
ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಚಿರತೆಗೆ ಅರ್ಪಿಸಿತಾ ಜಿಂಕೆ? – ವೈರಲ್ ಫೋಟೋದ ಅಸಲಿಯತ್ತು ಛಾಯಾಗ್ರಾಹಕರೇ ಬಿಚ್ಚಿಟ್ಟಿದ್ದು ಹೀಗೆ…
- ವೈರಲ್ ನ್ಯೂಸ್
- November 6, 2023
- No Comment
- 135
ನ್ಯೂಸ್ ಆ್ಯರೋ : ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಲು ಸಿದ್ಧಳಾಗುತ್ತಾಳೆ. ಇದೇ ಸಂದೇಶವನ್ನು ಹೊತ್ತ ಎರಡು ಚಿರತೆಗಳು ಜಿಂಕೆಯ ಮೇಲೆ ದಾಳಿ ಮಾಡುವ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಿಂಕೆಯು ತನ್ನ ಮರಿಗಳನ್ನು ಉಳಿಸಲು ಪ್ರಯತ್ನಿಸಿದೆ ಎನ್ನುವ ಶೀರ್ಷಿಕೆಯ ಈ ಚಿತ್ರವನ್ನು ಸೆರೆಹಿಡಿದ ಛಾಯಾಗ್ರಾಹಕ ಶೀಘ್ರದಲ್ಲೇ ಖಿನ್ನತೆಗೆ ಒಳಗಾದರು ಎಂದು ಹೇಳಲಾಗಿದೆ.
ಈ ಚಿತ್ರ ಸುಮಾರು ಹತ್ತು ವರ್ಷಗಳಲ್ಲಿ ಹಿಂದಿನ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಎರಡು ಚಿರತೆಗಳು ದಾಳಿ ಮಾಡಿದಾಗ ಜಿಂಕೆ ತನ್ನ ಮರಿಗಳೊಂದಿಗೆ ಆಟವಾಡುತ್ತಿತ್ತು. ಅದಕ್ಕೆ ತಪ್ಪಿಸಿಕೊಳ್ಳಲು ಅವಕಾಶವಿತ್ತು. ಆದರೆ ಜಿಂಕೆಯು ಚಿರತೆಗಳಿಗೆ ಶರಣಾಗಲು ನಿರ್ಧರಿಸಿತ್ತು. ಯಾಕೆಂದರೆ ಅದು ಓಡಿ ಹೋದರೆ ಮರಿಗಳಿಗೆ ತಪ್ಪಿಸಿಕೊಳ್ಳಲು ಹೆಚ್ಚು ಸಮಯವಿರುವುದಿಲ್ಲ.
https://m.facebook.com/story.php?story_fbid=pfbid02j8AniCRS9XLQtrdtFE1L6TKNjrMf5AmzHRv6gshdKmg8p3RWr3jJVZBXHibbuSAPl&id=1210637252&mibextid=K8Wfd2ಈ ಚಿತ್ರವು ಚಿರತೆಯ ಬಾಯಿಯಲ್ಲಿ ತನ್ನ ಗಂಟಲನ್ನು ಹಿಡಿದಿರುವ ತಾಯಿಯ ಕೊನೆಯ ಕ್ಷಣವಾಗಿದೆ. ಚಿರತೆಯ ದಾಳಿಯ ವೇಳೆ ಅದು ತನ್ನ ಮರಿಗಳು ಸುರಕ್ಷಿತವಾಗಿ ಪಾರಾಗಿವೆ ಎಂದು ಖಚಿತಪಡಿಸಿಕೊಳ್ಳಲು ದೃಢವಾಗಿ ನೋಡುತ್ತಿದೆ. ನಿನಗಾಗಿ ತನ್ನ ಪ್ರಾಣವನ್ನೇ ಕೊಡುವ ಜಗತ್ತಿನ ಏಕೈಕ ವ್ಯಕ್ತಿ ತಾಯಿ ಎಂದು ಹೇಳಿಕೊಂಡು ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದ ಕುರಿತು ತನಿಖೆ ಪ್ರಾರಂಭಿಸಿದ ತಂಡಕ್ಕೆ ಇದು ಛಾಯಾಗ್ರಾಹಕ ಅಲಿಸನ್ ಬುಟ್ಟಿಗೀಗ್ ಸೆರೆಹಿಡಿದ ಚಿತ್ರ ಎಂದು ತಿಳಿಯಿತು. ಜೊತೆಗೆ ಅವರು ಚಿತ್ರದ ಕಥೆ ಮತ್ತು ಅದನ್ನು ತೆಗೆದ ಬಳಿಕ ತಾನು ಖಿನ್ನತೆಗೆ ಜಾರಿರುವ ವಿಚಾರ ಸಂಪೂರ್ಣ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಾಲ್ಪನಿಕ ಕಥೆ ಅತ್ಯುತ್ತಮವಾಗಿದೆ. ಆದರೆ ನಾವು ಎಂತಹ ನೀಚ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂದರೆ ಇದು ಮೂರ್ಖ ಮೋಸಗಾರರಿಂದ ತುಂಬಿದೆ. ಹುಚ್ಚರಂತೆ ನಕಲಿ ಸುದ್ದಿಗಳನ್ನು ಓದುತ್ತೇವೆ, ಹರಡುತ್ತೇವೆ ಎಂದು ಹೇಳಿ ಚಿತ್ರದ ಹಿಂದಿನ ಕಥೆಯನ್ನು ವಿವರಿಸುವ ಬ್ಲಾಗ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
ಈ ಬ್ಲಾಗ್‌ನಲ್ಲಿ ಈ ಚಿತ್ರ 2013 ರಲ್ಲಿ ಕೀನ್ಯಾದ ಮಸಾಯಿ ಮಾರಾದಲ್ಲಿ ಸೆರೆಹಿಡಿಯಲಾಗಿದೆ. ಚಿರತೆಯ ತಾಯಿ ತನ್ನ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸುತ್ತಿದ್ದಾಗ ಜಿಂಕೆಯೊಂದನ್ನು ಕೊಂದು ಹಾಕಿತ್ತು ಎನ್ನುವುದು ನೈಜ್ಯ ಸಂಗತಿ ಎಂದು ಅವರು ತಿಳಿಸಿದ್ದಾರೆ.