
ನಿಮ್ಮ ಮೊಬೈಲ್ ನಲ್ಲಿ ಡಾರ್ಕ್ ಮೋಡ್ ನಲ್ಲಿಟ್ಟು ಯೂಸ್ ಮಾಡ್ತೀರಾ…? – ಹಾಗಾದ್ರೆ ಈ ವಿಚಾರ ನಿಮ್ಗೆ ತಿಳಿದಿರಲಿ…
- ಟೆಕ್ ನ್ಯೂಸ್
- November 17, 2023
- No Comment
- 136
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ಮೊಬೈಲ್ ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಆಕರ್ಷಣೆಯಿಂದ ಜನರು ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆ. ಮಧ್ಯರಾತ್ರಿಯವರೆಗೂ ಮೊಬೈಲ್ ಬಳಕೆ ಮಾಡುವ ಅದೆಷ್ಟೋ ಜನರಿದ್ದಾರೆ. ಆದರೆ ಅದರ ಪರಿಣಾಮದ ಬಗ್ಗೆ ನಮಗೆ ಅರಿವಿಲ್ಲದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.
ಸ್ಮಾರ್ಟ್ ಫೋನ್ ಕಂಪೆನಿಗಳು ತಮ್ಮ ಬಳಕೆದಾರರ ಅನುಕೂಲಕ್ಕಾಗಿ ಪ್ರತಿಯೊಂದು ಮೊಬೈಲ್ ನಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಒದಗಿಸುತ್ತದೆ. ಆದರೆ ಅನೇಕ ಜನರು ಈ ವೈಶಿಷ್ಟ್ಯವನ್ನು ಬಳಸುವುದಿಲ್ಲ. ಕೆಲವರಿಗೆ ಈ ವೈಶಿಷ್ಟ್ಯತೆಯ ಬಗ್ಗೆ ತಿಳಿದಿರುವುದಿಲ್ಲ ಕೂಡಾ. ನೀವು ಸ್ಮಾರ್ಟ್ ಫೋನನ್ನು ಡಾರ್ಕ್ ಮೋಡ್ ನಲ್ಲಿಟ್ಟು ಉಪಯೋಗಿಸುತ್ತಿದ್ದೀರಿ ಎಂದರೆ ಅದು ಉತ್ತಮ. ನಿಮ್ಮ ಕಣ್ಣುಗಳ ಸುರಕ್ಷತೆಗಾಗಿ ಈ ಮೋಡ್ ನ್ನು ಒದಗಿಸಲಾಗಿದೆ. ಇದನ್ನು ಪ್ರತಿಯೊಬ್ಬ ಬಳಕೆದಾರನು ಕಡ್ಡಾಯವಾಗಿ ಬಳಸಬೇಕು.
ಡಾರ್ಕ್ ಮೋಡ್ ನಲ್ಲಿಟ್ಟು ಮೊಬೈಲ್ ಬಳಸುವುದರಿಂದ ಆಗುವ ಪ್ರಯೋಜನವೇನು..?
- ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀರುವುದಿಲ್ಲ:
ಸ್ಮಾರ್ಟ್ ಫೋನಲ್ಲಿ ಡಾರ್ಕ್ ಮೋಡನ್ನು ಆನ್ ಮಾಡಿದ ನಂತರ ಡಿಸ್ಪ್ಲೇ ಮೇಲೆ ಗೋಚರಿಸುವ ಎಲ್ಲಾ ವಿಷಯಗಳು ಕಪ್ಪು ಬಣ್ಣದಲ್ಲಿ ಇರುತ್ತದೆ. ಇದು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ. ಡಾರ್ಕ್ ಮೋಡ್ ಸಕ್ರಿಯಗೊಳಿಸಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾಂಟ್ರಾಸ್ಟ್ ನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಮಕ್ಕಳಿಗೆ ಕೂಡಾ ಸ್ಮಾರ್ಟ್ ಫೋನ್ ಬಳಕೆಯಿಂದ ಕನ್ನಡಕವನ್ನು ಬಳಸುವ ಪ್ರಮೇಯ ಎದುರಾಗುವುದಿಲ್ಲ.
- ಸ್ಪಷ್ಟ ಮಾಹಿತಿ
ಡಾರ್ಕ್ ಮೋಡ್ ಆನ್ ಮಾಡಿದ ನಂತರ ಮೊಬೈಲ್ ನಲ್ಲಿ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಯಾವುದೇ ವಿಷಯವನ್ನು ಸುಲಭವಾಗಿ ಓದಬಹುದು.
- ನಿದ್ದೆ ಸಮಸ್ಯೆ
ಡಾರ್ಕ್ ಮೋಡ್ ಡಿಸ್ಪ್ಲೇಯಿಂದ ಹೊರ ಸೂಸುವ ನೀಲಿ ಬೆಳಕನ್ನು ಕಡಿಮೆ ಮಾಡುತ್ತದೆ. ನೀವು ಫೋನನ್ನು ಡಾರ್ಕ್ ಮೋಡ್ ನಲ್ಲಿ ಬಳಸದಿದ್ದರೆ ನಿದ್ದೆಯ ಸಮಸ್ಯೆಯನ್ನು ಕೂಡಾ ಎದುರಿಸಬಹುದು.
- ಕಡಿಮೆ ಬ್ಯಾಟರಿ ಬಳಕೆ
ಜನರು ಇತ್ತೀಚೆಗೆ ಅತಿಯಾಗಿ ಮೊಬೈಲ್ ಬಳಸುತ್ತಾರೆ. ಇದರಿಂದ ಮೊಬೈಲ್ ಬ್ಯಾಟರಿಯ ಮೇಲೂ ಪರಿಣಾಮ ಬೀಳಬಹುದು. ಆದರೆ ಡಾರ್ಕ್ ಮೋಡ್ ಆನ್ ಮಾಡಿದರೆ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುವುದಿಲ್ಲ.