ಸ್ಯಾಮ್‍ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಸ್ಯಾಮ್‍ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಫೋನ್ ಮಾರಾಟಕ್ಕೆ ದಿನ ನಿಗದಿ

ಸ್ಯಾಮ್‍ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಸ್ಯಾಮ್‍ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಫೋನ್ ಮಾರಾಟಕ್ಕೆ ದಿನ ನಿಗದಿ

ನ್ಯೂಸ್ ಆ್ಯರೋ‌ : ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಫೋನ್ ಗಳಿಗೆ ಭಾರತ ಸೇರಿದಂತೆ ವಿಶ್ವಾದ್ಯಂತ ಉತ್ತಮ ಬೇಡಿಕೆ ಇದೆ. ದಕ್ಷಿಣ ಕೊರಿಯಾ ಮೂಲದ ಈ ಕಂಪೆನಿ ಆಯಾ ಕಾಲಕ್ಕೆ ವಿಭಿನ್ನ ಮಾದರಿಯ ಫೋನ್ ಬಿಡಿಗಡೆ ಮಾಡಿ ಗ್ರಾಹಕರ ಗಮನ ಸೆಳೆಯುತ್ತಿದೆ. ಇದೀಗ ಬಹು ನಿರೀಕ್ಷಿತ ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಫೋನ್ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.

ಯಾವಾಗ ಮಾರುಕಟ್ಟೆಗೆ?

ಆಗಸ್ಟ್ 18ರಂದು ಈ ಎರಡು ಮಾಡೆಲ್ ಗಳು ಭಾರತದಲ್ಲಿ ಮೊದಲ ಬಾರಿ ಮಾರಾಟವಾಗಲಿದೆ. ಈಗಾಗಲೆ ಮುಂಗಡ ಬುಕ್ಕಿಂಕ್ ಓಪನ್ ಆಗಿದೆ. ಮೊದಲ 28 ಗಂಟೆಗಳಲ್ಲೇ ಭಾರತದಲ್ಲಿ ದಾಖಲೆಯ 1 ಲಕ್ಷದಷ್ಟು ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ.

ಬೆಲೆ ಎಷ್ಟು?

ಗ್ಯಾಲಕ್ಸಿ Z ಫ್ಲಿಪ್ 5ನ 8 ಜಿಬಿ RAM+256 ಜಿಬಿ ಸ್ಟೋರೇಜ್ ಆಯ್ಕೆಗೆ 99,999 ರೂ. ಇದೆ. ಮುಂಗದ ಬುಕ್ಕಿಂಗ್ ಮಾಡಿದವರಿಗೆ 20 ಸಾವಿರ ರೂ ಮೌಲ್ಯದ ಕೊಡುಗೆ ಸಿಗಲಿದೆ. ಅದೇ ರೀತಿ ಗ್ಯಾಲಕ್ಸಿ Z ಫೋಲ್ಡ್ 5ನ 12ಜಿಬಿ RAM+256 ಜಿಬಿ ಸ್ಟೋರೇಜ್ ಆಯ್ಕೆಗೆ 1,54,999 ರೂ. ನಿಗದಿಯಾಗಿದೆ. ಮುಂಗಡ ಬುಕ್ಕಿಂಗ್ ಮಾಡಿದವರು 23 ಸಾವಿರ ರೂ. ಮೌಲ್ಯದ ಕೊಡುಗೆಗೆ ಅರ್ಹರಾಗಿರುತ್ತಾರೆ.

ಗ್ಯಾಲಕ್ಸಿ Z ಫೋಲ್ಡ್ 5 4,400mAh ಬ್ಯಾಟರಿ ಹೊಂದಿದೆ ಮತ್ತು ಹಿಂಬದಿ ಟ್ರಿಪಲ್ ಕ್ಯಾಮರಾ ಸೆಟಪ್ ಹೊಂದಿದೆ. 50 ಮೆಗಾಫಿಕ್ಸಲ್ ವೈಂಡ್ ಆ್ಯಂಗಲ್ ಕ್ಯಾಮರಾ ಇದೆ. ಇನ್ನು ಗ್ಯಾಲಕ್ಸಿ Z ಫ್ಲಿಪ್ 5 ಫೋನ್ 3,700mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಜೊತೆಗೆ 12 ಮೆಗಾ ಫಿಕ್ಸೆಲ್ ಅಲ್ಟ್ರಾ-ವೈಡ್ ಪ್ರೈಮರಿ ಸೆನ್ಸಾರ್, 12 ಮೆಗಾ ಫಿಕ್ಸೆಲ್ ವಯಡ್ ಆ್ಯಂಗಲ್ ಕ್ಯಾಮರಾ ಒಳಗೊಂಡಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *