ಮಾರಾಟಕ್ಕೆ ಸಜ್ಜಾದ ಪೋಕೋ ಸಿ50​ ಸ್ಮಾರ್ಟ್​ಫೋನ್  ಬೆಲೆ ಎಷ್ಟು.? ಫೀಚರ್ಸ್ ಏನು..? ಇಲ್ಲಿದೆ ಮಾಹಿತಿ

ಮಾರಾಟಕ್ಕೆ ಸಜ್ಜಾದ ಪೋಕೋ ಸಿ50​ ಸ್ಮಾರ್ಟ್​ಫೋನ್ ಬೆಲೆ ಎಷ್ಟು.? ಫೀಚರ್ಸ್ ಏನು..? ಇಲ್ಲಿದೆ ಮಾಹಿತಿ

ನ್ಯೂಸ್ ಆ್ಯರೋ : ಪೋಕೋ ಸಿ50 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಸ್ಮಾರ್ಟ್‌ ಫೋನ್ ಬೆಲೆ ಗಮನಿಸಿದರೆ, ಇದೊಂದು ಬಜೆಟ್‌ ಹಾಗೂ ಎಂಟ್ರಿ ಲೇವಲ್ ಫೋನ್ ಆಗಿದೆ. ವಾಟರ್‌ಡ್ರಾಪ್-ಸ್ಟೈಲ್ ನಾಚ್ ಡಿಸ್‌ಪ್ಲೇ ಮತ್ತು ಮೀಡಿಯಾಟೆಕ್ ಹೆಲಿಯೋ ಎ22 ಪ್ರೊಸೆಸರ್ ಈ ಫೋನ್‌ನಲ್ಲಿದ್ದು, ಈ ಫೋನ್ ಎರಡು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ 2 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ವೇರಿಯಂಟ್ ಫೋನ್ ಬೆಲೆ 6,499 ರೂ. ಇದ್ದರೆ, 3ಜಿಬಿ RAM ಮತ್ತು 32 ಜಿಬಿ ಸೋರೇಜ್ ಫೋನ್ ಬೆಲೆ 7,299 ರೂ. ಇರಲಿದೆ. ಜನವರಿ 10ರಿಂದ ಮಾರುಕಟ್ಟೆಯಲ್ಲಿ ಈ ಫೋನ್ ಮಾರಾಟ ಆರಂಭವಾಗಲಿದ್ದು, ಆನ್‌ಲೈನ್‌ನಲ್ಲಿ ಪ್ಲಿಪ್‌ಕಾರ್ಟ್‌ ಮೂಲಕ ಈ ಫೋನ್ ಖರೀದಿಸಬಹುದು.

ಆಂಡ್ರಾಯ್ಡ್ 12 ಆಧರಿತವಾಗಿರುವ ಈ ಪೋಕೋ ಸಿ50 ಫೋನ್, 65.2 ಇಂಚ್ ಎಚ್‌ಡಿಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, octa-core ಮೀಡಿಯಾ ಟೆಕ್ ಹಿಲಿಯೋ A22 SoC 2, 3232 LPDDR4X RAM 33.am ಬೆಂಬಲಿತ ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಸಿಗಾಗಿ ಕಂಪನಿಯು ಫೋನ್ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದ್ದು, ಫೋನ್ ಜತೆಗೆ ದೊರೆಯುವ ಸೋರೇಜ್ ಸಾಮರ್ಥ್ಯವನ್ನು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 512 ಜಿಬಿವರೆಗೂ ಹೆಚ್ಚಿಸಿಕೊಳ್ಳಬಹುದು.

ಎಂಟ್ರಿಲೇವಲ್ ಫೋನ್ ಆದರೂ ಕಂಪನಿಯು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದ್ದು, ಅಲ್ಲದೇ ಈ ಬ್ಯಾಟರಿ 10 ವ್ಯಾಟ್ ಫಾಸ್ ಚಾರ್ಜಿಂಗ್‌ಗೆ ಸಪೋರ್ಟ್‌ ಮಾಡುತ್ತದೆ. ಫೀಚರ್ ಫೋನ್‌ಗಳಿಂದ ಸ್ಟಾರ್ಟ್‌ ಫೋನ್‌ಗೆ ಅಪ್‌ಗ್ರೇಡ್ ಆಗಲು ಹೊರಟಿರುವವರಿಗೆ ಈ ಫೋನ್ ಅತ್ಯುತ್ತಮ ಆಯ್ಕೆ.

ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದ್ದು, 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *