ದುಬಾರಿ ಐಫೋನ್‌ನ ಆ್ಯಪಲ್ ಲೋಗೋ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ – ಸೇಬನ್ನೇ ಲೋಗೋ ಮಾಡಿದ್ದೇಕೆ? ಇಲ್ಲಿದೆ ಸಂಪೂರ್ಣ ಚಿತ್ರಣ..

ದುಬಾರಿ ಐಫೋನ್‌ನ ಆ್ಯಪಲ್ ಲೋಗೋ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ – ಸೇಬನ್ನೇ ಲೋಗೋ ಮಾಡಿದ್ದೇಕೆ? ಇಲ್ಲಿದೆ ಸಂಪೂರ್ಣ ಚಿತ್ರಣ..

ನ್ಯೂಸ್ ಆ್ಯರೋ : ದುಬಾರಿ ಮೊಬೈಲ್ ಆಗಿರುವ ಆ್ಯಪಲ್‌ ಐಫೋನ್‌ನ ಒಡೆಯನಾಗುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಅಷ್ಟರ ಮಟ್ಟಿಗೆ ಆ್ಯಪಲ್ ಐಫೋನ್ ಟ್ರೆಂಡ್​​ ಸೆಟ್​ ಕ್ರಿಯೇಟ್​​ ಮಾಡಿದೆ. ಇನ್ನೂ ಈ ಬ್ರ್ಯಾಂಡ್‌ ಅನ್ನು ಇಷ್ಟೊಂದು ಯಶಸ್ವಿಯಾಗಿಸಲು ಕಾರಣ ಇದರ ಸಂಸ್ಥಾಪಕ, ಸಿಇಒ ಸ್ಟೀವ್ ಜಾಬ್ಸ್.

ಯುವ ಸಮುದಾಯದಲ್ಲಿ ಎಲ್ಲರಿಗೂ ಇಷ್ಟವಾಗುವ ಈ ಮೊಬೈಲ್‌ ತನ್ನ ಗುಣಮಟ್ಟದ ಮೂಲಕ ಇಂದಿಗೂ ಟ್ರೆಂಡಿಗ್‌ನಲ್ಲಿದೆ. ಇಂದಿಗೂ ಮಾರುಕಟ್ಟೆಯಲ್ಲಿ ಟಾಪ್‌ನಲ್ಲಿರುವ ಈ ಐಫೋನ್ ನ ಲೋಗೋ ಹಿಂದಿದೆ ಒಂದು ಕುತೂಹಲಕಾರಿಯಾದಂತಹ ವಿಷಯ.

ಸ್ಟೀವ್ ಜಾಬ್ಸ್ ಅವರಿಗೆ ಸೇಬು ಬಹಳ ಇಷ್ಟವಾದ ಹಣ್ಣು. ಅದಲ್ಲದೆ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರು ಬಹಳ ಇಷ್ಟವಾದ ವ್ಯಕ್ತಿ. ಆದ್ದರಿಂದಲೇ 1976ರಲ್ಲಿ ಮೊದಲ ಬಾರಿ ತಯಾರಿಸಿದ ಈ ಕಂಪೆನಿಯ ಮೊದಲ ಲೋಗೊದಲ್ಲಿ ಸೇಬು​ ಮರದ ಕೆಳಗೆ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಕಾಣಬಹುದು. ಆದರೆ ಆ ಲೋಗೋ ಅಷ್ಟೊಂದು ಇಷ್ಟವಾಗದ ಕಾರಣ 1977ರಲ್ಲಿ ರಾಬ್ ಜಾನೋಫ್ ಎಂಬ ಹೆಸರಿನ ಗ್ರಾಫಿಕ್ ಡಿಸೈನರ್​​ನ ನೇಮಿಸಿ ಹೊಸ ಆಪಲ್​​ ಡಿಸೈನ್​​​ ಕ್ರಿಯೇಟ್​​ ಮಾಡ್ತಾರೆ. ಅದೇ ಅರ್ಥ ಕಚ್ಚಿದ ಸೇಬು ಹಣ್ಣಿನ ಚಿತ್ರಣವನ್ನು ಮಾಡಿದವರು ರಾಬ್ ಅವರು.

ಅರ್ಥ ಕಚ್ಚಿದ ಸೇಬಿನ ಹಿಂದಿದೆ ಒಂದು ಕಥೆ:

ಸ್ಟೀವ್ ಜಾಬ್ಸ್ ಇದರ ಬಗ್ಗೆ ಹೇಳಿಕೊಂಡಿದ್ದು, ಪ್ರಾರಂಭದಲ್ಲಿ ಪೂರ್ತಿಯಾಗಿ ಸೇಬು ಹಣ್ಣನ್ನು ಬಿಡಿಸಲಾಗಿದ್ದರೂ ಸಹ ಅದು ಚೆರಿ ಹಣ್ಣನ್ನು ಹೋಲುತ್ತದೆ ಎಂಬ ಕಾರಣಕ್ಕಾಗಿ, ಈ ರೀತಿಯಾಗಿ ಲೋಗೋ ತಯಾರಿಸಲಾಯಿತು ಎಂದು ಹೇಳಿದ್ದಾರೆ.

ಇದು ಹೊಸ ರೀತಿಯ ಮಾರ್ಕೆಟಿಂಗ್​​ ಸ್ಟಾಟರ್ಜಿಯಾಗಿರುವುದನ್ನು ಕಾಣಬಹುದು. ಇದಲ್ಲದೇ ಆಧುನಿಕ ಕಂಪ್ಯೂಟರ್‌ನ ಪಿತಾಮಹ ಅಲನ್ ಟ್ಯೂರಿಂಗ್ ಸೈನೈಡ್ ಮಿಶ್ರಿತ ಸೇಬನ್ನು ತಿಂದ ಕಾರಣ ಮೃತಪಟ್ಟಿದ್ದರು. ಆದ್ದರಿಂದ ಅವರ ಗೌರವಾರ್ಥವಾಗಿ ಆ್ಯಪಲ್ ಹಣ್ಣಿನ ಲೋಗೋ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದುವರೆಗೆ ಬಣ್ಣದಲ್ಲಿ ಅಷ್ಟೇ ಬದಲಾವಣೆ:

1977ರಲ್ಲಿ ಕಾಮನಬಿಲ್ಲಿನ ಬಣ್ಣದಲ್ಲಿ ರಚಿಸಲಾಗಿದ್ದ ಈ ಲೋಗೋವನ್ನು ಮುಂದಿನ 20 ವರ್ಷಗಳ ವರೆಗೆ ಅಂದರೆ 1977 ರಿಂದ 1998ವರೆಗೆ ಬಳಸಲಾಯಿತು. ಸ್ಟೀವ್ ಜಾಬ್ಸ್ 1997 ರಲ್ಲಿ ಆಪಲ್‌ಗೆ ಹಿಂದಿರುಗಿದ ಒಂದು ವರ್ಷದ ನಂತರ ಅಂದರೆ 1998ರಿಂದ 2000ರವರೆಗೆ ಗಾಢ ಕಪ್ಪು ಬಣ್ಣದ ಆ್ಯಪಲ್​​ ಲೋಗೋ, 2001ರಿಂದ 2007ರ ವರೆಗೆ ಆಕಾಶ ನೀಲಿ ಬಣ್ಣದಲ್ಲಿ ತ್ರಿಡಿ ಲೋಗೋ ವಿನ್ಯಾಸಗೊಳಿಸಲಾಯಿತು. ಪ್ರಸ್ತುತ ಈಗ ಬಿಳಿ ಬಣ್ಣದಲ್ಲಿ ನಾವು ಆ್ಯಪಲ್ ಲೋಗೋವನ್ನು ಕಾಣಬಹುದು.

ಆ್ಯಪಲ್ ಐಫೋನ್‌ನ ಹಿನ್ನೆಲೆ:

1976 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್‌ನಲ್ಲಿ ಸ್ಟೀವ್ ಜಾಬ್ಸ್ ಎಂಬಾತ ಆ್ಯಪಲ್ ಐಫೋನ್ ಕಂಪೆನಿಯನ್ನು ಚಿಕ್ಕದಾಗಿ ಆರಂಭಿಸಿದ್ದಾರೆ. ಇಂದು ಈ ಕಂಪೆನಿ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದೆ. 1977 ರಲ್ಲಿ, ಅಧಿಕೃತವಾಗಿ ಆ್ಯಪಲ್ ಕಂಪನಿಯಾಯಿತು. ಮೊದಲಿಗೆ ಕಂಪ್ಯೂಟರ್‌ಗಳನ್ನು ಮಾರಾಟ ಮಾಡುತ್ತಿದ್ದ ಈ ಕಂಪೆನಿ, ನಂತರ ಮೊಬೈಲ್​​ ಪ್ರಾರಂಭಿಸಿ, ಈಗ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಕೂಡ ಆರಂಭಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *