
ಶೌಚಾಲಯಕ್ಕೆ ಹೋಗುವ ವಿಷಯಕ್ಕೆ ಶುರುವಾದ ವಾಗ್ವಾದ ಹೊಡೆದಾಟದಲ್ಲಿ ಅಂತ್ಯ – ಮಹಿಳೆಯರ ಡಿಶುಂ ಡಿಶುಂ ಫೈಟ್, ವಿಡಿಯೋ ವೈರಲ್
- ವೈರಲ್ ನ್ಯೂಸ್
- September 5, 2023
- No Comment
- 75
ನ್ಯೂಸ್ ಆ್ಯರೋ : ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಗಾದೆಯಿದೆ. ಕೆಲವೊಂದು ವಿಚಾರಧಾರೆಯಲ್ಲಿ ಹೆಣ್ಣಿಗೆ ಹೆಣ್ಣೆ ವಿರುದ್ಧವಾಗಿ ನಿಂತು ಅವಳಿಗೆ ಕೇಡು ಬಯಸುತ್ತಾಳೆ. ಹಾಗೆಯೇ ಹೆಂಗಸರಿಂದ ಕಡೆ ಜಗಳ ನಡೆಯುವುದು ಸರ್ವೇ ಸಾಮಾನ್ಯ. ನೀರಿಗಾಗಿ, ಬಸ್‌ನ ಸೀಟಿಗಾಗಿ, ಶಾಪಿಂಗ್ ವೇಳೆ ಹೆಂಗಸರ ಮಧ್ಯೆ ಮಾತಾಗುವುದುಂಟು. ಆದರೆ ಶೌಚಾಲಯಕ್ಕೆ ಹೋಗುವ ವಿಚಾರಕ್ಕೆ ಮಹಿಳೆಯರು ಹೊಡೆದಾಟಕ್ಕಿಳಿದಿರುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮೊದಲು ಶೌಚಾಲಯಕ್ಕೆ ನಾನು ಹೋಗಬೇಕೆಂಬ ಇಬ್ಬರ ಮಧ್ಯೆ ಶುರುವಾದ ವಾಗ್ವಾದ ಕೊನೆಗೆ ಹೊಡೆದಾಟದಲ್ಲಿ ಕೊನೆಗೊಂಡಿದೆ. ಈ ಘಟನೆ ಅಮೆರಿಕದಲ್ಲಿ ನಡೆದ ಪಾರ್ಟಿಯೊಂದರ ಸಂದರ್ಭ ಆಗಿದೆ. ಈ ಘಟನೆಯನ್ನು ಅಲ್ಲೇ ಇದ್ದವರು ವಿಡಿಯೋ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಯುವತಿಯೊಬ್ಬಳು ಶೌಚಾಲಯಕ್ಕೆ ಹೋದಾಗ ಆಕೆಯ ತಾಯಿ ಆಚೆ ನಿಂತಿದ್ದರು. ಮುಂದಿನ ಸರದಿ ಅವರದಿತ್ತು. ಆದರೆ ಈ ವೇಳೆ ಅಲ್ಲಿಗೆ ಬಂದ ಇಬ್ಬರು ಯುವತಿಯರು ನಾವೇ ಹೋಗಬೇಕು ಎಂದು ಏಕಾಏಕಿ ಜಗಳ ಶುರು ಮಾಡಿದ್ದಾರೆ. ನಂತರ ಅಲ್ಲೊಂದು ದೊಡ್ಡ ಮಟ್ಟದ ಯುದ್ಧನೇ ನಡೆದುಹೋಗಿದೆ. ಯುವತಿಯರು ಕೂದಲು ಎಳೆದು, ತಲ್ಲಾಟ ನಡೆಸಿ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೊಡೆದಾಟ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಕೆಲವರು ಪ್ರತಿಕ್ರಿಯಿಸಿ ‘ನಾನು ಇದನ್ನು 30 ಬಾರಿ ವೀಕ್ಷಿಸಿದ್ದೇನೆ’ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ‘ವಾಶ್ ರೂಮ್‌ಗೆ ಹೋಗುವ ವಿಚಾರಕ್ಕೆ ಯಾರಾದರೂ ಈ ರೀತಿ ಜಗಳವಾಡುತ್ತಾರೆಯೇ’ ಎಂದು ಹೇಳಿದ್ದಾರೆ.