ಮಗುವಿಗೆ ಜನ್ಮ ಕೊಡಲಿದ್ದಾರೆ ಅಪ್ಪ – ಮಗುವಿನ ನಿರೀಕ್ಷೆಯಲ್ಲಿ ದೇಶದ ಮೊದಲ ಟ್ರಾನ್ಸ್‌ಮ್ಯಾನ್ ಸಹದ್..!!

ಮಗುವಿಗೆ ಜನ್ಮ ಕೊಡಲಿದ್ದಾರೆ ಅಪ್ಪ – ಮಗುವಿನ ನಿರೀಕ್ಷೆಯಲ್ಲಿ ದೇಶದ ಮೊದಲ ಟ್ರಾನ್ಸ್‌ಮ್ಯಾನ್ ಸಹದ್..!!

ನ್ಯೂಸ್‌ ಆ್ಯರೋ : ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನಲ್ಲಿ ತೃತೀಯ ಲಿಂಗಿ ಜೋಡಿಯೊಂದು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಮೂಲಕ ದೇಶದ ಮೊದಲ ಟ್ರಾನ್ಸ್‌ಮ್ಯಾನ್ ತಂದೆಯಾಗುತ್ತಿದ್ದಾರೆ.

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ದಂಪತಿ ತಂದೆ–ತಾಯಿ ಆಗುತ್ತಿದ್ದಾರೆ. ಸಹದ್ ಗರ್ಭಧರಿಸುವ ಮೂಲಕ ಭಾರತದ ಮೊದಲ ಟ್ರಾನ್ಸ್‌ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ.

ಈ ಹಿಂದೆ ಈ ಜೋಡಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾನೂನು ಪ್ರಕ್ರಿಯೆ ಸವಾಲಾಗಿತ್ತು. ಈ ವೇಳೆ ಗಂಡಾಗಿ ಬದಲಾಗಿದ್ದ ಸಹಾದ್‌ಗೆ ಗರ್ಭವತಿಯಾಗುವ ಬಗ್ಗೆ ಯೋಚನೆ ಬರುತ್ತದೆ. ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿದಿದ್ದಾರೆ. ಅಲ್ಲದೆ ಒಮ್ಮೆ ಕೈಬಿಟ್ಟ ಸ್ತ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಸಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ಸಹದ್ ನಿರ್ಧಾರವನ್ನೇ ಬದಲಿಸಿತು.

ಇದೀಗ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಚಿಕಿತ್ಸೆ ಆರಂಭಿಸಲಾಯಿತು. ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಲಾಗಿಲ್ಲ. ಮಾರ್ಚ್‌ 4ರಂದು ಈ ಜೋಡಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದೆ. ಸಿಯಾ ಒಬ್ಬ ನರ್ತಕಿ. ಸಹದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *