ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸೋನಾಕ್ಷಿ ಸಿನ್ಹಾ-ಝಹೀರ್ ಇಕ್ಬಾಲ್ – ಡೇಟಿಂಗ್ ಗಾಸಿಪ್ ಗೆ ಸಿಕ್ತು ಪ್ರೂಫ್

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸೋನಾಕ್ಷಿ ಸಿನ್ಹಾ-ಝಹೀರ್ ಇಕ್ಬಾಲ್ – ಡೇಟಿಂಗ್ ಗಾಸಿಪ್ ಗೆ ಸಿಕ್ತು ಪ್ರೂಫ್

ನ್ಯೂಸ್ ಆ್ಯರೋ‌ : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ, ಉದ್ಯಮಿ ಝಹೀರ್ ಇಕ್ಬಾಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಪ್ ಗೆ ಮತ್ತೊಂದು ಪುರಾವೆ ಲಭಿಸಿದ್ದು, ಇತ್ತೀಚೆಗೆ ಈ ಜೋಡಿ ಬಾಲಿವುಡ್ ನಟಿ ಹುಮಾ ಖುರೇಷಿ ಬರ್ತ್ ಡೇ ಪಾರ್ಟಿಗೆ ಜೊತೆಯಾಗಿ ಆಗಮಿಸಿದೆ.

ಇದೇ ಮೊದಲ ಸಲವಲ್ಲ..!

ಸೋನಾಕ್ಷಿ ಮತ್ತು ಝಹೀರ್ ಹಲವು ಬಾರಿ ಜೊತೆಗೆ ಕಾಣಿಸಿಕೊಂಡು ಪರಸ್ಪರ ಪ್ರೀತಿಸುತ್ತಿದ್ದಾರೆಂಬ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಇವರು ಇದಕ್ಕೆ ಸಮರ್ಥನೆಯನ್ನೂ ನೀಡಿಲ್ಲ, ಹಾಗಂತ ನಿರಾಕರಿಸಲೂ ಇಲ್ಲ.

ಹುಮಾ ಖುರೇಷಿ ಜುಲೈ 28ರಂದು 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಪಾರ್ಟಿಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ಪೈಕಿ ಸೋನಾಕ್ಷಿ ಮತ್ತು ಝಹೀರ್ ಇಬ್ಬರೂ ಬಿಳಿ ಬಟ್ಟೆ ತೊಟ್ಟು ಜೊತೆಗೆ ಆಗಮಿಸಿ ಗಮನ ಸೆಳೆದರು.

ಇಬ್ಬರು ಜೊತೆಯಾಗಿ ಫೋಸ್ ಕೊಟ್ಟಿರುವ ವೀಡಿಯೋ ಇಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಸೋನಾಕ್ಷಿ ಬಿಳಿ ಉಡುಗೆಯಲ್ಲಿ ಅದ್ಬುತವಾಗಿ ಕಾಣಿಸುತ್ತಾರೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ವೈಟ್ ಟ್ವಿನ್ನಿಂಗ್ ಎಂದು ಕಮೆಂಟ್ ಮಾಡಿದ್ದಾರೆ.

ಕಳೆದ ವರ್ಷ ತೆರೆಕಂಡ ‘ಡಬಲ್ ಎಕ್ಸೆಲ್’ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಹುಮಾ ಖುರೇಷಿ ಮತ್ತು ಝಹೀರ್ ಇಕ್ಬಾಲ್ ಜೊತೆಯಾಗಿ ನಟಿಸಿದ್ದರು. ಸದ್ಯ ಸೋನಾಕ್ಷಿ ‘ಕಾಕುಡ’, ‘ನಿಖಿತ ರಾಯ್ ಆ್ಯಂಡ್ ದ ಬುಕ್ ಆಫ್ ಡಾರ್ಕ್ನೆಸ್’, ‘ಬಡೆ ಮಿಯಾನ್ ಚೋಟೆ ಮಿಯಾನ್’ ಚಿತ್ರಗಳಲ್ಲಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ‘ಹೀರಮಂಡಿ’ ಸೀರಿಸ್ ನಲ್ಲಿ ಅಭಿನಯಿಸುತ್ತಿದ್ದಾರೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *