ಮೊಬೈಲ್ ಬಳಕೆದಾರರ ಕಿಸೆಗೆ ಬೀಳಲಿದೆ ಕತ್ತರಿ – ಹೊಸ ವರ್ಷದಲ್ಲಿ ಟೆಲಿಕಾಂ ಕಂಪನಿಗಳಿಂದ ಮೊಬೈಲ್‌ ಸೇವಾ ದರ ಹೆಚ್ಚಳ ಪಕ್ಕಾ…!!

ಮೊಬೈಲ್ ಬಳಕೆದಾರರ ಕಿಸೆಗೆ ಬೀಳಲಿದೆ ಕತ್ತರಿ – ಹೊಸ ವರ್ಷದಲ್ಲಿ ಟೆಲಿಕಾಂ ಕಂಪನಿಗಳಿಂದ ಮೊಬೈಲ್‌ ಸೇವಾ ದರ ಹೆಚ್ಚಳ ಪಕ್ಕಾ…!!

ನ್ಯೂಸ್ ಆ್ಯರೋ : ಟೆಲಿಕಾಂ ಕಂಪನಿಗಳು ಈ ವರ್ಷ ಮಧ್ಯಭಾಗದಲ್ಲಿ ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ತಮ್ಮ ಸೇವೆಗಳ ದರಗಳನ್ನು ಏರಿಸುವ ನಿರೀಕ್ಷೆ ಇದ್ದು, ಟೆಲಿಕಾಂ ಕಂಪನಿಗಳ ಆದಾಯವನ್ನು ಏರಿಸುವ ಗುರಿಯ ಹಿನ್ನಲೆಯಲ್ಲಿ ಬೆಲೆ ಹೆಚ್ಚಿಸುವ ನಿರೀಕ್ಷೆ ಇದೆ.

ವರ್ಕ್‌ ಫ್ರಮ್‌ ಹೋಮ್‌, ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ ವೀಕ್ಷಣೆ ಇತ್ಯಾದಿಗಳ ಹೆಚ್ಚಳದ ಪರಿಣಾಮ ಒಟ್ಟಾರೆಯಾಗಿ ಟೆಲಿಕಾಂ ಸೇವೆಗಳ ಬಳಕೆಯಲ್ಲಿ ಏರಿಕೆಯಾಗಿದೆ. ಡೇಟಾ ಬಳಕೆ ವೃದ್ಧಿಸಿದೆ. ಇದೇ ಹೊತ್ತಲ್ಲಿ ದರ ಏರಿಸಿ ಮತ್ತಷ್ಟು ಆದಾಯ ಗಳಿಸಲು ಟೆಲಿಕಾಂ ಕಂಪನಿಗಳು ಉದ್ದೇಶಿಸಿವೆ.

ಈ ವರ್ಷ 5ಜಿ ಸಂಬಂಧಿತ ಆದಾಯದಲ್ಲಿ ಟೆಲಿಕಾಂ ಕಂಪನಿಗಳಿಗೆ ಅಂಥ ನಿರೀಕ್ಷೆ ಇಲ್ಲದಿರುವುದರಿಂದ 4ಜಿ ಸಂಬಂಧಿತ ಆದಾಯ ಏರಿಕೆಯಾಗಲಿದ್ದು, ಹೀಗಾಗಿ 4ಜಿ ಪ್ರಿಪೇಯ್ಡ್ ಸೇವೆಗಳ ದರಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬೋಕರೇಜ್ ಸಂಸ್ಥೆ ಐಐಎಫ್‌ಎಲ್ ತಿಳಿಸಿದೆ. 2024ರಲ್ಲಿ ಸಾರ್ವತ್ರಿಕ ಚುನಾವಣಿಯ ಹೊಸ್ತಿಲಿನಲ್ಲಿರುವಾಗ ಟೆಲಿಕಾಂ ದರ ಏರಿಕೆಯಾದರೆ ಮತದಾರರು ಆಕ್ರೋಶಗೊಳ್ಳುವ ಸಾಧ್ಯತೆಯೂ ಇದೆ ಎಂದು ವರದಿ ತಿಳಿಸಿದೆ.

ಟೆಲಿಕಾಂ ಕಂಪನಿಗಳು 5ಜಿ ಸ್ಪೆಕ್ಟ್ರಮ್ ಸಲುವಾಗಿ ವಾರ್ಷಿಕ ಬಹು ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದ್ದು, ಎರಡನೆಯದಾಗಿ 5ಜಿ ಸೇವೆ ಇನ್ನೂ ವ್ಯಾಪಕವಾಗಬೇಕಾಗಿರುವುದರಿಂದ ಸದ್ಯಕ್ಕೆ 4ಜಿ ಮೂಲಕ ಆದಾಯ ನಿರ್ಣಾಯಕವಾಗಿದೆ. ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಕಂಪನಿಗೆ ದರ ಏರಿಕೆ ಆಗಲಿದ್ದು, ರಿಲಯನ್ಸ್ ಜಿಯೊ ಮುಂದಿನ 18-24 ತಿಂಗಳುಗಳಲ್ಲಿ ಐಪಿಒಗೆ ಸಜ್ಜಾಗುತ್ತಿದೆ. ಹೀಗಾಗಿ ಹೆಚ್ಚಿನ ಆದಾಯ ತೋರಿಸಬೇಕಾಗಿದೆ. ವೊಡಾಫೋನ್ ಐಡಿಯಾ ತನ್ನ ಸಾಲದ ಬಾಕಿ ತೀರಿಸಬೇಕಾಗಿದೆ.

ಈಗಿರುವ ಅಗ್ಗದ ಪ್ರಿಪೇಯ್ಡ್ ಪ್ಲಾನ್:

ಪ್ರಸ್ತುತ ಏರ್‌ಟೆಲ್‌ನಿಂದ 155 ರೂ, 121 ರೂ, 179 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಇದೆ. ರಿಲಯನ್ಸ್ ಜಿಯೊದಿಂದ 155 ರೂ. 209 ರೂ.ಗಳ ಪ್ಲಾನ್ ಇದೆ.

ಜಿಯೊ, ಏರ್‌ಟೆಲ್ ಬಂಡವಾಳ ವೆಚ್ಚ ಹೆಚ್ಚಳ:

2023ರಲ್ಲಿ ರಿಲಯನ್ಸ್ ಜಿಯೊ ಮತ್ತು ಏರ್‌ಟಿಲ್‌ನ ಬಂಡವಾಳ ವೆಚ್ಚದಲ್ಲಿ ಏರಿಕೆಯಾಗಲಿದೆ. ಉಭಯ ಕಂಪನಿಗಳು ತಮ್ಮ 5ಜಿ ನೆಟ್ ವರ್ಕ್ ಜಾರಿಯ ಸಲುವಾಗಿ ಭಾರಿ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ. ಏರ್‌ಟೆಲ್ 58,000 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *