ಸ್ವಾತಂತ್ರ್ಯೋತ್ಸವ ಕೊಡುಗೆ ಪ್ರಕಟಿಸಿದ ರಿಲಯನ್ಸ್ ಜಿಯೋ – ಭರ್ಜರಿ ಕೊಡುಗೆ ಲಭ್ಯ, ಏನೆಲ್ಲಾ ಆಫರ್ಸ್ ಇದೆ ಗೊತ್ತಾ?

ಸ್ವಾತಂತ್ರ್ಯೋತ್ಸವ ಕೊಡುಗೆ ಪ್ರಕಟಿಸಿದ ರಿಲಯನ್ಸ್ ಜಿಯೋ – ಭರ್ಜರಿ ಕೊಡುಗೆ ಲಭ್ಯ, ಏನೆಲ್ಲಾ ಆಫರ್ಸ್ ಇದೆ ಗೊತ್ತಾ?

ನ್ಯೂಸ್ ಆ್ಯರೋ‌ : ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟಿಂಗ್ ಕಂಪೆನಿ ರಿಲಯನ್ಸ್ ಜಿಯೋ ಸ್ವಾಂತ್ರ್ಯೋತ್ಸವಕ್ಕೆ ಇನ್ನಷ್ಟು ಮೆರಗು ನೀಡಲು ಕೊಡುಗೆಯೊಂದನ್ನು ಘೋಷಿಸಿದೆ. ಇಂಡಿಪೆಂಡೆನ್ಸ್ ಡೇ 2023 ಆಫರ್ ಹೆಸರಿನ ಈ ಕೊಡುಗೆ 5ಜಿ ಬಳಸುವ ಗ್ರಾಹಕರಿಗಾಗಿ ಪ್ರಕಟಿಸಲಾಗಿದೆ.

ಏನೆಲ್ಲಾ ಕೊಡುಗೆ?

ಇದು ವಾರ್ಷಿಕ ಪ್ಲ್ಯಾನ್ ಆಗಿದ್ದು, 2,999 ರೂ. ರೀಚಾರ್ಜ್ ಮಾಡಿದರೆ ಪ್ರತಿ ದಿನ 2.5 ಜಿಬಿ ಡೇಟಾ ಸಿಗುತ್ತದೆ. ಅನಿಯಂತ್ರಿತ ಧ್ವನಿ ಕರೆ ಉಚಿತ. ಅಲ್ಲದೆ ದಿನಕ್ಕೆ 100 ಎಸ್.ಎಂ.ಎಸ್. ಇದೆ. ಅಲ್ಲದೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಯನ್ನು ಉಚಿತವಾಗಿ ಪಡೆಯಬಹುದು.

ಅಲ್ಲದೆ ಸ್ವಿಗ್ಗಿ ಆ್ಯಪ್ ನಲ್ಲಿ 249 ರೂ.ಗಿಂತ ಹೆಚ್ಚಿನ ಮೌಲ್ಯದ ಆರ್ಡರ್ ಮಾಡಿದರೆ 100 ರೂ. ರಿಯಾಯಿತಿ ಸಿಗಲಿದೆ. ಯಾತ್ರಾ ಆ್ಯಪ್ ಮೂಲಕ ವಿಮಾನ ಟಿಕೆಟ್ ಬುಕ್ ಮಾಡಿದರೆ 1,500 ರೂ. ರಿಯಾಯಿತಿ ಮತ್ತು ಹೊಟೇಲ್ ಬುಕ್ ಮಾಡಿದರೆ ಶೇ. 15 ಅಥವಾ 4 ಸಾವಿರ ರೂ.ವರೆಗೆ ಡಿಸ್ಕೌಂಟ್ ದೊರೆಯಲಿದೆ.

ಜೊತೆಗೆ ಆಜಿಯೋದಲ್ಲಿ 999 ರೂ.ಗಿಂತ ಹೆಚ್ಚು ಮೊತ್ತದ ಬಟ್ಟೆ ಖರೀದಿಸಿದರೆ 200 ರೂ. ಕಡಿತ ಸಿಗಲಿದೆ. ಆದರೆ ಇದು ಆಯ್ದ ಉತ್ಪನ್ನಗಳಿಗೆ ಮಾತ್ರ ಅನ್ವಯ. ಅಲ್ಲದೆ ರಿಲಯನ್ಸ್ ಡಿಜಿಟಲ್ ನಲ್ಲಿ ಕೆಲವು ನಿರ್ದಿಷ್ಟ ಆಡಿಯೋ ಉತ್ತಪನ್ನಗಳು ಮತ್ತು ಗೃಹ ಬಳಕೆಯ ಉಪಕರಣಗಳನ್ನು ಖರೀದಿಸಿದರೆ ಶೇ. 10ರಷ್ಟು ರಿಯಾಯಿತಿಯೂ ಸಿಗಲಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *