ವಾಟ್ಸಾಪ್ ನಲ್ಲಿ ಇನ್ಮುಂದೆ ಶಾರ್ಟ್ ವಿಡಿಯೋ‌ ಸಂದೇಶವನ್ನೂ ಶೇರ್ ಮಾಡ್ಬೋದು – ಹೇಗೆ ಗೊತ್ತಾ?

ವಾಟ್ಸಾಪ್ ನಲ್ಲಿ ಇನ್ಮುಂದೆ ಶಾರ್ಟ್ ವಿಡಿಯೋ‌ ಸಂದೇಶವನ್ನೂ ಶೇರ್ ಮಾಡ್ಬೋದು – ಹೇಗೆ ಗೊತ್ತಾ?

ನ್ಯೂಸ್ ಆ್ಯರೋ : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಬಳಕೆದಾರರ ಅನುಭವವನ್ನು ಸುಧಾರಿಸುತ್ತಿದೆ. ಇತ್ತೀಚೆಗೆ ಬಹಳಷ್ಟು ವೈಶಿಷ್ಟ್ಯಗಳನ್ನು ವಾಟ್ಸಾಪ್ ಪರಿಚಯಿಸಿದೆ. ಇದೀಗ ಮತ್ತೆ ವಿಡಿಯೋ ಸಂದೇಶದ ಕಳುಹಿಸಬಹುದಾದ ಫೀಚರ್ ಅನ್ನು ಹೊರತರಲಿದೆ.

ಇದರ ಸಹಾಯದಿಂದ ಬಳಕೆದಾರರು ಈಗ ವಿಡಿಯೋವನ್ನು ಸಹ ಸಂದೇಶವಾಗಿ ಕಳುಹಿಸಬಹುದಾಗಿದ್ದು, ಪ್ರಸ್ತುತ, ವಾಟ್ಸಾಪ್ ವಾಯ್ಸ್ ಮೆಸೇಜಿಂಗ್ ವೈಶಿಷ್ಟ್ಯವನ್ನು ನೀಡುತ್ತಿದೆ. ಅದೇ ರೀತಿ ಚಾಟ್ ಬಾಕ್ಸ್‌ನ ಬಲಭಾಗದಲ್ಲಿರುವ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನೀವು ವಾಯ್ಸ್ ರೆಕಾರ್ಡರ್ ಮೆಸೇಜ್‌ಗಳನ್ನು ಕಳುಹಿಸಬಹುದು. ಆದರೆ ಶೀಘ್ರದಲ್ಲೇ ಬಳಕೆದಾರರು ಅದೇ ರೀತಿಯಲ್ಲಿ ವಿಡಿಯೋ ಸಂದೇಶಗಳನ್ನು ಸಹ ಕಳುಹಿಸಬಹುದು.

ಟೆಸ್ಟ್‌ಫೈಟ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ iOS 23.12.0.71 WhatsApp ಬೀಟಾ ಆವೃತ್ತಿಯಲ್ಲಿ ವಿಡಿಯೋ ಸಂದೇಶಗಳನ್ನು ಕಳುಹಿಸಲು ನಿಮಗೆ ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದ್ದು, ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ 2.23.13.4 ಅಪ್‌ಡೇಟ್‌ನಲ್ಲಿಯೂ ಲಭ್ಯವಿದೆ.

ವಾಟ್ಸಾಪ್ ಟ್ರಾಕರ್ WABetalnfo ಪ್ರಕಾರ, ವಿಡಿಯೋ ಮೆಸೇಜ್‌ಗಳನ್ನು ರೆಕಾರ್ಡ್ ಮಾಡುವ ಮತ್ತು ಕಳುಹಿಸುವ ಈ ಹೊಸ ವೈಶಿಷ್ಟ್ಯವು ಈ ವಾಟ್ಸಾಪ್ ಬೀಟಾ ಆವೃತ್ತಿಗಳನ್ನು ಸ್ಥಾಪಿಸಿದ ಕೆಲವು ಜನರಿಗೆ ಲಭ್ಯವಿದೆ. ಪ್ರಮಾಣಿತ ಆವೃತ್ತಿಯ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು WhatsApp Beta Info ಹೇಳಿದೆ.

ಈ ವಿಡಿಯೋ ಸಂದೇಶಗಳನ್ನು 60 ಸೆಕೆಂಡುಗಳಲ್ಲಿ ರೆಕಾರ್ಡ್ ಮಾಡಬಹುದು ಮತ್ತು ಕಳುಹಿಸಬಹುದು. ಇದುವರೆಗೆ ವಾಟ್ಸಾಪ್‌ನಲ್ಲಿ ಪಠ್ಯ ಅಥವಾ ಧ್ವನಿ ಸಂದೇಶಗಳ ರೂಪದಲ್ಲಿ ಮಾತ್ರ ಸಂವಹನ ನಡೆಸಲು ಸಾಧ್ಯವಿತ್ತು. ಆದರೆ ಇನ್ಮುಂದೆ ಶೀಘ್ರದಲ್ಲೇ ಎಲ್ಲಾ ಬಳಕೆದಾರರು ವಿಡಿಯೋ ಸಂದೇಶಗಳೊಂದಿಗೆ ಸಂವಹನ ಮಾಡಬಹುದಾಗಿದೆ.

ಇನ್ನು ವಾಟ್ಸಾಪ್‌ನಲ್ಲಿ ಈ ಅಪ್ಲೇಟ್ ಲಭ್ಯವಿದೆಯಾ ಎಂದು ತಿಳಿಯಲು ವಾಟ್ಸಾಪ್ನಲ್ಲಿ ಯಾವುದೇ ಚಾಟ್ ಬಾಕ್ಸ್ ಓಪನ್ ಮಾಡಿ. ನಂತರ ಚಾಟ್ ಬಾಕ್ಸ್‌ನ ಬಲಭಾಗದಲ್ಲಿ ಗೋಚರಿಸುವ ಮೈಕ್ರೋಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಆ ಐಕಾನ್ ಬದಲಾದರೆ ಮತ್ತು ವಿಡಿಯೋ ಕ್ಯಾಮೆರಾ ಐಕಾನ್ ಕಾಣಿಸಿಕೊಂಡರೆ, ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *