ಏಕಾಏಕಿ ಫುಡ್‌ ಡೆಲಿವರಿ ಸ್ಥಗಿತಗೊಳಿಸಿದ ಝೊಮ್ಯಾಟೋ : ಈ ಹಠಾತ್ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ…!?

ಏಕಾಏಕಿ ಫುಡ್‌ ಡೆಲಿವರಿ ಸ್ಥಗಿತಗೊಳಿಸಿದ ಝೊಮ್ಯಾಟೋ : ಈ ಹಠಾತ್ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ…!?

ನ್ಯೂಸ್ ಆ್ಯರೋ: ಝೊಮ್ಯಾಟೋ ಸಂಸ್ಥೆ ಯುಎಇಯಲ್ಲಿ ತನ್ನ ಆ್ಯಪ್ ಮೂಲಕ ನೀಡುತ್ತಿದ್ದ ಆಹಾರ ವಿತರಣೆ ಸೇವೆಯನ್ನು ಸ್ಥಗಿತಮಾಡಿದೆ. ಅದರಂತೆ ನವೆಂಬರ್ 24ರಿಂದಲೇ ಫುಡ್ ಡೆಲಿವರಿ ಸೇವೆ ಸ್ಥಗಿತವಾಗಿದೆ.

ಯುಎಇ ಮೂಲದ ಆಹಾರ ವಿತರಣಾ ವ್ಯವಹಾರವನ್ನು 2019 ರಲ್ಲಿ ಆನ್‌ಲೈನ್ ಫುಡ್ ಆರ್ಡರಿಂಗ್ ಕಂಪೆನಿ ತಲಾಬಾತ್‌ಗೆ ಝೊಮ್ಯಾಟೋ ಮಾರಾಟ ಮಾಡಿದೆ.

ಝೊಮ್ಯಾಟೊ ಹೇಳಿಕೆ ಏನು?

ಝೊಮ್ಯಾಟೊ ತನ್ನ ಯುಎಇ ಮೂಲದ ವ್ಯಾಪಾರವನ್ನು ಮಾರಾಟ ಮಾಡಿದ ನಂತರ ವೆಚ್ಚ ಮರುಪಾವತಿಗೆ ಪ್ರತಿಯಾಗಿ ಝೊಮ್ಯಾಟೊ ತಲಾಬತ್‌ಗೆ ಸೇವೆಗಳನ್ನು ಸಲ್ಲಿಸುತ್ತಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಕಂಪೆನಿ 2022 ರಿಂದ ಯುಎಇಯಲ್ಲಿ ತಲಾಬಾತ್‌ಗೆ ಸೇವೆಗಳನ್ನು ಸಲ್ಲಿಸುವುದನ್ನು ನಿಲ್ಲಿಸಿದೆ ಹಾಗೂ ಒಪ್ಪಂದಗಳ ನಿಯಮಗಳಿಗೆ ಅನುಸಾರವಾಗಿ ಯುಎಇಯಲ್ಲಿನ ಝೊಮ್ಯಾಟೊ ಗ್ರಾಹಕರು ಸಂಸ್ಥೆಯ ಆ್ಯಪ್ ಮೂಲಕ ಆಹಾರ ಆರ್ಡರ್ ಮಾಡಿದಲ್ಲಿ ಅದನ್ನು ತಲಾಬಾತ್‌ಗೆ ಮರುನಿರ್ದೇಶಿಸಲಾಗುತ್ತದೆ ಎಂದು ಝೊಮ್ಯಾಟೊ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ.

ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರುವುದಿಲ್ಲ

ಕಂಪೆನಿಯ ಸೇವೆ ಸ್ಥಗಿತಗೊಳ್ಳುವುದರಿಂದ ಕಂಪೆನಿಯ ಹಣಕಾಸು ಹಾಗೂ ಕಾರ್ಯಾಚರಣೆಗಳ ಮೇಲೆ ಯಾವುದೇ ವಸ್ತುನಿಷ್ಟ ಪರಿಣಾಮವನ್ನು ಬೀರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಈ ಹಿಂದೆ ಯುಎಇ ಯಲ್ಲಿ ರೆಸ್ಟೋರೆಂಟ್ ಅನ್ವೇಷಣೆ ಹಾಗೂ ರೆಸ್ಟೋರೆಂಟ್ ಸೇವೆಗಳು ಅದರಂತೆಯೇ ನಡೆಸಲಿದೆ.

ಭಾರತದ ಮೇಲೆ ಹೆಚ್ಚಿನ ಗಮನ

ಈ ಸಂಬಂಧ ಝೊಮ್ಯಾಟೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಪ್ರತಿಕ್ರಿಯಿಸಿ, ಇನ್ನು ಮುಂದಿನ ದಿನಗಳಲ್ಲಿ ಝೊಮ್ಯಾಟೋ ಕಂಪೆನಿ ಭಾರತದ ವ್ಯವಹಾರದ ಬಗ್ಗೆ ಮಾತ್ರ ಕೇಂದ್ರಿಕರಿಸಲಿದೆ. ಅಂತರರಾಷ್ಟ್ರೀಯ ವ್ಯವಹಾರವು ನಮ್ಮ ಸಂಸ್ಥೆಯ ಮಾರ್ಗಸೂಚಿಕೆಗೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.

ಈ ಹಿಂದೆ ಝೊಮ್ಯಾಟೋ ಕಂಪೆನಿಯು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದಲ್ಲಿ ಕೂಡ ತನ್ನ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸಿತ್ತು.

ತಲಾಬತ್ ಸಂಸ್ಥೆಯೊಂದಿಗೆ ಒಪ್ಪಂದ:

ಝೊಮ್ಯಾಟೊ ಯುಎಇ ಮಾರುಕಟ್ಟೆಯನ್ನು 2012 ರಲ್ಲಿ ಪ್ರವೇಶಿಸಿತು. ಇದು 2019 ರಲ್ಲಿ ಸುಮಾರು $172 ಮಿಲಿಯನ್‌ಗೆ ಯುಎಇಯಲ್ಲಿನ ಡೆಲಿವರಿ ಹೀರೋ ಗ್ರೂಪ್‌ಗೆ ತನ್ನ ಆಹಾರ ವಿತರಣಾ ವ್ಯವಹಾರವನ್ನು ಮಾರಾಟ ಮಾಡುವ ಮೂಲಕ ಕಾರ್ಯಾಚರಣೆಯನ್ನು ಕೊನೆಗೊಳಿಸಿತು.ಡೆಲಿವರಿ ಹೀರೋ ಗ್ರೂಪ್ ತನ್ನ ವ್ಯವಹಾರವನ್ನು ಡೆಲಿವರಿ ಹೀರೋನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಲಾಬತ್ ಮಿಡಲ್ ಈಸ್ಟ್ ಇಂಟರ್ನೆಟ್ ಸರ್ವೀಸಸ್ ಕಂಪನಿ ಎಲ್‌ಎಲ್‌ಸಿ ಮೂಲಕ ಖರೀದಿಸಲು ಝೊಮ್ಯಾಟೊದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಝೊಮ್ಯಾಟೋ ಪ್ರೊನಿಂದ ಆದಾಯದಲ್ಲಿ ಗಣನೀಯ ಇಳಿಕೆ:

ಕಂಪೆನಿ ತನ್ನ ಪ್ರೊ ಮತ್ತು ಪ್ರೊ ಪ್ಲಸ್ ಸದಸ್ಯತ್ವವನ್ನು ಸಹ ಸ್ಥಗಿತಗೊಂಡು ಹೊಸದಾದ ಲಾಯಲ್ಟಿ ಪ್ರೋಗ್ರಾಂನಲ್ಲಿ ಕಾರ್ಯನಿರ್ವಹಿಸುತ್ತಿದೆ. ಝೊಮಾಟೊ ಪ್ರೊನಿಂದ ಅದರ ಆದಾಯವು ಗಣನೀಯವಾಗಿ 9 ಲಕ್ಷಕ್ಕೆ ಕುಸಿದಿದೆ.

ಸೆಪ್ಟೆಂಬರ್ 30 ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ಝೊಮ್ಯಾಟೋ ನಿವ್ವಳ ನಷ್ಟವು ₹251 ಕೋಟಿಗಳಾಗಿದ್ದು, ವರ್ಷದ ಹಿಂದೆ ₹430 ಕೋಟಿಗಳಾಗಿತ್ತು. ಸಂಸ್ಥೆಯ ಕಾರ್ಯಾಚರಣೆಗಳ ಆದಾಯವು 62% ಕ್ಕೆ ಏರಿಕೆಯಾಗಿದ್ದು, 1,024 ಕೋಟಿ ರೂ.ಗಳಿಂದ 1,661 ಕೋಟಿ ರೂ ಸಮೀಪಕ್ಕೆ ಹೆಚ್ಚಳವಾಗಿದೆ.

ಐದು ವರ್ಷಗಳ ಕಾಲ ಕಂಪೆನಿಯೊಂದಿಗೆ ಒಡನಾಟ ಹೊಂದಿದ್ದ ಝೊಮ್ಯಾಟೊದ ಹೊಸ ಉಪಕ್ರಮಗಳ ಮುಖ್ಯಸ್ಥ ಮತ್ತು ಮಾಜಿ ಆಹಾರ ವಿತರಣಾ ಮುಖ್ಯಸ್ಥ ರಾಹುಲ್ ಗಂಜೂ ಕಂಪೆನಿಯನ್ನು ಬಿಟ್ಟು ಹೋಗಿದ್ದಾರೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *