
59ನೇ ವಯಸ್ಸಿನಲ್ಲಿ ಮತ್ತೇ ಪ್ರೀತಿಯಲ್ಲಿ ಬಿದ್ದ ಉದ್ಯಮಿ ಲಲಿತ್ ಮೋದಿ: ಭಾರತದ ಸೂಪರ್ ಮಾಡೆಲ್ ಜತೆಗಿನ ಫೋಟೋ ವೈರಲ್, ಆ ಸುಂದರಿ ಯಾರು ಗೊತ್ತಾ?
- ಮನರಂಜನೆ
- September 5, 2023
- No Comment
- 48
ನ್ಯೂಸ್ ಆ್ಯರೋ : ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮೀತಾ ಸೇನ್ ಜತೆಗಿನ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ಐಪಿಎಲ್ ಸಂಸ್ಥಾಪಕ, ಉದ್ಯಮಿ ಲಲಿತ್ ಮೋದಿ ತನ್ನ 59 ವಯಸ್ಸಿನಲ್ಲಿ ಭಾರತದ ಸೂಪರ್ ಮಾಡೆಲ್ ಒಬ್ಬರ ಜತೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸುದ್ದಿಯಾಗಿದೆ.
ಈಚೆಗೆ 68ನೇ ವಯಸ್ಸಿನಲ್ಲಿ ಭಾರತದ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರು ಮೂರನೇ ಮದುವೆಯಾದರು. ಲಂಡನ್‌ನಲ್ಲಿ ನಡೆದ ಮದುವೆ ಸಮಾರಂಭದ ಪಾರ್ಟಿಯಲ್ಲಿ ಉದ್ಯಮಿ ನೀತಾ ಅಂಬಾನಿ ಸೇರಿದಂತೆ ಭಾರತದ ಅನೇಕ ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಲಲಿತ್ ಮೋದಿ ಹಾಗೂ ಉಜ್ವಲಾ ರಾವತ್ ಅವರು ಫೋಟೋಗೆ ಒಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇವರಿಬ್ಬರ ಫೋಟೋ ನೋಡಿದ ಮಾಧ್ಯಮಗಳು ಪ್ರೀತಿಯಲ್ಲಿದ್ದಾರೆ ಎಂದು ಹೇಳಿದೆ.
ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಲ್ಲದೆ ಲಲಿತ್ ಮೋದಿ ಅವರು ಸುಶ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ಸುಶ್ಮಿತಾ ಮೌನ ವಹಿಸಿದ್ದರೂ, ಲಲಿತ್ ಮೋದಿ ಒಂದು ದಿನದವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಪೋಸ್ಟ್ ಇತ್ತು. ಇನ್ನೂ ಕೂಡ ಪೋಸ್ಟ್ ಹಾಗೆಯೇ ಇದೆ. ಈಗ, 90 ರ ದಶಕದ ಮತ್ತೊಂದು ಭಾರತದ ಪ್ರಸಿದ್ದ ರೂಪದರ್ಶಿ ಉಜ್ವಲಾ ರಾವತ್ ಜತೆ ಲಲಿತ್ ಅವರು ಮತ್ತೇ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ
ವೈರಲ್ ಆದ ಫೋಟೋದಲ್ಲಿ ಲಲಿತ್ ಮೋದಿ – ಕಪ್ಪು ಸೂಟ್ ಧರಿಸಿ – ಮೆಟ್ಟಿಲುಗಳ ಮೇಲೆ ಪೋಸ್ ನೀಡಿದರೆ, ಉಜ್ವಲಾ ಲ್ಯಾವೆಂಡರ್ ಗೌನ್ ಧರಿಸಿ, ಮೆಟ್ಟಿಲಿನ ಕೆಳಗೆ ಕುಳಿತು ಫೋಸ್ ನೀಡಿದ್ದಾರೆ. ಇಬ್ಬರೂ ಖುಷಿಯಿಂದ ನಗುತ್ತಿದ್ದಾರೆ.
ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಲಲಿತ್ ಮೋದಿ ಆಗಲಿ ಅಥವಾ ಉಜ್ವಲಾ ರಾವತ್ ಪ್ರತಿಕ್ರಿಯಿಸಿಲ್ಲ. 45 ವರ್ಷದ ಉಜ್ವಲಾ ರಾವುತ್ ಅವರು 90 ರ ದಶಕದಲ್ಲಿ ಪ್ರಮುಖ ರೂಪದರ್ಶಿಯಾಗಿದ್ದರು ಮತ್ತು 1996 ರ ಮಿಸ್ ಇಂಡಿಯಾದಲ್ಲಿ ಫೈನಲಿಸ್ಟ್ ಆಗಿದ್ದರು. ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋಗಾಗಿ ನಡೆದ ಮೊದಲ ಭಾರತೀಯರಲ್ಲಿ ಈಕೆ ಕೂಡ ಒಬ್ಬರು.