
ಚೈಲ್ಡ್ ಸ್ಮೋಕರ್ ಅರ್ಡಿ ರಿಜಾಲ್ ಸ್ಟೋರಿ ಗೊತ್ತಾ? – ವಾಟ್ಸಾಪ್ ಸ್ಟಿಕ್ಕರ್ ಗಳಲ್ಲಿ ಮಿಂಚಿದ್ದ ಮಗು ಈಗ ಎಲ್ಲಿದೆ?
- ವೈರಲ್ ನ್ಯೂಸ್
- November 6, 2023
- No Comment
- 158
ನ್ಯೂಸ್ ಆ್ಯರೋ : ಹಾಲು, ಹಣ್ಣು, ತರಕಾರಿ ಗಳನ್ನು ತಿನ್ನ ಬೇಕಾದ ಮಗು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಧಮ್ ಎಂದು ಎಳೆದರೆ ಎಂಥವರ ಕಲ್ಲು ಹೃದಯವಾದರೂ ಒಮ್ಮೆ ಶಾಕ್ ಗೆ ಒಳಗಾಗುವುದು ಖಚಿತ.
ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಮಕ್ಕಳ ಕೈಗೆ ನಾವು ಸಿಗರೇಟ್ ಕೊಡುತ್ತೇವೆಯೇ? ಎಷ್ಟೋ ಮಂದಿ ಯುವಕರು, ವಯಸ್ಕರು ಇದರ ಚಟಕ್ಕೆ ಬಿದ್ದು ಹೊರಬರಲಾರದೆ ಒದ್ದಾಡುವುದನ್ನು ನಾವು ನೋಡಿದ್ದೇವೆ. ಇನ್ನು ಮಕ್ಕಳೇ ಇದರ ದಾಸರಾದರೆ ಏನು ಮಾಡುವುದು? ಬಹುಶ ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಆದರೆ ಮುಂದೊಂದು ಇಂತಹ ಒಂದು ದಿನ ಎದುರಾಗದಂತೆ ನಾವು ಜಾಗ್ರತರಾಗಿರಬೇಕು.
ಈ ಎಲ್ಲಾ ಮಾತುಗಳು ಯಾಕೆ ಎನ್ನುತ್ತಿದ್ದೀರಾ? ಯಾಕೆಂದರೆ ಇಂಡೋನೇಷ್ಯಾದಲ್ಲಿ ಚೈಲ್ಡ್ ಸ್ಮೋಕರ್ ಆಗಿದ್ದ ಒಂದು ಮಗುವಿತ್ತು. ಅದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಇಂಡೋನೇಷ್ಯಾದ ಸುಮಾತ್ರಾ ದಲ್ಲಿ ವಾಸಿಸುತ್ತಿದ್ದ ಅರ್ಡಿ ರಿಜಾಲ್ ದಿನಕ್ಕೆ 40 ಸಿಗರೇಟುಗಳನ್ನು ಸೇದುತ್ತಿದ್ದ. ಅವನು ಮಲಗುವಾಗ, ಎದ್ದೇಳುವಾಗ ಮತ್ತು ಆಟವಾಡುವಾಗ ಧೂಮಪಾನ ಮಾಡುತ್ತಿದ್ದ. ಸುಮಾರು 13 ವರ್ಷಗಳ ಹಿಂದೆ ಅವನು ಧೂಮಪಾನ ಮಾಡುವ ಚಿತ್ರಗಳು ಎಲ್ಲೆಡೆ ವೈರಲ್ ಆಗಿತ್ತು.
18 ತಿಂಗಳ ಮಗುವಾಗಿದ್ದಾಗಲೇ ಅರ್ಡಿ ರಿಜಾಲ್ ಸಿಗರೇಟಿನ ವ್ಯಸನಿಯಾದ. ಇದಕ್ಕೆ ಮುಖ್ಯ ಕಾರಣ ಅವನ ಹೆತ್ತವರು. ಮಗುವಿಗೆ ಹೊಸ ಬದುಕಿನ ಪಾಠ ಹೇಳಿಕೊಡಬೇಕಿದ್ದ ತಂದೆ ತಮಾಷೆಗಾಗಿ ಮಗುವಿಗೆ ಸಿಗರೇಟ್ ನೀಡಿದ. ಬಳಿಕ ಇದನ್ನು ಅನೇಕ ಬಾರಿ ಮಾಡಿದ. ಕ್ರಮೇಣ ಮಗು ಸಿಗರೇಟ್ ವ್ಯಸನಿಯಾಯಿತು.
ಇದರ ಬಗ್ಗೆ ತಿಳಿದ ಇಂಡೋನೇಷ್ಯಾ ಸರ್ಕಾರವು ಮಗುವನ್ನು ತನ್ನ ಜವಾಬ್ದಾರಿಗೆ ತೆಗೆದುಕೊಳ್ಳಲು ನಿರ್ಧರಿಸಿದಾಗ ಮಗುವಿನ ತಾಯಿ ಇದು ಸಾಧ್ಯವಿಲ್ಲ ಎಂದು ಹೇಳಿದರು. ಯಾಕೆಂದರೆ ಇದನ್ನು ಆಕೆ ಹಲವು ಬಾರಿ ಮಾಡಲು ಪ್ರಯತ್ನಿಸಿ ಸೋತಿದ್ದರು. ಆಕೆ ಮೊದಲು ಮಗುವಿನ ಧೂಮಪಾನದ ಚಟ ಬಿಡಿಸಲು ಹಲವು ಆಟಿಕೆಗಳನ್ನು ನೀಡಿದಳು. ಆದರೆ ಮಗು ಸಿಗರೇಟ್ ಸಿಗದೇ ಅಳು ಪ್ರಾರಂಭಿಸುತ್ತಿತ್ತು. ಅಂತಿಮವಾಗಿ ಮಗುವನ್ನು ನಿಯಂತ್ರಿಸಲು ತಾಯಿ ಸಿಗರೇಟ್ ನೀಡಲೇಬೇಕಾಯಿತು.
ಮಗು ಧೂಮಪಾನವನ್ನು ನಿಲ್ಲಿಸಿದಾಗ ತಲೆ ಭಾರವಾಗುವುದು, ಕಿರಿಕಿರಿ, ಹಸಿವು ಹೆಚ್ಚಾಯಿತು. ಪರಿಣಾಮ ಹೆಚ್ಚು ಆಹಾರ ಸೇವನೆ ಮಾಡುವುದನ್ನು ಪ್ರಾರಂಭಿಸಿತ್ತು. ಫಾಸ್ಟ್ ಫುಡ್ ಗಳನ್ನು ಅಧಿಕ ಪ್ರಮಾಣದಲ್ಲಿ ತಿನ್ನುತ್ತಿದ್ದ. ಇದು ಇಂಡೋನೇಷ್ಯಾದ ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೂ ತಿಳಿಯಿತು.
2017ರಲ್ಲಿ ಮಗು ಸಿಗರೇಟು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದ ಎನ್ನಲಾಗುತ್ತದೆ. ಆದರೆ ಆ ಬಳಿಕ ಆ ಮಗು ಎಲ್ಲಿ, ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಆತ ಸಾಕಷ್ಟು ಆರೋಗ್ಯವಂತನಾಗಿದ್ದಾನೆ ಎಂದು ವರದಿಯೊಂದು ಹೇಳಿತ್ತು.