ಮೇ.1 ರಿಂದ ಈ‌ ನಿಯಮಗಳು ಬದಲಾಗಲಿದೆ – ಪ್ರತಿಯೊಬ್ಬನೂ ತಿಳಿಯಲೇ ಬೇಕಾದ ಸಂಗತಿ ಇಲ್ಲಿವೆ..

ಮೇ.1 ರಿಂದ ಈ‌ ನಿಯಮಗಳು ಬದಲಾಗಲಿದೆ – ಪ್ರತಿಯೊಬ್ಬನೂ ತಿಳಿಯಲೇ ಬೇಕಾದ ಸಂಗತಿ ಇಲ್ಲಿವೆ..

ನ್ಯೂಸ್ ಆ್ಯರೋ : 2023ರ ಏಪ್ರಿಲ್ ತಿಂಗಳು ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇದರೊಂದಿಗೆ ಕೆಲವು‌ ಪ್ರಮುಖ ನಿಯಮಗಳು ಕೂಡ ಬದಲಾಗಲಿದ್ದು, ಗ್ರಾಹಕರು ಇವುಗಳನ್ನು ತಿಳಿಯಲೇಬೇಕಾಗಿದೆ. ಮುಖ್ಯವಾಗಿ ಜಿ.ಎಸ್.ಟಿ, ಬ್ಯಾಟರಿ ಚಾಲಿತ ವಾಹನ, ಮ್ಯೂಚುವಲ್ ಫಂಡ್, ಬ್ಯಾಂಕ್ ವಹಿವಾಟು, ಎಲ್.ಪಿ.ಜಿ ಸಿಲಿಂಡರ್ ಬೆಲೆ ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲವು ಬದಲಾವಣೆ ಸಧ್ಯದಲ್ಲೇ ಆಗಲಿದೆ. ಇದು ಸಾರ್ವಜನಿಕರ ಆರ್ಥಿಕತೆಯ ಮೇಲೂ ಪರಿಣಾಮ ಬೀಳಲಿದ್ದು, ಯಾವ ಕ್ಷೇತ್ರದಲ್ಲಿ, ಏನು ಬದಲಾವಣೆಯಾಗಲಿದೆ ಎಂಬುದನ್ನು ನೋಡೋಣ ಬನ್ನಿ.

ಮ್ಯೂಚುವಲ್ ಫಂಡ್ ಬದಲಾವಣೆಗಳು?

ಮೇ.1 ರಿಂದ ಅನ್ವಯವಾಗುವಂತೆ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಇದನ್ನು ಮಾರುಕಟ್ಟೆ ಸ್ನೇಹಿಯಾಗಿಸಲು, ಸೆಬಿ ನೂತನ ಬದಲಾವಣೆಯನ್ನು‌ ಬಯಸುತ್ತಿದೆ. ಹಾಗಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ‌ ಮಾಡಲು ಬಳಸುವ ವ್ಯಾಲೆಟ್ ಆರ್.ಬಿ.ಐ ನ ಕೆವೈಸಿ ಪಡೆಯಬೇಕಾಗುತ್ತದೆ.

ಜಿ.ಎಸ್.ಟಿ ನಿಯಮದ ಪ್ರಮುಖ ಬದಲಾವಣೆ?

ಮೇ.1 ರಿಂದ ಜಿ.ಎಸ್.ಟಿ ನಿಯಮದಲ್ಲೂ ಪ್ರಮುಖ ಬದಲಾವಣೆಗಳು ಕಂಡುಬರಲಿದೆ. ವರ್ಷಗಳು ಉರುಳಿದಂತೆ ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಯ ಅಗತ್ಯವಿರುತ್ತ
ದೆ. ಆ ಹಿನ್ನಲೆಯಲ್ಲಿ ಯಾವುದೇ ವಹಿವಾಟಿನ ಸ್ವೀಕೃತಿಯನ್ನು‌ ಇನ್ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ 7 ದಿನದೊಳಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.

ಬ್ಯಾಟರಿ ಚಾಲಿತ ವಾಹನಗಳ ನಿಯಮದಲ್ಲಿ ಬದಲಾವಣೆ?

ಮೇ.1 ರಿಂದ ಪ್ರಮುಖವಾಗಿ ಎಲೆಕ್ಟ್ರಿಕಲ್ ವಾಹನ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಬದಲಾವಣೆ ತರಲು ನಿರ್ಧರಿಸಿದೆ‌. ಆ ಪ್ರಕಾರ ಮುಂದಿನ ದಿನಗಳಲ್ಲಿ ಈ ವಾಹನಗಳಿಗೆ ಯಾವುದೇ ಯಾವುದೇ ಪರವಾನಗಿ ಶುಲ್ಕ ವಿಧಿಸುವುದಿಲ್ಲ. ಜೊತೆಗೆ ಈ ನಿಯಮಗಳಡಿ ಎಥೆನಾಲ್, ಮೆಥೆನಾಲ್ ಮತ್ತು ಎಲೆಕ್ಟ್ರಿಕ್ ಮೂಲಕ ಚಲಿಸುವ ವಾಹನಗಳಿಗೆ ಪರಿಹಾರ ಲಭಿಸಲಿದೆ.

ಎಟಿಎಂ ವ್ಯವಾಹಕ್ಕೆ ಯಾವುದೇ ಶುಲ್ಕವಿರುವುದು!

ಹೌದು, ಮೇ.1 ರಿಂದ ಜಾರಿಯಾಗುವ ಹೊಸ ನಿಯಮಗಳ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇ ತಿಂಗಳ ಪ್ರಾರಂಭದಿಂದ ಈ ನಿಯಮ ಜಾರಿ ಮಾಡಲಿದೆ. ಖಾತೆಯಲ್ಲಿ ಹಣವಿಲ್ಲದಿದ್ದರೆ, ಎಟಿಎಂ ವ್ಯವಹಾರ ನಡೆಸುವ ವೇಳೆ ಶುಲ್ಕ ಪಾವತಿಸಬೇಕಾಗುತ್ತದೆ. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಎಟಿಎಂ ವ್ಯವಹಾರ ಪೂರ್ಣಗೊಳ್ಳದಿದ್ದರೂ ಕೂಡ ನೀವು 10 ರೂ ಜಿ.ಎಸ್‌.ಟಿ ಪಾವತಿಸುವುದು ಕಡ್ಡಾಯವಾಗಿರಲಿದೆ.

ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುವ ಸಾಧ್ಯತೆ!

ಈಗಾಗಲೇ ಜನರು ಗ್ಯಾಸ್ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಆದರೆ ಮೇ.1 ರಿಂದ ಮತ್ತೆ ದರ ಹೆಚ್ಚಳವಾಗುವ ಸಾಧ್ಯತೆಗಳಿದೆ‌ ಎಂದು ಮೂಲಗಳಿಂದ ತಿಳಿದು ಬಂದಿದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *