯೇ ಕಾರಣ – ವೈರಲ್ ಆಯ್ತು ಶಿಕ್ಷಕಿ ಹುದ್ದೆ ತ್ಯಜಿಸಿ ನೀಲಿತಾರೆಯಾದ ಟೆಲಿಯಾ ಹೇಳಿಕೆ..!!

ನ್ಯೂಸ್ ಆ್ಯರೋ : ಕೆಲವೊಬ್ಬರು ತಾವು ಇಷ್ಟಪಡುವ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಇನ್ನು ಕೆಲವರು ಅನಿವಾರ್ಯವಾಗಿ ಮತ್ಯಾವುದೋ ಕ್ಷೇತ್ರದಲ್ಲಿ‌ ದುಡಿಯುತ್ತಾರೆ. ಈ ನಡುವೆ ಕೆಲವೇ ಕೆಲವು ಜನರು ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಎಷ್ಟೇ ಸಂಬಳ ಇದ್ದರೂ ಅದನ್ನು ತ್ಯಜಿಸಿ ಮತ್ತೊಂದು ಕ್ಷೇತ್ರ ಆಯ್ದುಕೊಳ್ಳುತ್ತಾರೆ. ಇದೀಗ ಆ ಸಾಲಿಗೆ ಖ್ಯಾತ ನೀಲಿಚಿತ್ರ ತಾರೆ ಕರ್ಟಿ ಟಿಲಿಯಾ ಸೇರ್ಪಡೆಯಾಗಿದ್ದಾರೆ.

ಜನಪ್ರಿಯ ವಿದೇಶಿ ಪೋರ್ನ್ ಸ್ಟಾರ್ ಆಗಿರುವ ಕರ್ಟಿ ಟಿಲಿಯಾ ಪೋರ್ನ್ ಇಂಡಸ್ಟ್ರಿ ಸೇರಲು ತಮ್ಮ ಶಿಕ್ಷಕಿ ಹುದ್ದೆಯನ್ನು ತ್ಯಜಿಸಿದ್ದಾರೆ. ಇದಿಷ್ಟೇ ಅಲ್ಲದೆ ತನ್ನ ಈ ನಿರ್ಧಾರಕ್ಕೆ ಬರಲು ದೇವರೆ ಕಾರಣ ಎಂದಿದ್ದಾರೆ. ಟಿಲಿಯಾ ಈ ಬಗ್ಗೆ ಮಾತನಾಡಿ, ‘ನಾನು ಈ ವೃತ್ತಿಯಿಂದ ಹೆಚ್ಚು ಖ್ಯಾತಿ, ಹಣ ಮತ್ತು ಸಂತೋಷ ಹೊಂದಿದ್ದೇನೆ. ನಾನು ಪೋರ್ನ್ ಸ್ಟಾರ್ ಆಗಬೇಕು ಎಂದಿರುವುದು ಅದು ದೇವರ ಇಚ್ಛೆ’ ಎಂದಿದ್ದಾರೆ.

ಮಾತು ಮುಂದುವರೆಸಿದ ಟಿಲಿಯಾ, ‘ದೇವರ ಸಂದೇಶವು ತುಂಬಾ ಸ್ಪಷ್ಟವಾಗಿದೆ. ನಾನು ಭೂಮಿ ಮೇಲೆ ಹುಟ್ಟಿರುವುದೇ ಪೋರ್ನ್​ ಸ್ಟಾರ್​ ಆಗಿರಲು. ಇದು ನನ್ನದೇ ಆದ ಸೇವಾಮಾರ್ಗ. ನಾನು ಇತರರಿಗೆ ಆನಂದವನ್ನು ಮತ್ತು ಲೈಂಗಿಕ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತೇನೆ. ಅಶ್ಲೀಲ ಮತ್ತು ಲೈಂಗಿಕ ಕೆಲಸಗಳಲ್ಲಿ ತೊಡಗಿರುವವರು ಸಹ ದೇವರನ್ನು ವಿರೋಧಿಸಲು ಅಥವಾ ದೇವರಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲು ಬಯಸುವುದಿಲ್ಲ. ಅವರು ಕೂಡ ದೇವರೊಂದಿಗೆ ಏಕೀಕರಿಸಲ್ಪಟ್ಟಿದ್ದಾರೆ ಮತ್ತು ಪವಿತ್ರರಾಗಿದ್ದಾರೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನನಗೆ ಸಂಘ-ಸಂಸ್ಥೆಗಳ ಅಗತ್ಯವಿಲ್ಲ..!

ನನ್ನ ಬೌದ್ಧಿಕತೆ ಬೆಳೆದಾಗಿನಿಂದ ನಾನು ದೇವರೊಂದಿಗೆ ಸಂಪರ್ಕದಲ್ಲಿದ್ದೇನೆ‌. ದೇವರು ಸರ್ವಾಂತರ್ಯಾಮಿ ಆದ್ದರಿಂದ ದೇವರನ್ನು ಸೇರಲು, ದೇವರ ಸಂದೇಶಗಳನ್ನು ಪಡೆಯಲು ಅಥವಾ ದೇವರು ಯಾರು, ದೇವರೊಂದಿಗಿನ ಸಂಬಂಧ ಹೇಗಿರಬೇಕು ಎಂದು ಹೇಳಲು ನನಗೆ ಯಾವ ಸಂಘ-ಸಂಸ್ಥೆಗಳ ಅಗತ್ಯವಿಲ್ಲ ಎಂದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *