ನಟಿ ಮೀನಾಗೆ ಎರಡನೇ ಮದುವೆಗೆ ಪೋಷಕರ ಒತ್ತಾಯ‌ – ಗಂಡನನ್ನು ಕಳೆದುಕೊಂಡ ಬಹುಭಾಷಾ ನಟಿಗೆ ಆಸರೆಯಾಗ್ತಾರಾ ಸ್ನೇಹಿತ..??

ನ್ಯೂಸ್ ಆ್ಯರೋ : ಪತಿಯನ್ನು ಕಳೆದುಕೊಂಡು ಬಣ್ಣದ ಬದುಕಿನಿಂದ ದೂರ ಉಳಿದಿದ್ದ ನಟಿ ಮೀನಾ ಕೊಂಚ ಚೇತರಿಸಿಕೊಂಡು ತಮ್ಮ ಬಂಧು ಬಳಗ ಹಾಗೂ ಸ್ನೇಹಿತರ ಜತೆ ಕಾಲವನ್ನು ಕಳೆಯುತ್ತಿದ್ದಾರೆ. ಅದಲ್ಲದೆ ತಮ್ಮ ಮುಂದಿನ ಜೀವನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೀನಾಗೆ ಸದ್ಯ 46 ವರ್ಷ ವಯಸ್ಸಾಗಿದ್ದು, ಒಬ್ಬಳು ಮಗಳಿದ್ದಾಳೆ. ಮುಂದಿನ ಭವಿಷ್ಯ ಚೆನ್ನಾಗಿರಬೇಕೆಂದು ಎರಡನೇ ಮದುವೆಗೆ ಪೋಷಕರು ಮೀನಾಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಎರಡನೇ ಮದುವೆ ಆಗುವಂತೆ ಕುಟುಂಬಸ್ಥರು ಮೀನಾ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

ಕುಟುಂಬದ ಸ್ನೇಹಿತನನ್ನೇ ಮದುವೆಯಾಗುವಂತೆ ಮೀನಾಗೆ ಪೋಷಕರು ಸಲಹೆ ನೀಡಿದ್ದಾರೆ. ಆತನೊಂದಿಗೆ ಕುಟುಂಬಕ್ಕೆ ಒಳ್ಳೆಯ ಒಡನಾಟವಿದ್ದು, ಸಂಸಾರ ಚೆನ್ನಾಗಿ ಸಾಗುತ್ತದೆ ಎಂಬುದು ಮನೆಯವರ ಅಭಿಪ್ರಾಯವಾಗಿದೆ.

ಸಾಪ್ಟ್‌ವೇರ್ ಎಂಜಿನಿಯರ್‌ ಆಗಿದ್ದ ಬೆಂಗಳೂರಿನ ವಿದ್ಯಾಸಾಗರ್‌ ಅವರನ್ನು 2009ರಲ್ಲಿ ಮೀನಾ ಅವರು ಮದುವೆಯಾಗಿದ್ದರು. ಈ ದಂಪತಿಗೆ 6 ವರ್ಷದ ಒಬ್ಬಳು ಮಗಳಿದ್ದಾಳೆ. ಕೊರೊನಾದಿಂದಾಗಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅವರು ಈ ವರ್ಷ ಜೂನ್ 28 ರಂದು ನಿಧನರಾದರು. ಇದರಿಂದ ಮೀನಾ ಅವರು ಖಿನ್ನತೆಗೆ ಒಳಗಾಗಿ, ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಕೊಂಚ ಚೇತರಿಸಿಕೊಂಡು ಮತ್ತೆ ಬಣ್ಣದ ಬದುಕಿಗೆ ಮರಳಿದ್ದಾರೆ.

ಮೀನಾ ಅವರ ಹಿನ್ನೆಲೆ:

ಮೀನಾ ದಕ್ಷಿಣ ಚಿತ್ರರಂಗದ ಪ್ರಮುಖ ಬಹುಭಾಷಾ ನಟಿ. ಬಾಲ ಕಲಾವಿದೆಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ನಂತರ ನಾಯಕಿಯಾಗಿ ಕೀರ್ತಿ ಪಡೆದರು. ರವಿಚಂದ್ರನ್ ರವರ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಕನ್ನಡದಲ್ಲಿ ಡಾ.ವಿಷ್ಣುವರ್ಧನ್, ಸುದೀಪ್ ಜತೆ ನಾಯಕಿಯಾಗಿ ನಟಿಸಿದ್ದಾರೆ.

ಮೀನಾ ಅವರು ಮಲಯಾಳಂ, ತೆಲುಗು, ತಮಿಳಿನಲ್ಲಿಯೇ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಿನ ಕಾಲದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. 1982ರಿಂದ ನೂರಾರು ಸಿನಿಮಾಗಳಲ್ಲಿ ಮೀನಾ ನಟಿಸಿದ್ದಲ್ಲದೆ, ಟಿವಿ ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *