
ಭಾರತದ ಈ ಹಳ್ಳಿಯಲ್ಲಿ ಇಂದಿಗೂ ಮಹಿಳೆಯರು ಬೆತ್ತಲಾಗಿ ಬದುಕುತ್ತಿದ್ದಾರೆ! – ಇದಕ್ಕೆ ಕಾರಣ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ!
- ಲೈಫ್ ಸ್ಟೈಲ್
- November 17, 2023
- No Comment
- 99
ನ್ಯೂಸ್ ಆ್ಯರೋ : ಜಗತ್ತಿನ ಮೇಲೆ ಮನುಷ್ಯ ಹುಟ್ಟಿದಾಗ ಕಾಡಿನಲ್ಲೇ ಬದುಕಿತ್ತಿದ್ದ. ಆಗೆಲ್ಲ ಹೊಟ್ಟೆ ತುಂಬಿಸುವ ಜವಾಬ್ದಾರಿ ಒಂದು ಬಿಟ್ಟು ಬೇರೆ ಯಾವುದೂ ಕೂಡ ಮನುಷ್ಯನಿಗೆ ಬೇಕಿರಲಿಲ್ಲ. ಬಟ್ಟೆ ಇಲ್ಲದೆ ಬೆತ್ತಲೆ ಓಡಾಡುವುದು, ಬದುಕುವುದು ಸಹಜವೇ ಆಗಿತ್ತು. ಆದರೆ ನಾಗರೀಕತೆ ಬೆಳೆದಂತೆ ಅಂಜಿಕೆ, ಮರ್ಯಾದೆ ಎಂಬೆಲ್ಲ ಭಾವಗಳು ಮನುಷ್ಯನನ್ನು ಆವರಿಸಿ ಬಟ್ಟೆ ಧರಿಸುವ ಸಂಸ್ಕೃತಿ ಹುಟ್ಟಿತು. ಇಂದಿಗಂತೂ ಜಗತ್ತಿನ ಯಾವ ಮೂಲೆಯಲ್ಲೂ ಮನುಷ್ಯ ಬಟ್ಟೆಯಿಲ್ಲದೆ ಬದಕಲಾರ ಎಂಬಷ್ಟರ ಮಟ್ಟಿಗೆ ತಂತ್ರಜ್ಞಾನ, ನಾಗರೀಕತೆ ಬೆಳೆದು ನಿಂತಿದೆ. ಆದರೆ ಇಷ್ಟೆಲ್ಲ ಮುಂದುವರಿದ ಜಗತ್ತಿನಲ್ಲೂ ಮನುಷ್ಯ ಬಟ್ಟೆ ಇಲ್ಲದೆ ಬದುಕುತ್ತಾನೆ ಎಂದರೆ ನಂಬುತ್ತೀರಾ?
ಅದರಲ್ಲೂ ಆ ಒಂದು ಗ್ರಾಮದಲ್ಲಿ ಮಹಿಳೆಯರು ಬೆತ್ತಲಾಗಿ ಬದುಕುತ್ತಿದ್ದಾರೆ. ಅಂತಹದ್ದೊಂದು ಅಪರೂಪದ ಗ್ರಾಮ ಇರುವುದೆಲ್ಲಿ? ಬಟ್ಟೆ ಇಲ್ಲದೆ ಅಲ್ಲಿ ಮಹಿಳೆಯರು ಬದುಕುವುದಕ್ಕೆ ಕಾರಣ ಏನು? ಎಂಬ ಪ್ರಶ್ನೆ ನಿಮ್ಮಲ್ಲಿದ್ರೆ ಈ ವರದಿ ಓದಿ.
ಈ ಗ್ರಾಮದ ಮಹಿಳೆಯರು ಬೆತ್ತಲಾಗಿ ಬದುಕುತ್ತಾರೆ?
ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಮಹಿಳೆರು ಜೀವಿಸುವ ವಿಚಿತ್ರ ಸಂಪ್ರದಾಯ ಕಂಡು ಬರುವುದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿದೆ. ಈ ಗ್ರಾಮದಲ್ಲಿ ಮಹಿಳೆಯರು ಪ್ರತಿ ವರ್ಷ 5 ದಿನಗಳ ಕಾಲ ಬೆತ್ತಲೆಯಾಗಿರುತ್ತಾರೆ.
ಪ್ರತಿ ವರ್ಷ ಶ್ರಾವಣ ಮಾಸದ 5 ದಿನಗಳ ಕಾಲ ಈ ಪ್ರದೇಶದ ಎಲ್ಲಾ ಮಹಿಳೆಯರು ಬಟ್ಟೆ ಇಲ್ಲದೆ ಮತ್ತು ಚಿಕ್ಕ ಚುನ್ನಿಗಳನ್ನು ಮಾತ್ರ ಧರಿಸುತ್ತಾರೆ. ಮೇಲಾಗಿ ಈ 5 ದಿನ ಮನೆಯಿಂದ ಅವರು ಹೊರ ಬರುವುದಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಸಮಯದಲ್ಲಿ ಗಂಡ-ಹೆಂಡತಿ ಪರಸ್ಪರ ಮಾತನಾಡುವುದಿಲ್ಲವಂತೆ, ಅಲ್ಲದೆ, ಮುಟ್ಟುವಂತಿಲ್ಲವಂತೆ.
ಪುರುಷರಿಗೂ ಇದೆ ಕಟ್ಟುನಿಟ್ಟಿನ ನಿಯಮ!
ಆದರೆ ಈಗಿನ ಯುವಕರು ಈ ವಿಚಿತ್ರ ಸಂಪ್ರದಾಯದತ್ತ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೆಲವು ಮಹಿಳೆಯರು ಇದನ್ನು ಇಂದಿಗೂ ಅನುಸರಿಸುತ್ತಾರಂತೆ. ಆದರೆ ಕೆಲ ಯುವತಿಯರು ಸಂಪೂರ್ಣ ಬೆತ್ತಲೆಯಾಗಿದರೆ ತೆಳುವಾದ ಬಟ್ಟೆಗಳನ್ನು ಧರಿಸುತ್ತಾರೆ.
ಕೆಲವು ವಯಸ್ಕರು ಸಂಪೂರ್ಣವಾಗಿ ಬೆತ್ತಲಾಗುತ್ತಾರೆ. ಇನ್ನು ಪುರುಷರಿಗೆ ಹೆಚ್ಚು ಕಟ್ಟುನಿಟ್ಟಾದ ನಿಯಮಗಳು ಅನ್ವಯವಾಗುತ್ತವೆ. ಈ ಶ್ರಮಮಾಸದ 5 ದಿನಗಳ ಕಾಲ ಮದ್ಯ ಮತ್ತು ಮಾಂಸವನ್ನು ಮುಟ್ಟಬಾರದು ಎಂದು ಅಲ್ಲಿನ ಜನರು ನಂಬುತ್ತಾರೆ.
ಈ ಸಂಪ್ರದಾಯದ ಹಿನ್ನಲೆ ಗೊತ್ತಾ?
ಇಂತಹದ್ದೊಂದು ವಿಚಿತ್ರ ಸಂಪ್ರದಾಯದ ಹಿಂದೆ ಒಂದು ಕಥೆಯಿದೆ. ಹಿಂದೆ ಪಿಣಿ ಗ್ರಾಮದಲ್ಲಿ ದೆವ್ವಗಳು ನರರಗಳ ರೂಪದಲ್ಲಿ ಓಡಾಡುತ್ತಿದ್ದು, ಗ್ರಾಮದಲ್ಲಿನ ಮಹಿಳೆಯರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದವಂತೆ. ‘ಲಹುವಾ ಘೋಂಡ್’ ದೇವತೆಯು ತಮ್ಮ ರಕ್ಷಣೆಗಾಗಿ ಗ್ರಾಮಕ್ಕೆ ಬಂದು ಆ ರಾಕ್ಷಸರನ್ನು ಕೊಂದಳು ಎಂದು ಅಲ್ಲಿನ ಜನರು ನಂಬುತ್ತಾರೆ.
ಆದ್ದರಿಂದ ಇಲ್ಲಿನ ಮಹಿಳೆಯರು ಪ್ರತಿ ವರ್ಷ ದೇವತೆಯ ಆಗಮನಕ್ಕಾಗಿ ಇಂತಹದ್ದೊಂದು ವಿಚಿತ್ರ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.