ಹೆಚ್ಚಿನ ಹೃದಯಾಘಾತ ಚಳಿಗಾಲದಲ್ಲೇ ಸಂಭವಿಸುತ್ತದೆ! ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಇಲ್ಲಿದೆ

ಹೆಚ್ಚಿನ ಹೃದಯಾಘಾತ ಚಳಿಗಾಲದಲ್ಲೇ ಸಂಭವಿಸುತ್ತದೆ! ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಇಲ್ಲಿದೆ

ನ್ಯೂಸ್ ಆ್ಯರೋ : ಚಳಿಗಾಲದ ಶೀಲ ವಾತಾವರಣದಿಂದಾಗಿ ಕೆಮ್ಮು, ಶೀತ, ನೆಗಡಿ, ಜ್ವರ ಸೇರಿದಂತೆ ಹೆಚ್ಚಿನ ಹೃದಯಾಘಾತ ಸಂಭವಿಸುವ ಸಾದ್ಯತೆ ಇರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ದೇಹದೊಂದಿಗೆ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ‌. ನೀವು ಈ ಕೆಳಗಿರುವ ಮಾರ್ಗಗಳನ್ನು ಅನುಸರಿಸಿದರೆ ಖಂಡಿತವಾಗಿ ಚಳಿಗಾಲದಲ್ಲಿ ಉಂಟಾಗಬಹುದಾದ ಅನಿಶ್ಚಿತ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು.

ಕೆಲವೊಂದು ಸಂಶೋಧನೆಗಳ ಪ್ರಕಾರ, ಹೆಚ್ಚು ದಪ್ಪ ಇರುವವರಲ್ಲಿ ಅಥವಾ ದೇಹದಲ್ಲಿ ಹೆಚ್ಚು ಜೊಜ್ಜು ಹೊಂದಿರುವವರಲ್ಲಿ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ಚಳಿಗಾಲದಲ್ಲಿ ವಾತಾವರಣ ಚಳಿ ಅಥವಾ ಶೀತಗಾಳಿ ಹೆಚ್ಚಿರುವ ಕಾರಣ ನಮ್ಮ ರಕ್ತ ನಾಳಗಳು ಕಿರಿದಾಗುತ್ತವೆ. ಇದರಿಂದಾಗಿ ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಬಿಪಿ ಹೆಚ್ಚಾಗುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ಶೀತ ವಾತಾವರಣದಲ್ಲಿ ಬೆಳಗ್ಗಿನ ಸಮಯ ಜನರ ಓಡಾಟ, ಜಾಗಿಂಗ್, ವ್ಯಾಯಾಮಗಳನ್ನು ಕೈಗೊಳ್ಳುವ ಕಾರಣ ಈ ಸಮಯದಲ್ಲೇ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಚಳಿಯಿಂದಾಗಿ ದೇಹದಲ್ಲಿನ ಉಷ್ಣಾಂಶ ಇಳಿಮುಖವಾಗಿ ಸಾಗುತ್ತದೆ. ಇದರಿಂದಾಗಿ ದೇಹದ ಉಷ್ಣತೆಯನ್ನು ಸಮೀಕರಿಸುವಾಗ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂಬು ವೈದ್ಯರ ಅಭಿಪ್ರಾಯ.

ಇನ್ನೂ ಚಳಿಗಾಲದ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗದೇ ಇರುವುದರಿಂದ, ಆಹಾರದಲ್ಲಿ ಕಡಿಮೆ ಉಪ್ಪು ತಿನ್ನುವುದರಿಂದ, ಬಿಸಿಲಿನ ತಾಪವನ್ನು ಹೆಚ್ಚು ಅನುಭವಿಸುವುದರಿಂದ, ಪ್ರತಿನಿತ್ಯ ಸ್ವಲ್ಪ ವ್ಯಾಯಾಮ ಮಾಡುವುದರಿಂದ, ಆಹಾರದ ಮೇಲಿನ ನಿಯಂತ್ರಣದಿಂದ, ದೇಹವನ್ನು ಮುಚ್ಚಿಕೊಳ್ಳುವ ಬೆಚ್ಚಗಿನ ಬಟ್ಟೆಗಳನ್ನು ಹೆಚ್ಚಾಗಿ ಧರಿಸುವುದರಿಂದ ಮತ್ತು ವೃದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ನಡೆಸುವುದರಿಂದಾಗಿ ಚಳಿಗಾಲದ ಅನಿಶ್ಚಿತ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *