ನಿಮ್ಮ ಫೋಟೋ ಗೂಗಲ್‌ನಲ್ಲಿ ಬರಬೇಕೇ? – ಈ ವಿಧಾನವನ್ನು ಅನುಸರಿಸಿ, ಸೆಲೆಬ್ರೆಟಿಯಂತೆ ನೀವೂ ಕಾಣಿಸಿಕೊಳ್ಳಿ…

ನ್ಯೂಸ್ ಆ್ಯರೋ : ಸಿನಿಮಾ ತಾರೆಯರು, ಕ್ರಿಕೆಟರ್ಸ್, ರಾಜಕಾರಣಿಗಳು ಸೇರಿದಂತೆ ಪ್ರಖ್ಯಾತರ ಹೆಸರನ್ನು ನಾವು ಗೂಗಲ್‌ನಲ್ಲಿ ಹುಡುಕಾಡಿದರೆ ಅವರ ಫೋಟೋಗಳು ಕಾಣಸಿಗುತ್ತದೆ. ಹಾಗೆಯೇ ನಮ್ಮ ಹೆಸರು (ಜನಸಾಮಾನ್ಯರ) ಕೂಡ ಸುಲಭವಾಗಿ ಗೂಗಲ್‌ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಬಹುದು. ಈ ಕೆಳಕಂಡ ವಿಧಾನವನ್ನು ಅನುಸರಿಸಿದರೆ ಸುಲಭವಾಗಿ ಗೂಗಲ್‌ನಲ್ಲಿ ನಿಮ್ಮ ಫೋಟೋ ಬರುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ:

ಮೊದಲಿಗೆ ಫೋಟೋಥಿಂಗ್ ಎಂಬ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ನಿಮ್ಮ ಫೋಟೋ ಅನ್ನು ಗೂಗಲ್‌ಗೆ ಸೇರಿಸಬೇಕು. ಆಗ ನೀವು ಅಪ್‌ಲೋಡ್ ಮಾಡಿದ ಫೋಟೋವನ್ನು ಗೂಗಲ್‌ನಲ್ಲಿ ನೋಡಬಹುದು. ಅದಕ್ಕೂ ಮುನ್ನಾ ನೀವು ರಿಜಿಸ್ಟರ್‌ ಆಗಿರಬೇಕು. ನಿಮ್ಮ ಇ ಮೇಲ್ ಅಡ್ರೆಸ್ ಅನ್ನು ನೀಡಿ ವೆಬ್‌ಸೈಟ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿದ ನಂತರ ಕೆಳಗೆ “JOIN” ಎಂಬ ಆಯ್ಕೆ ಕಾಣಿಸುತ್ತದೆ, ಅದನ್ನು ಒತ್ತಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.

ಲಾಗಿನ್ ಆದ ನಂತರ ವೆಬ್‌ಸೈಟ್ ಹೋಮ್‌ ಪೇಜ್ ತೆರೆಯುತ್ತದೆ. ಅಲ್ಲಿ ಹೋಮ್ ಬಟನ್ ಪಕ್ಕದಲ್ಲಿ ಕಾಣಿಸುವ ಅಪ್‌ಲೋಡ್ ಎಂಬ ಆಯ್ಕೆಯನ್ನು ಒತ್ತಿ. ನಂತರ “ಚೂಸ್ ಪೈಲ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಬಳಿ ಇರುವ ಅಂದವಾದ ಪೋಟೋವನ್ನು ಸೆಲೆಕ್ಟ್ ಮಾಡಿಕೊಂಡು ‘ಓಪನ್’ ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಪೋಟೋ ವೆಬ್‌ಸೈಟ್ ಸೇರುತ್ತದೆ.

ಅಲ್ಲಿ ಟ್ಯಾಗ್ಸ್ ಎಂಬ ಕಾಲಂನಲ್ಲಿ ಗೂಗಲ್‌ನಲ್ಲಿ ಹುಡುಕಾಡಲು ಬಳಸುವ ಹೆಸರನ್ನು ಬರೆಯಿರಿ. ಈಗ ಡಿಸ್ಕ್ರಿಪ್ಷನ್‌ನೊಂದಿಗೆ ನಿಮ್ಮ ಫೋಟೋವನ್ನು ಅಪ್‌ಲೋಡ್‌ ಮಾಡಿ. ನಂತರ ಟ್ಯಾಗ್ಸ್ ಕಾಲಂನಲ್ಲಿ ನೀವು ನೀಡಿದ ಹೆಸರುಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ಪೋಟೋ ಕಾಣಿಸಿಕೊಳ್ಳುತ್ತದೆ.

ಅದಲ್ಲದೆ ಫೇಸ್‌ಬುಕ್ ಖಾತೆ ಮೂಲಕವು ನಿಮ್ಮ ಫೋಟೋ ಗೂಗಲ್‌ನಲ್ಲಿ ಕಾಣುವಂತೆ ಮಾಡಬಹುದು. ಫೇಸ್‌ಬುಕ್‌ಗೆ ಫೋಟೋವನ್ನು ಅಪ್‌ಲೋಡ್ ಮಾಡುವಾಗ ಸರಿಯಾದ ಹೆಸರನ್ನು ನೀಡಿಬೇಕು. ಉದಾಹರಣೆಗೆ ನಿಮ್ಮ ಹೆಸರು ರಾಜೇಶ್ ಎಂದಿದ್ದರೆ, ನಿಮ್ಮ ಫೋಟೋಗೆ Rajesh- shivamogga.jpg ಎಂದು ಹೆಸರು ನೀಡಿ ಅಪ್​ಲೋಡ್ ಮಾಡಬೇಕು. ಇದು ಎರಡು ದಿನಗಳ ಒಳಗೆ ಅಪ್ಡೇಟ್ ಆಗಿ ಗೂಗಲ್​ನಲ್ಲಿ ಕಾಣಸಿಗುತ್ತದೆ.

ಸುಲಭ ವಿಧಾನದಲ್ಲಿ ನಿಮ್ಮ ಫೋಟೋವನ್ನು ಗೂಗಲ್‌ನಲ್ಲಿ ಕಾಣುವಂತೆ ಮಾಡಬಹುದು. ಮೇಲ್ಕಂಡ ರೀತಿಯಲ್ಲಿ ಪ್ರಯತ್ನಿಸಿ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *