ಮೋದಿ ವಿರುದ್ಧ ‘ಇಂಡಿಯಾ’ ಅವಿಶ್ವಾಸ ನಿಲುವಳಿ ಮಂಡನೆಗೆ ಸಿದ್ಧತೆ – ಅವಿಶ್ವಾಸ ನಿಲುವಳಿ ಎಂದರೇನು? ಇದರ ಇತಿಹಾಸ ಗೊತ್ತಾ?

ಮೋದಿ ವಿರುದ್ಧ ‘ಇಂಡಿಯಾ’ ಅವಿಶ್ವಾಸ ನಿಲುವಳಿ ಮಂಡನೆಗೆ ಸಿದ್ಧತೆ – ಅವಿಶ್ವಾಸ ನಿಲುವಳಿ ಎಂದರೇನು? ಇದರ ಇತಿಹಾಸ ಗೊತ್ತಾ?

ನ್ಯೂಸ್ ಆ್ಯರೋ : ಲೋಕಸಭೆ ಚುನಾವಣೆಗೆ ಇನ್ನು‌ ಕೆಲವೇ ತಿಂಗಳು ಬಾಕಿ ಇದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ವಿರುದ್ಧ ಐ.ಎನ್.ಡಿ.ಐ.ಎ (ಇಂಡಿಯಾ) ಗುರುತಿಸಿಕೊಂಡಿರುವ ಪ್ರತಿಪಕ್ಷಗಳ ಸಮೂಹ ಅವಿಶ್ವಾಸ ನಿರ್ಣಯ ಮಂಡಿಸಿದೆ. ಹಾಗಿದ್ದರೆ ಈ ಅವಿಶ್ವಾಸ ನಿರ್ಣಯ ಎಂದರೇನು?, ಇದರಿಂದ‌ ಮೋದಿ ಸರ್ಕಾರಕ್ಕೆ ಏನಾಗಲಿದೆ? ಈ ಬಗೆಗಿನ ಸಮಗ್ರ ಮಾಹಿತಿ‌ ಇಲ್ಲಿದೆ.

ಅವಿಶ್ವಾಸ ನಿಲುವಳಿ ಎಂದರೇನು?

ಆಡಳಿತ ಸರ್ಕಾರದ ವಿರುದ್ಧ ವಿಶ್ವಾಸವಿಲ್ಲ ಎಂಬುದನ್ನು ಪ್ರಸ್ತುತ ಪಡಿಸಲು ಪ್ರತಿಪಕ್ಷಗಳು ಸರ್ಕಾರಕ್ಕೆ ಹಾಕುವ ಸವಾಲು ಪ್ರಕ್ರಿಯೆಯನ್ನು ಅವಿಶ್ವಾಸ ನಿಲುವಳಿ ಎನ್ನುತ್ತಾರೆ. ಇದಕ್ಕೆ ತನ್ನದೇ ಆದ ಶಿಷ್ಟಾಚಾರಗಳಿವೆ. ಅವಿಶ್ವಾಸ ಮಂಡನೆಯ ನೋಟಿಸ್ ಲೋಕಸಭೆ ಸ್ಪೀಕರ್ ಅನುಮೋದನೆಯೊಂದಿಗೆ ಹಲವು ಹಂತ ದಾಟಬೇಕು. ಅಂತಿಮವಾಗಿ ಮತದಾನ ನಡೆಯುತ್ತದೆ. ಇದರಲ್ಲಿ ಆಡಳಿತ ಪಕ್ಷವು ಮ್ಯಾಜಿಕ್ ನಂಬರ್ ಮತಗಳನ್ನು ಪಡೆಯದಿದ್ದರೆ ಮಾತ್ರ ಸರ್ಕಾರ ಪತನವಾಗುತ್ತದೆ. ಇದನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದಾಗಿದೆ.

ಯಾರು ಮಂಡಿಸಬಹುದು? ಹೇಗೆ ಮಂಡಿಸಬೇಕು?

ಅವಿಶ್ವಾಸ ನಿಲುವಳಿಯನ್ನು ಲೋಕಸಭೆಯ ಯಾವುದೇ ಸದಸ್ಯ‌ ಮಂಡಿಸಬಹುದಾಗಿದೆ. ಆದರೆ ಈ‌ ನಿಲುವಳಿಯನ್ನು ಸದನದಲ್ಲಿರುವ ಕನಿಷ್ಠ 50 ಮಂದಿ ಅನುಮೋದಿಸಬೇಕು. ಜೊತೆಗೆ ಅವಿಶ್ವಾಸ ನಿಲುವಳಿಯು ಲಿಖಿತ ರೂಪದಲ್ಲಿರಬೇಕು. ಜೊತೆಗೆ ಅದನ್ನು ಮಂಡಿಸುವವರು ಸಹಿ ಹಾಕಿರಬೇಕು. ಸದನದ ಕಲಾಪವಿರುವ ಯಾವುದೇ ದಿನ ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ಸಲ್ಲಿಸಬೇಕು.

ಅವಿಶ್ವಾಸ ನಿಲುವಳಿಯ ಇತಿಹಾಸ!

  • ಭಾರತ ಗಣರಾಜ್ಯವಾದ ನಂತರ 75 ವರ್ಷಗಳಲ್ಲಿ 27 ಬಾರಿ ಅವಿಶ್ವಾಸ ನಿಲುವಳಿ ಮಂಡಿಸಲಾಗಿದೆ.
  • ಮೊಟ್ಟಮೊದಲ ಅವಿಶ್ವಾಸ ನಿಲುವಳಿ ಮಂಡನೆಯಾಗಿದ್ದು 1966ರಲ್ಲಿ ಜವಹರಲಾಲ್ ನೆಹರೂ ಸರ್ಕಾರದ ವಿರುದ್ಧ.
  • ಮೊದಲ ಅವಿಶ್ವಾಸ ನಿಲುವಳಿಯಲ್ಲಿ ಸರ್ಕಾರದ ಪರವಾಗಿ 347 ಮತಗಳು ಬಿದ್ದರೆ, ವಿರುದ್ಧವಾಗಿ 62 ಮತಗಳು ಚಲಾವಣೆಯಾಗಿತ್ತು.
  • ಪ್ರಧಾನಿಯಾಗಿದ್ದಾಗ ಇಂದಿರಾ ಗಾಂಧಿಯವರು ಅತಿಹೆಚ್ಚು ಎಂದರೆ 15 ಬಾರಿ ಅವಿಶ್ವಾಸ ನಿಲುವಳಿ ಎದುರಿಸಿದ್ದರು.
  • ಮೋದಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆಯಾಗುತ್ತಿರುವುದು ಇದು ಎರಡನೇ ಸಲ. ಮೊದಲನೇ ಬಾರಿ 2018ರಲ್ಲಿ ನಡೆದಿತ್ತು.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *